Internet: ಮಕ್ಕಳ ಜಾಲತಾಣ ಬಳಕೆಗೆ ಇರಲಿ ಕಡಿವಾಣ

ಅಮೆರಿಕದ ಸರ್ಜನ್‌ ಜನರಲ್‌ ವಿವೇಕ್‌ ಹಲ್ಲೆಗೆರೆ ಮೂರ್ತಿ ಅವರ ವಿಶೇಷ ಅಂಕಣ

Team Udayavani, Jun 29, 2023, 7:27 AM IST

CHILDREN INTERNET

ಅತಿಯಾದರೆ ಅಮೃತ ಕೂಡ ವಿಷವಾಗಬಲ್ಲದು ಎಂಬುದು ಅಕ್ಷರಶಃ ಸತ್ಯ. ಪ್ರಸಕ್ತ ಈ ವಾಕ್ಯ ಜಾಲತಾಣ ಬಳಕೆಗೆ ಹೇಳಿ ಮಾಡಿಸಿದಂತಿದೆ. ನಿನ್ನೆಯಷ್ಟೇ ಅಪರಿಚಿತರಾಗಿದ್ದವರಾರೋ ಮರುದಿನವೇ ಸ್ಟಾರ್‌ ಆಗಿಬಿಡುತ್ತಾರೆ. ಅದು ಜಾಲತಾಣದ ಮೂಲಕ! ಎಷ್ಟೋ  ಪ್ರತಿಭೆಗಳಿಗೆ ಇದೇ ಜಾಲತಾಣ ವೇದಿಕೆ ಕೂಡ ಹೌದು! ಮಗುವೊಂದರ ಸುಂದರ ಗಾಯನಕ್ಕೆ ಲಕ್ಷಾಂತರ ಪ್ರಶಂಸೆಗಳನ್ನ ತಂದುಕೊಡುತ್ತಿರುವುದೂ ಕೂಡ ಇದೇ ಜಾಲತಾಣಗಳು.. ಈ ಜಾಲತಾಣಗಳ ಸಾಧಕ-ಬಾಧಕಗಳ ಬಗ್ಗೆ ಅಮೆರಿಕದ ಸರ್ಜನ್‌ ಜನರಲ್‌ ವಿವೇಕ್‌ ಹಲ್ಲೆಗೆರೆ ಮೂರ್ತಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಇದರಿಂದ ಪಾರಾಗುವ ಸಂಗತಿಗಳ ಬಗ್ಗೆಯೂ ವಿಷದವಾಗಿ ವಿವರಿಸಿದ್ದಾರೆ.

ಅತಿಯಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡುವುದರಿಂದ ಮಕ್ಕಳಲ್ಲಿ ಮಾನಸಿಕ ಸಮಸ್ಯೆ ಹೆಚ್ಚಾಗಬಹುದು. ಹೀಗಾಗಿ ಸಾಮಾಜಿಕ ಮಾಧ್ಯಮಗಳ ಕಪಿಮುಷ್ಟಿಯಿಂದ ಮಕ್ಕಳನ್ನು, ಹದಿಹರೆಯದವರನ್ನು ಕಾಪಾಡುವ ಹೊಣೆಯ ಪರಿಹಾರೋಪಾಯಗಳು ಕಾಣಿಸುತ್ತಿಲ್ಲ. ಜತೆಗೆ ಮಕ್ಕಳಲ್ಲಿ ಸಾಮಾಜಿಕ ಮಾಧ್ಯಮಗಳ ಪರಿಣಾಮದಿಂದಾಗಿ ಖನ್ನತೆ ಮತ್ತು ಆತಂಕವೂ ಹೆಚ್ಚಾಗುತ್ತಿದೆ. ಹೀಗಾಗಿ  ಸಾಮಾಜಿಕ ಜಾಲತಾಣಗಳಿಂದ ಮಕ್ಕಳ ಮೇಲೆ ಅಪಾಯವಾಗುವುದಿಲ್ಲ ಎಂಬ ಮಾತುಗಳನ್ನು ಯಾವುದೇ ಕಾರಣಕ್ಕೂ ನಿರಾಕರಿಸಲು ಸಾಧ್ಯವೇ ಇಲ್ಲ.

