Smart city ಪಣಜಿ ಜಲಾವೃತ: ಜನರ ಪರದಾಟ; ಒಳಚರಂಡಿ ವ್ಯವಸ್ಥೆ ಬಗ್ಗೆ ಹಲವು ಪ್ರಶ್ನೆ
Team Udayavani, Jun 28, 2023, 4:52 PM IST
ಪಣಜಿ: ಸ್ಮಾರ್ಟ್ ಸಿಟಿ ಪಣಜಿ ನಗರದಲ್ಲಿ ಮಂಗಳವಾರ ರಾತ್ರಿ 7.30 ರಿಂದ 9.30 ರ ವರೆಗೆ ಸುರಿದ ಭಾರೀ ಮಳೆಯು ಸ್ಮಾರ್ಟ್ ಸಿಟಿಯ ಒಳಚರಂಡಿ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಗರದಲ್ಲಿ ಏಟೀನ್ ಜೂನ್ ರಸ್ತೆ ಜಲಾವೃತಗೊಂಡಿದ್ದರಿಂದ ಕೆಲ ಅಂಗಡಿಗಳಿಗೂ ನೀರು ನುಗ್ಗಿದೆ. ಜತೆಗೆ ಸಾಂತಿನೆಜ್ ಪ್ರದೇಶದಲ್ಲಿ ಚರಂಡಿ ತುಂಬಿ ದುರ್ವಾಸನೆ ಹರಡಿದೆ.
ಮೊದಲ ಬಾರಿಗೆ ಎರಡು ಗಂಟೆಗಳ ಕಾಲ ಭಾರೀ ಮಳೆಯಿಂದ ಪಣಜಿ ಜಲಾವೃತವಾಯಿತು. ಹಾಗಾಗಿ ಸ್ಮಾರ್ಟ್ ಸಿಟಿ ವ್ಯಾಪ್ತಿಯ 300 ಮೀಟರ್ ಚರಂಡಿ ವ್ಯವಸ್ಥೆ ಪ್ರಶ್ನಾತೀತವಾಗಿದೆ. ಇಷ್ಟೇ ಅಲ್ಲದೆಯೇ ಏಟೀನ್‍ಜೂನ್ ರಸ್ತೆಯಲ್ಲಿ ಮೊಣಕಾಲುವರೆಗೆ ನೀರು ನಿಂತಿತ್ತು. ದ್ವಿಚಕ್ರ ವಾಹನ ಸವಾರರು ಕೂಡ ಈ ಮಾರ್ಗದಲ್ಲಿ ಪರದಾಡಬೇಕಾಯಿತು. ಅದಲ್ಲದೇ ರಾತ್ರಿ ಮುಚ್ಚಿದ ಕೆಲ ಅಂಗಡಿಗಳು ಬುಧವಾರ ಬೆಳಗ್ಗೆ ಶೆಟರ್ ಮುಚ್ಚಿದ್ದರೂ ನೀರು ಹೋಗಿರುವುದನ್ನು ನೋಡಬಹುದು ಆದರೆ ಅದಕ್ಕೂ ಮುನ್ನ ತೆರೆದಿರುವ ಕೆಲವು ಅಂಗಡಿಗಳು ಜಲಾವೃತಗೊಂಡಿದ್ದರಿಂದ ನೀರು ಖಾಲಿ ಮಾಡಲು ಅಂಗಡಿ ಮಾಲಕರು ಹರಸಾಹಸ ಪಟ್ಟರು.
