ಪಿರಿಯಾಪಟ್ಟಣ: ಮುಸುಕಿನ ಜೋಳಕ್ಕೆ ಸೈನಿಕ ಹುಳುಗಳ ಕಾಟ… ಸಂಕಷ್ಟದಲ್ಲಿ ರೈತ

ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ

Team Udayavani, Jun 28, 2023, 5:51 PM IST

ಪಿರಿಯಾಪಟ್ಟಣ: ಮುಸುಕಿನ ಜೋಳಕ್ಕೆ ಸೈನಿಕ ಹುಳುಕಾಟ… ಸಂಕಷ್ಟದಲ್ಲಿ ರೈತ

ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ಮುಂಗಾರಿನಲ್ಲಿ ಬಿತ್ತನೆಗೊಂಡಿರುವ ಮುಸುಕಿನ ಜೋಳದ ಬೆಳೆಯನ್ನು ಕೀಟಬಾಧೆ (ಸೈನಿಕ ಹುಳು) ಕಾಡುತ್ತಿದ್ದು, ಉತ್ತಮ ಫಸಲು ಹಾಗೂ ಇಳುವರಿ ನಿರೀಕ್ಷೆಯಲ್ಲಿದ್ದ ರೈತ ಧಿಕ್ಕು ತೋಚದೆ ಕಂಗಾಲಾಗಿದ್ದಾನೆ.

ಕಳೆದ ಮೇ ತಿಂಗಳ ಆರಂಭದಲ್ಲಿ ಮಾನ್ಸೂನ್ ಮಳೆ ಆರಂಭಕ್ಕೂ ಮೊದಲು ಅಂದರೆ ಭರಣಿ ಮಳೆಗೆ ತಾಲ್ಲೂಕಿನಾದ್ಯಂತ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬಿತ್ತನೆ ಮಾಡಲಾಗಿದೆ. ಮುಸುಕಿನ ಜೋಳಕ್ಕೆ ಆರಂಭದಲ್ಲಿ ಮಳೆಯ ಕೊರತೆ ಕಾಡುತ್ತಿದರುವುದು ಮಾತ್ರವಲ್ಲದೆ ಸೈನಿಕ ಹುಳುವಿನ ಕಾಟ ಹೆಚ್ಚಾಗಿರುವುದು ರೈತರನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಜೋಳ ಬಿತ್ತನೆ ಮಾಡಿ ಈಗಾಗಲೇ 50ರಿಂದ 60 ದಿನಗಳು ಕಳೆದಿರುವ ಮುಸುಕಿನ ಜೋಳ ಫಸಲು ಕಚ್ಚುವ ಹಂತದಲ್ಲಿರುವಾಗ ಸೈನಿಕಹುಳುವಿನ ದಾಳಿಗೆ ಸಿಲುಕಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಈಗಾಗಲೇ ಮುಸುಕಿನ ಜೋಳ ತೆನೆ ಮೂಡುವ ಹಂತದಲ್ಲಿದ್ದು, ಈಹಂತದಲ್ಲಿ ಸೈನಿಕ ಹುಳುಗಳು ಬೆಳೆಗೆ ಲಗ್ಗೆಇಟ್ಟಿವೆ. ಹಗಲಿನಲ್ಲಿ ಸುಳಿ ಹಾಗೂ ಬುಡದ ಮಣ್ಣಿನ ಒಳಭಾಗ ಸೇರಿಕೊಳ್ಳುವ ಹುಳುಗಳು, ರಾತ್ರಿವೇಳೆ ಹೊರಬಂದು ಗರಿಗಳನ್ನು ತಿನ್ನುತ್ತಿವೆ. ಜೊತೆಗೆ ಗರಿಗಳ ಮೇಲೆ ಹಿಕ್ಕೆ ವಿಸರ್ಜಿಸಿ ರೈತರ ನಿದ್ರೆ ಗೆಡಿಸಿವೆ.