ಪ್ರಪಂಚದಲ್ಲಿರುವ 13 ರಿಂದ 17 ವಯಸ್ಸಿನವರಲ್ಲಿ ಶೇ.95 ಮಕ್ಕಳು ಯಾವುದೋ ಒಂದು ರೀತಿಯ ಸಾಮಾಜಿಕ ಜಾಲತಾಣಗಳ ಬಳಕೆದಾರರಾಗಿದ್ದಾರೆ. ಇವರಲ್ಲಿ ಬಹುಪಾಲು ಮಕ್ಕಳು ನಿದ್ರಿಸುವಾಗ ಬಿಟ್ಟು ಮತ್ತೆಲ್ಲ ಸಮಯದಲ್ಲೂ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇನ್ನು 10 ರಿಂದ 19ನೇ ವಯಸ್ಸಿನವರೆಗೂ ಮನುಷ್ಯನ ಮೆದುಳು ಬೆಳವಣಿಗೆ ಹೊಂದುತ್ತಿರುತ್ತದೆ ಮತ್ತದು ನಿರ್ಣಾಯಕ ಘಟ್ಟವೂ  ಆಗಿರುತ್ತದೆ.

ಈ ಸಂದರ್ಭದಲ್ಲೇ ಸವಾಲುಗಳನ್ನು ಸ್ವೀಕರಿ ಸುವಂಥ ಮನೋಭಾವ, ಜಿದ್ದಿಗೆ ಬೀಳುವಂಥ ಮನಃಸ್ಥಿತಿ ಮಕ್ಕಳಲ್ಲಿ ಹಾಗೂ ಯವಕರಲ್ಲಿ ಹೆಚ್ಚಾಗಿರುತ್ತದೆ.  ಜಾಲತಾಣಗಳು ಬೀರುವಂಥ ಪ್ರಭಾವ, ಅವರಲ್ಲಿ ಮೇಲು-ಕೀಳಿನ ಭಾವನೆ, ಎಲ್ಲವನ್ನೂ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವ ಮನಃಸ್ಥಿತಿ (ಉದಾ: ಪಬ್ಲಿಸಿಟಿ ಸಿಕ್ಕ ಕೂಡಲೇ ಸಾಧನೆ ಮಾಡಿದಂಥ ಮನಃಸ್ಥಿತಿ- ಸೋತ ಕೂಡಲೇ ಬದುಕೇ ಮುಗಿಯಿತು ಎನ್ನುವಂತೆ ಭಾವಿಸಿಕೊಳ್ಳುವುದು, ಜೀವನದ ಸಂತೃಪ್ತಿಯೇ ಇಲ್ಲವೆಂಬಂತೆ ವರ್ತಿಸುವುದು)ಯನ್ನು ಹುಟ್ಟುಹಾಕುತ್ತದೆ.

ದಿನದಲ್ಲಿ ಸರಾಸರಿ 3.5 ಗಂಟೆಗಿಂತ ಹೆಚ್ಚು ಸಾಮಾಜಿಕ ಜಾಲತಾಣ ಬಳಕೆ ಮಾಡುವ ಮಕ್ಕಳು ಹಾಗೂ ವಯಸ್ಕರಲ್ಲಿ ಬಹುತೇಕರು ಖನ್ನತೆಗೆ ಜಾರಿರುವ ಸಾಧ್ಯತೆಗಳು ಹೆಚ್ಚು. ಅಷ್ಟೇ ಅಲ್ಲದೇ ಈ ಜಾಲತಾಣಗಳನ್ನು ಹೆಚ್ಚು ಬಳಕೆ ಮಾಡುತ್ತಿರುವವರಲ್ಲಿ ಶಿಸ್ತು ಕಡಿಮೆಯಾಗುತ್ತಿದೆ.