ಸಾಂತಿನೆಜ್ ಭಾಗದ ರಸ್ತೆಯಲ್ಲಿಯೂ ಮೊಣಕಾಲು ನೀರು ನಿಂತಿತ್ತು. ,ಸಾಂತಿನೆಜ್‍ನಲ್ಲಿನ ಕೊಳಚೆ ನೀರು ಕೊಳಕು ನೀರಿನಿಂದ ತುಂಬಿತ್ತು. ಇದರಿಂದ ದುರ್ವಾಸನೆ ಮತ್ತೊಮ್ಮೆ ಹರಡಿದೆ. ಎರಡು ಗಂಟೆಯಲ್ಲಿ ಸುರಿದ ಮಳೆಯಿಂದ ಪಣಜಿಯಲ್ಲಿ ನಡೆದಿರುವ ಕಾಮಗಾರಿಯಲ್ಲಿನ ಅವ್ಯವಹಾರ ಬಯಲಾಗಿದೆ. ಅಲ್ತಿನೊ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳು ಮಳೆ ನೀರಿನಿಂದ ತುಂಬಿ ಕೊಳಕು, ಕಸ ರಸ್ತೆಯ ಮೇಲೆ ಬಿದ್ದಿವೆ. ಕೆಲ ದ್ವಿಚಕ್ರ ವಾಹನ ಸವಾರರು ರಸ್ತೆಯ ಮೇಲಿದ್ದ ಕಸದ ರಾಶಿಯ ಮೇಲೆ ಸವಾರಿ ನಡೆಸುತ್ತಿದ್ದಾಗ ಜಹಾರಿ ಬಿದ್ದ ಘಟನೆಯೂ ನಡೆದಿದೆ. ಗೋವಾ ರಾಜಧಾನಿ ಪಣಜಿ ನಗರ ಜಲಾವೃತಗೊಂಡ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ವೈರಲ್ ಆಗಿವೆ.
ಬುಧವಾರ ಬೆಳಗ್ಗೆಯಿಂದಲೂ ಪಣಜಿ ಸುತ್ತಮುತ್ತ ಧಾರಾಕಾರ ಮಳೆ ಮುಂದುವರೆದಿದೆ. ಇದರಿಂದಾಗಿ ಪಣಜಿಯಲ್ಲಿ ಕೆಲ ರಸ್ತೆಗಳು ಜಲಾವೃತಗೊಂಡಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Final Verdict: ಬುಲ್ಡೋಜರ್ ನ್ಯಾಯ ಒಪ್ಪಲು ಅಸಾಧ್ಯ: ಸಿಜೆಐ ಚಂದ್ರಚೂಡ್ ಅಂತಿಮ ತೀರ್ಪು
ISRO; ಶೀಘ್ರ ದೇಸಿ ನ್ಯಾವಿಗೇಶನ್ ವ್ಯವಸ್ಥೆ ಜಾರಿ
Congress guarantees; ಕರ್ನಾಟಕಕ್ಕೆ ಬಂದು ಯಶಸ್ಸು ನೋಡಿ: ಮಹಾ ಬಿಜೆಪಿಗೆ ಡಿಕೆಶಿ ಚಾಟಿ
Kejriwal ಮನೆಯಲ್ಲಿ 100 ಎಸಿ, 73 ಲಕ್ಷದ ಟಿವಿ: ಬಿಜೆಪಿ ಟೀಕೆ
Ayodhya; ಕಾರ್ಮಿಕರ ಕೊರತೆ: ಮಂದಿರ ನಿರ್ಮಾಣ 3 ತಿಂಗಳು ವಿಳಂಬ
MUST WATCH
ಹೊಸ ಸೇರ್ಪಡೆ
Final Verdict: ಬುಲ್ಡೋಜರ್ ನ್ಯಾಯ ಒಪ್ಪಲು ಅಸಾಧ್ಯ: ಸಿಜೆಐ ಚಂದ್ರಚೂಡ್ ಅಂತಿಮ ತೀರ್ಪು
BGT: ಭಾರತ ವಿರುದ್ದದ ಮೊದಲ ಟೆಸ್ಟ್ ಗೆ ಆಸೀಸ್ ತಂಡ ಪ್ರಕಟ; ಒಂದು ಅಚ್ಚರಿಯ ಆಯ್ಕೆ
Kambala: ಪಿಲಿಕುಳ ಜೋಡುಕರೆಯಲ್ಲಿ ಮತ್ತೆ ಮೊಳಗಲಿದೆ ಕಹಳೆಗಳ ಸದ್ದು!
Covid Scam: ಕೋವಿಡ್ ಅಕ್ರಮ ವರದಿಯಿಂದ ಏನೂ ಆಗದು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
Waqf Notice: ವಕ್ಫ್ ಬೋರ್ಡ್ ರದ್ದತಿಗೆ ಪಕ್ಷಭೇದ ಮರೆತು ಶ್ರಮಿಸಿ: ಪಲಿಮಾರು ಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.