ಕೀಟಬಾದೆ ತೀವ್ರಗೊಂಡು ಮುಸುಕಿನಜೋಳದ ಗರಿಗಳು ಹಾಳಾಗಿರುವ ಪರಿಣಾಮ ಬೆಳವಣಿಗೆಯಲ್ಲಿ ಕುಂಠಿತವಾಗಿದ್ದು, ಇದರಿಂದ ಜೋಳದ ತೆನೆ ಹುಲುಸಾಗಿ ಬರುವುದಿಲ್ಲ. ತೆನೆ ಬಂದರೂ ನಿರೀಕ್ಷೆಯಂತೆ ಫಸಲು ಹಿಡಿಯುವುದು ಅನುಮಾನವಾಗಿದೆ ಎಂದು ರೈತ ಹೆಚ್,ಬಿ.ಶಿವರುದ್ರ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕಳೆದ 2ವಾರದಿಂದ ಮೋಡ ಕವಿದ ವಾತಾವರಣ ಹಾಗೂ ಶೀತಮಿಶ್ರಿತ ಗಾಳಿ ಕೀಟಬಾಧೆ ಕಾರಣ ಎನ್ನಲಾಗಿದೆ. ರೈತರು ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ಔಷಧಿ ಅಂಗಡಿಗಳಲ್ಲಿ ಲಭ್ಯವಿರುವ ಕೀಟನಾಶಕಗಳನ್ನು ತಂದುಬೆಳೆಗೆ ಸಿಂಪಡಿಸಿದರೂ ಕೀಟಬಾಧೆ ನಿಯಂತ್ರಣಕ್ಕೆ ಬಂದಿಲ್ಲ. ಕೆಲವರು ಬೆಳೆಗೆ ತಕ್ಷಣ ಕೀಟನಾಶಕ ಸಿಂಪಡಿಸಿದರೆ, ಇನ್ನೂ ಕೆಲವರು ಕೀಟನಾಶಕ ಸಂಪಡಿಸದೆ ಕೈಚೆಲ್ಲಿರುವ ಕಾರಣ ಹುಳುಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಒಂದು ಎಕರೆ ಜಮೀನಿನಲ್ಲಿ ಮುಸುಕಿನಜೋಳ ಬೆಳೆಯಲು ಬಿತ್ತನೆಯಿಂದ ಕಟಾವಿನ ಹಂತದವರೆಗೆ ಸುಮಾರು 8 ರಿಂದ 9 ಸಾವಿರರೂ. ನಿರ್ವಹಣೆ ವೆಚ್ಚತ ಗುಲಲಿದೆ. ಕೀಟಬಾಧೆಗೆ ತುತ್ತಾಗಿರುವ ಮುಸುಕಿನಜೋಳದ ಬೆಳೆ ಜಾನುವಾರುಗಳ ಮೇವಿಗೂ ಬಳಕೆಯಾಗದ ಸ್ಥಿತಿ ತಲುಪಿದ್ದು, ರೈತರು ದಿಕ್ಕು ತೋಚದ ಪರಿಸ್ಥಿತಿಯಲ್ಲಿದ್ದಾರೆ.

ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಮುಸುಕಿನ ಜೋಳ ಮಳೆಯ ತೀವ್ರ ಕೊರತೆಯಿಂದ ಒಣಗಿ ಹೋಗಿರುವುದು, ರೈತರಿಗೆ ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ರೋಗಬಾಧೆ ತಡೆ, ಬೆಳೆ ಪರಿಹಾರಕ್ಕೆ ಕ್ರಮವಹಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಹೇಳೀಕೆಗಳು:
1. ರೈತ ಬೆಳೆದ ಬೆಳೆಗೆ ಕೃಷಿ ಅಧಿಕಾರಿಗಳ ಶಿಫಾರಸು ಹಾಗೂ ಮಾರ್ಗದರ್ಶನ ಅತ್ಯಗತ್ಯ. ಇಲಾಖೆಯ ಅಧಿಕಾರಿಗಳು ಬಿತ್ತನೆಯಿಂದ ಫಸಲಿನ ಹಂತದವರೆಗೂ ರೈತರೊಂದಿಗೆ ಸಂಪರ್ಕದಲ್ಲಿದ್ದು, ಆಗಾಗ್ಗೆ ಜಮೀನಿಗೆ ಭೇಟಿ ನೀಡಿ ಬೆಳೆ ವೀಕ್ಷಿಸಿ ಮಾಹಿತಿ ನೀಡಿದರೆ ಹೆಚ್ಚಿನ ಅನುಕೂಲವಾಗಲಿದೆ. ಜೊತೆಗೆ ರೋಗಬಾಧೆ ನಿಯಂತ್ರಣಕ್ಕೆ ಸೂಕ್ತ ಸಲಹೆ ನೀಡಬೇಕಿದೆ.
– ಹೆಚ್.ಬಿ.ಶಿವರುದ್ರ ಹಿಟ್ನೆಹೆಬ್ಬಾಗಿಲು ರೈತ.,