ನಿದ್ರಾಹೀನತೆ, ಆಹಾರ ಸೇವನೆಯ ವ್ಯತ್ಯಯ, ಆಲಸ್ಯತನ, ಅತಿಕಾಯ, ಮಾನಸಿಕ ಕ್ಷೋಭೆಗಳು ಕೂಡ ವರದಿಯಾಗುತ್ತಿವೆ. ಅದರಲ್ಲಿಯೂ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಲ್ಲೇ ಈ ಸಮಸ್ಯೆ ಹೆಚ್ಚು ಕಂಡುಬರುತ್ತಿದೆ. ಇನ್ನು ನಾವು ನಿತ್ಯ ಜಾಲತಾಣ ಗೋಡೆಗಳ ಮೇಲೆ ಓದುತ್ತಿರುವ ಕಂಟೆಂಟ್‌ ಎಷ್ಟೆಲ್ಲ ಪ್ರಭಾವ ಬೀರುತ್ತಿದೆ ಊಹಿಸಿದ್ದೀರಾ? ಈ ಎಲ್ಲ ಸಮಸ್ಯೆಗಳಿಂದ ನಮ್ಮ ಮಕ್ಕಳನ್ನು ಪಾರು ಮಾಡಬೇಕಾದ ಹೊರೆ ನಮ್ಮ ಹೆಗಲ ಮೇಲಿದೆ. ಆದರೆ ಇದು ನಾವು -ನೀವು ಊಹಿಸಿದಷ್ಟು ಸಾಮಾನ್ಯ ಸಮಸ್ಯೆಯಲ್ಲ!  ಇದರ ಪರಿಹಾರಕ್ಕೆ ಸಾಮೂಹಿಕ ಪ್ರಯತ್ನದ ಅಗತ್ಯವಿದೆ.

ತಂತ್ರಜ್ಞಾನ ಸಂಸ್ಥೆಗಳ ಹೊಣೆ ಏನು?

ಮಕ್ಕಳು ಮತ್ತು ಹದಿಹರೆಯದವರ ಮೇಲೆ ಜಾಲತಾಣಗಳು ಬೀರುತ್ತಿರುವ ಪ್ರಭಾವಗಳ ಬಗ್ಗೆ ಸ್ವತಂತ್ರ ಮೌಲ್ಯಮಾಪನಕ್ಕೆ ಅವಕಾಶ ನೀಡುವುದರ ಜತೆಗೆ ಅವುಗಳನ್ನು ಪಾರದರ್ಶಕವಾಗಿ ನಿರ್ವ ಹಿಸುವುದು ಮತ್ತು ವ್ಯತಿರಿಕ್ತ ಪರಿಣಾಮವಿದ್ದಲ್ಲಿ ಕಡಿವಾಣಕ್ಕೆ ಸೂಕ್ತ ಬದಲಾವಣೆಗಳಿಗೆ ತೆರೆದುಕೊಳ್ಳುವುದು ಅಗತ್ಯ. ವೇದಿಕೆಗಳಿಗೆ ಸಂಬಂಧಪಟ್ಟ ನಿರ್ಣಯಗಳಲ್ಲಿ ವೈಜ್ಞಾನಿಕ ಸಮಿತಿಗಳ ಸಲಹೆ ಸೂಚನೆಗಳನ್ನ ಪಡೆಯುವುದು ಕಡ್ಡಾಯವಾಗಿರಲಿ. ಬಳಕೆದಾರರ ಸುರಕ್ಷತೆ ಜಾಲತಾಣ ವೇದಿಕೆ ನಿರ್ಮಾತೃಗಳ ಆದ್ಯತೆಯಾಗಿರಬೇಕು. ಶಿಕ್ಷಿತರು, ಕುಟುಂಬಸ್ಥರು, ತಜ್ಞರ ಸಲಹೆ ಮತ್ತು ದೂರುಗಳನ್ನು ಸ್ವೀಕರಿಸುವಂಥ ಮುಕ್ತ ವ್ಯವಸ್ಥೆಯನ್ನು ರೂಢಿಸಿಕೊಳ್ಳಬೇಕು.

ಪೋಷಕರ ಗಮನವಿರಲೇಬೇಕು

ಜಾಲತಾಣ ಎನ್ನುವುದು ಆಧುನಿಕತೆಯ ಜತೆಗೆ ಬೆಸೆದುಹೋಗಿದೆ. ಈ ಹಂತದಲ್ಲಿ ಮಕ್ಕಳನ್ನು ಅದರಿಂದ ಸಂಪೂರ್ಣ ದೂರವಿಡುವುದು ಕಷ್ಟಸಾಧ್ಯ. ಆದರೆ ಪೋಷಕರು ಅವುಗಳ ಬಗ್ಗೆ ಗಮನಹರಿಸಲು ಸಾಧ್ಯವಿದೆ. ಮಕ್ಕಳಿಗೆ ನಿಗದಿತ ಸಮಯದಲ್ಲಿ ಮಾತ್ರ

ಜಾಲತಾಣ ಬಳಕೆಗೆ ಅವಕಾಶ ಕೊಡುವುದು, ಮನೋರಂಜನೆಗೆ ಅಗತ್ಯವಾದಷ್ಟು ಮಾತ್ರ ಜಾಲತಾಣ ಬಳಕೆಗೆ ಸಮ್ಮತಿಸುವುದು ಮಾಡಬಹುದು. ಇದರ ಜತೆಗೆ ಮಕ್ಕಳಿಗೆ ಸಮಯ ಕೊಡಿ! ನಿದ್ರಾ ಸಮಯಕ್ಕೂ ಕನಿಷ್ಠ ಒಂದು ಗಂಟೆ ಮುಂಚೆಯಾದರೂ ಈ ಟೆಕ್‌ಜೋನ್‌ ( ಮೊಬೈಲ್‌, ಕಂಪ್ಯೂಟರ್‌, ಟಿವಿಗಳ ಬಳಕೆ) ನಿಂದ ದೂರವಿರಿ. ಕುಟುಂಬಸ್ಥರ ಭೇಟಿ, ಸ್ನೇಹಿತರ ಜತೆಗೆ ಆನ್‌ಲೈನ್‌ ಚಾಟಿಂಗ್‌ಗಿಂತ ಮುಖತಃ ಭೇಟಿಗೆ ಪ್ರಾಶಸ್ತ್ಯ ನೀಡಿ.

ಮಕ್ಕಳಿಗೆ ಜಾಲತಾಣ ಬಳಕೆಯನ್ನು ಯಾವ ಹಂತದಲ್ಲಿ ಮಾಡಬೇಕು? ಹೇಗೆ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು, ಅದರ ಸಾಧಕ-ಬಾಧಕಗಳೇನು ಎಂಬುದನ್ನು ಕಲಿಸಿ. ಒಂದು ವೇಳೆ ನಿಮ್ಮ ಮಗು ಜಾಲತಾಣದಿಂದ ಯಾವುದೋ ಸಂಚಿಗೋ, ತೊಂದರೆಗೋ ಸಿಲುಕಿದೆ ಎಂದಾದರೆ ಅದರ ಬಗ್ಗೆ ನೇರ ತೀರ್ಮಾನಕ್ಕೆ ಬರದೇ, ಹೀಯಾಳಿಸದೇ ಪೊಲೀಸರ ಸಹಾಯ ಪಡೆದು ಸಮಸ್ಯೆ ಬಗೆಹರಿಸಿ.. ಆಗ ಅದರ ಅಗಾಧತೆಯ ಅರಿವು ನಿಮ್ಮ ಮಕ್ಕಳಿಗಾಗುತ್ತದೆ. ಇತರ ಮಕ್ಕಳ ಪೋಷಕರ ಜತೆಗೆ ಜಾಲತಾಣ ಬಳಕೆಯನ್ನು ಸಾಧ್ಯವಾದಷ್ಟು ಆರೋಗ್ಯಕರವಾಗಿಸುವ ನಿಟ್ಟಿನಲ್ಲಿ ಯಾವೆಲ್ಲ ನಿಯಮಗಳನ್ನು ಅನುಸರಿಸಬಹುದು ಎಂಬುದರ ಬಗ್ಗೆ ಆರೋಗ್ಯಕರ ಚರ್ಚೆ, ಸಲಹೆ ಸೂಚನೆಗಳನ್ನ ಪಡೆಯಿರಿ.