2.ಪಿರಿಯಾಪಟ್ಟಣ ತಾಲ್ಲೂಕಿನಾದ್ಯಂತ ಬಿತ್ತನೆಗೊಂಡಿರುವ ಮುಸುಕಿನಜೋಳದ ಬೆಳೆ ಈಬಾರಿ ನಿರೀಕ್ಷೆಗೂ ಮೀರಿ ಬೆಳೆದಿದ್ದರೂ ಕೀಟಬಾಧೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೆ ಬದಲು ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿ ಲಭ್ಯವಿರುವ ಇಮಾಮೆಕ್ಸನ್ ಬೆಂಜವೇಟ್ ಎಂಬ ಕೀಟನಾಶಕ ಹಾಗೂ ಅಧಿಕಾರಿಗಳ ಸಲಹೆ ಅನುಸರಿಸಿ ಬೆಳೆಗೆ ಕೀಟನಾಶಕ ಸಿಂಪಡಿಸಿದರೆ ಹುಳುಗಳ ಕಾಟಕ್ಕೆಮುಕ್ತಿನೀಡಬಹುದು.
– ಡಾ.ವೈ.ಪ್ರಸಾದ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ.,

– ಪಿ.ಎನ್.ದೇವೇಗೌಡ ಪಿರಿಯಾಪಟ್ಟಣ

ಟಾಪ್ ನ್ಯೂಸ್

arrested

Belgavi: ಹೊಟೇಲ್‌ನಲ್ಲಿ ಯುವಕನಿಗೆ ಚಾಕು ಇ*ರಿದ ಬಿಎಸ್‌ಎಫ್ ಯೋಧ ಅರೆಸ್ಟ್

DK SHI NEW

Kumaraswamy ರಾಜಕೀಯ ಮಾಡುವುದಕ್ಕಿಂತ 1 ಲಕ್ಷ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಿ:ಡಿಕೆಶಿ

Kanpur Test: ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ

Kanpur Test: ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ

Bantwala1

Bantwala: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಮೂವರಿಗೆ ಗಾಯ

siddanna-2

MUDA ; ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಇಡಿ

1-tt

1984 Anti Sikh Roits; ದೆಹಲಿ ಹೈಕೋರ್ಟ್ ಮೊರೆ ಹೋದ ಜಗದೀಶ್ ಟೈಟ್ಲರ್

1-isrelis

Sanskrit ಅಭ್ಯಾಸಕ್ಕೆ ಕಾಫಿನಾಡಿಗೆ ಆಗಮಿಸಿರುವ ಇಸ್ರೇಲ್‌ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

Belgavi: ಹೊಟೇಲ್‌ನಲ್ಲಿ ಯುವಕನಿಗೆ ಚಾಕು ಇ*ರಿದ ಬಿಎಸ್‌ಎಫ್ ಯೋಧ ಅರೆಸ್ಟ್

DK SHI NEW

Kumaraswamy ರಾಜಕೀಯ ಮಾಡುವುದಕ್ಕಿಂತ 1 ಲಕ್ಷ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಿ:ಡಿಕೆಶಿ

siddanna-2

MUDA ; ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಇಡಿ

1-isrelis

Sanskrit ಅಭ್ಯಾಸಕ್ಕೆ ಕಾಫಿನಾಡಿಗೆ ಆಗಮಿಸಿರುವ ಇಸ್ರೇಲ್‌ ವಿದ್ಯಾರ್ಥಿಗಳು

Bangaluru: ಜಿಗಣಿಯಲ್ಲಿ ನೆಲೆಸಿದ್ದ ಪಾಕ್‌ ಕುಟುಂಬ ಸದಸ್ಯರ ಬಂಧನ, ಮಕ್ಕಳೊಂದಿಗೆ ವಾಸ!

Bangaluru: ಜಿಗಣಿಯಲ್ಲಿ ನೆಲೆಸಿದ್ದ ಪಾಕ್‌ ಕುಟುಂಬ ಸದಸ್ಯರ ಬಂಧನ, ಮಕ್ಕಳೊಂದಿಗೆ ವಾಸ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Brahmavar

Mangaluru: ಅಪರಿಚಿತ ವ್ಯಕ್ತಿ ಸಾವು

man-a

Kundapura: ಬೈಕ್‌-ಬುಲೆಟ್‌ ಢಿಕ್ಕಿ: ಮತ್ತೋರ್ವ ಸಾವು

arrested

Belgavi: ಹೊಟೇಲ್‌ನಲ್ಲಿ ಯುವಕನಿಗೆ ಚಾಕು ಇ*ರಿದ ಬಿಎಸ್‌ಎಫ್ ಯೋಧ ಅರೆಸ್ಟ್

ban

Bailhongal: ಕ್ಷುಲ್ಲಕ ಕಾರಣ; ಕೊಲೆಯಲ್ಲಿ ಅಂತ್ಯ; ಪ್ರಕರಣ ದಾಖಲು

DK SHI NEW

Kumaraswamy ರಾಜಕೀಯ ಮಾಡುವುದಕ್ಕಿಂತ 1 ಲಕ್ಷ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಿ:ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.