ನೀವೇ ಬಳಕೆದಾರರಾಗಿದ್ದರೆ ?

ಜಾಲತಾಣ ಬಳಕೆ ಒಂದು ವ್ಯಸನದಂತೆ! ಏಕಾಏಕಿ ಅದರಿಂದ ಹೊರಬರಲು ಸಾಧ್ಯವಿಲ್ಲ. ನೀವೇ ಜಾಲತಾಣಕ್ಕೆ ಬಹಳ ಅಂಟಿಕೊಂಡಿದ್ದೀರಾ ಅಥವಾ ನಿಮ್ಮ ಪರಿಚಿತರೇ ತೀರಾ ಅನಿಸುವಷ್ಟು ಜಾಲತಾಣಕ್ಕೆ ಜೋತು ಬಿದ್ದು ಸಮಸ್ಯೆಗೆ ಸಿಲುಕಿದ್ದಾರೆ ಎನ್ನುವುದಾದರೆ, ಈ ಸಮಸ್ಯೆಯಿಂದ ಹೊರಬರಲು ಒಂದಷ್ಟು ಸ್ವಯಂಪ್ರೇರಿತ ಪ್ರಯತ್ನಗಳಂತೂ ಬೇಕೇ ಬೇಕು.. ಮೊದಲಾಗಿ ಜಾಲತಾಣದಿಂದ ವೈಯಕ್ತಿಕವಾಗಿ, ಮಾನಸಿಕವಾಗಿ ನಿಮಗೆ ತೊಂದರೆ ಆಗಿದ್ದರೆ ಆತ್ಮೀಯರ ಬಳಿ ಆ ವಿಚಾರವನ್ನು ಹಂಚಿಕೊಳ್ಳಿ.

ಸಲಹೆಗಳನ್ನು ಪಡೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಸಾಧ್ಯವಾದಷ್ಟು ಡಿಜಿಟಲ್‌ ಸಾಧನಗಳ ಬಳಕೆಯನ್ನು ನಿಯಂತ್ರಿಸಿ ಬೇರೆ ಚಟುವಟಿಕೆಗಳತ್ತ ಗಮನಹರಿಸಿ. ಸಾಕಷ್ಟು ನಿದ್ದೆ ಮಾಡಿ, ಸಂಬಂಧಗಳನ್ನು ಆನ್‌ಲೈನ್‌ ಜಗತ್ತಿನ ಹೊರಗೂ ನಿರ್ವ ಹಿಸಬಹುದೆಂಬುದು ನೆನಪಿರಲಿ.. ಜಾಲತಾಣಗಳನ್ನು ಬಳಸುವಾಗ ಅದರ ಸುರಕ್ಷತೆಯ ಬಗ್ಗೆ ಸಾಧ್ಯವಾದಷ್ಟು ಹೆಚ್ಚಿನ ಅಂಶಗಳನ್ನು ಅರಿತುಕೊಳ್ಳಿ, ನೀವೆ ಒಂದು ಟೈಮಿಂಗ್‌ ಸೆಟ್‌ ಮಾಡಿಕೊಳ್ಳಬೇಕು. ಎಷ್ಟು ಸಮಯದವರೆಗೆ ಮಾತ್ರ ಜಾಲತಾಣ ಬಳಕೆ ಮಾಡಬೇಕು, ಮಾಡಬಾರದು ಎಂಬುದರ ಬಗ್ಗೆ.

ಜತೆಗೆ ಅನಗತ್ಯವಾದ ಕಂಟೆಂಟ್‌ ಮತ್ತು ಕಾಂಟ್ಯಾಕ್ಟ್ಗಳನ್ನ ಬ್ಲಾಕ್‌ ಮಾಡುವುದು ಉತ್ತಮ. ಮತ್ತೂಂದು ಪ್ರಮುಖ ವಿಚಾರವೆಂದರೆ ಜಾಲತಾಣಗಳಲ್ಲಿ ನಾವು ಏನನ್ನು ಹಂಚಿಕೊಳ್ಳುತ್ತಿದ್ದೇವೆ ? ಅವೆಷ್ಟು ಸೂಕ್ಷ್ಮ ಮಾಹಿತಿಗಳು ? ನಮ್ಮ ವೈಯಕ್ತಿಕ ವಿಚಾರಗಳನ್ನ ಬಹಿರಂಗ ಪಡಿಸುವ ಅಗತ್ಯವಿದೆಯೇ? ಇಲ್ಲವೇ ಎಂಬುದನ್ನು ಪರಾಮರ್ಶಿಸಿ. ಕಡೆಯದಾಗಿ, ಜಾಲ ತಾಣಗಳ ಮೂಲಕ ಮತ್ತೂಬ್ಬರನ್ನು ಹಿಂಸಿಸುವುದು, ನಿಂದಿಸುವುದು, ಅವಹೇಳನ ಮಾಡುವುದು ಹಾಗೂ ದೌರ್ಜನ್ಯವೆಸಗುವಂಥ ಕ್ರೌರ್ಯಗಳಿಗೆ ಮುಂದಾಗಬೇಡಿ ಹಾಗೂ ಇಂಥ ಕ್ರೌರ್ಯಗಳು ನಿಮಗಾಗಲಿ ಅಥವಾ ಯಾರಿಗೇ ಆದರೂ ಅವುಗಳನ್ನು ಸಹಿಸಲೂ ಬೇಡಿ.

ಪೋಷಕರು ನೆನಪಿಡಬೇಕಾದ ಸಂಗತಿಗಳು

1 ಟೆಕ್‌ ಫ್ರೀ ಝೋನ್‌ ರೂಪಿಸಿ ಸಾಧ್ಯವಾದಷ್ಟು ಮನೆಯಲ್ಲಿ ತಂತ್ರಜ್ಞಾನ ರಹಿತ ಸ್ಥಳವೊಂದನ್ನು ರೂಪಿಸಿ. ಅಲ್ಲಿ ನೀವಾಗಲಿ ಅಥವಾ ನಿಮ್ಮ ಮಕ್ಕಳಾಗಲಿ ಯಾವುದೇ ಕಾರಣಕ್ಕೂ ಸ್ಮಾರ್ಟ್‌ ಫೋನ್‌ ಸೇರಿದಂತೆ ಯಾವುದೇ ರೀತಿಯ ತಂತ್ರಜ್ಞಾನ ವಸ್ತುಗಳನ್ನು ಬಳಕೆ ಮಾಡಬಾರದು. ಪರಸ್ಪರ ಮಾತನಾಡಿ, ಮಲಗುವಾಗ ಸ್ಮಾರ್ಟ್‌ಫೋನ್‌ ಅನ್ನು ಎತ್ತಿಡಿ.

2 ನೀವೇ ಮಾದರಿಯಾಗಿ ಮಕ್ಕಳಿಗೆ ಅಪ್ಪ-ಅಮ್ಮನೇ ಮಾದರಿ. ಹೀಗಾಗಿ ನೀವು ಸ್ಮಾರ್ಟ್‌ ಫೋನ್‌ ಅನ್ನು ದೂರ ಮಾಡಿದಷ್ಟು, ಮಕ್ಕಳೂ ದೂರ ಮಾಡುವುದನ್ನು ಕಲಿಯುತ್ತಾರೆ.

3  ತಡವಾಗಿ ಸ್ಮಾರ್ಟ್‌ ಫೋನ್‌ ಕೊಡಿ ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಸ್ಮಾರ್ಟ್‌ ಫೋನ್‌ ಸಿಗುವಂತೆ ಮಾಡಬೇಕು ಎಂಬುದರ ಬಗ್ಗೆ ನೀವೇ ನಿರ್ಧರಿಸಿ. ಒಂದಷ್ಟು ತಡವಾಗಿ ಮಕ್ಕಳ ಕೈಗೆ ಸಿಕ್ಕರೆ ಒಳಿತು.

4 ಮಲಗುವಾಗ ಸ್ವಿಚ್‌ ಆಫ್ ಮಾಡಲು ಹೇಳಿ ಹಾಸಿಗೆಯ ಮೇಲೆ ಯಾವುದೇ ಕಾರಣಕ್ಕೂ ಸ್ಮಾರ್ಟ್‌ ಫೋನ್‌ ಬಳಕೆ ಮಾಡದಂತೆ ಹೇಳಿ. ಈ ಬಗ್ಗೆ ಕಠಿನ ನಿಯಮವೊಂದನ್ನು ರೂಪಿಸಿ.

ಸರಕಾರದ ಪಾತ್ರ ಪ್ರಮುಖ

ಸರಕಾರಗಳು ಜಾಲತಾಣ ಸಂಸ್ಥೆಗಳ ಜತೆಗಿನ ಸಂವಹನವನ್ನು ವೃದ್ಧಿಸಿಕೊಂಡು, ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ  ಸಾರ್ವಜನಿಕ ಆರೋಗ್ಯ ತಜ್ಞರ ಅಭಿಪ್ರಾಯ, ಶಿಕ್ಷಣ ತಜ್ಞರು ಹಾಗೂ ತಂತ್ರಜ್ಞಾನ ಸಂಸ್ಥೆಗಳ ಜತೆಗೆ ಮಾತುಕತೆ, ನೀತಿ ನಿರೂಪಣೆ ಅಗತ್ಯ. ಮಕ್ಕಳು ಜಾಲತಾಣಗಳನ್ನ ಬಳಕೆ ಮಾಡುವುದಾದರೆ ಅವರ ಸುರಕ್ಷತೆಗೆ ಅಗತ್ಯವಾದಂಥ ಕ್ರಮಗಳನ್ನ ಖುದ್ದು ಜಾಲತಾಣ ವೇದಿಕೆಗಳು ತೆಗೆದುಕೊಳ್ಳುವುದನ್ನು ಸರಕಾರ ಖಾತರಿಪಡಿಸಿಕೊಳ್ಳಬೇಕು. ಮುಖ್ಯವಾಗಿ ಬಳಕೆದಾರನಿಗೆ ತಲುಪುತ್ತಿರುವ ವಿಷಯ ವಸ್ತುವಿನ ಬಗ್ಗೆ ಗಮನಹರಿಸುವುದು ಅಗತ್ಯ. ಪ್ರತೀ ಜಾಲತಾಣ ವೇದಿಕೆ ಬಳಕೆಯಿಂದಾಗುತ್ತಿರುವ ಪರಿಣಾಮಗಳ ಕುರಿತ ವರದಿಯನ್ನು ಸಮಯಕ್ಕೆ ಅನುಸಾರವಾಗಿ ಪರಿಶೀಲಿಸಬೇಕು ಜತೆಗೆ ಶಾಲಾ ಪಠ್ಯಕ್ರಮಗಳಲ್ಲೇ ಡಿಜಿಟಲ್‌ ಮಾಧ್ಯಮ ಸಾಕ್ಷರತೆಯಕುರಿತು ತಿಳಿವಳಿಕೆ, ಅಭಿವೃದ್ಧಿ, ಅನುಷ್ಠಾನಕ್ಕೆ ಉತ್ತೇಜಿಸಬೇಕು.

ವಿವೇಕ್‌ ಹಲ್ಲೆಗೆರೆ ಮೂರ್ತಿ, ಅಮೆರಿಕದ ಸರ್ಜನ್‌ ಜನರಲ್‌.

ಟಾಪ್ ನ್ಯೂಸ್

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.