ಜಿಪ್ ಲೈನ್ ನ ರೋಪ್ ತುಂಡಾಗಿ 40 ಅಡಿ ಆಳಕ್ಕೆ ಬಿದ್ದ ಬಾಲಕ… ಭಯಾನಕ ವಿಡಿಯೋ ವೈರಲ್
Team Udayavani, Jun 30, 2023, 7:45 PM IST
ಶಾಲೆಗೆ ರಜೆ ಸಿಕ್ಕ ಕೂಡಲೇ ನಮ್ಮನೆಲ್ಲಾದರೂ ಆಟವಾಡಲು ಪಾರ್ಕ್ ಗೆ ಕರೆದುಕೊಂಡು ಹೋಗಿ ಎಂದು ಮಕ್ಕಳು ಹೆತ್ತವರಲ್ಲಿ ಕಿರಿ ಕಿರಿ ಮಾಡುವುದುದುಂಟು… ಅದಲ್ಲದೆ ಪೋಷಕರೇ ವಾರವಿಡೀ ಕೆಲಸದ ಜಂಜಾಟ ವೀಕೆಂಡ್ ನಲ್ಲಿ ಎಲ್ಲಿಗಾದರೂ ತಿರುಗಾಡಿ ಬರುವ ಎಂದು ಮಕ್ಕಳನ್ನು ಕರೆದುಕೊಂಡು ಹೋಗಿ ಬರುವುದು ಉಂಟು ಅದೇ ರೀತಿ ಅಮೇರಿಕಾದ ಪೋಷಕರು ತನ್ನ ಆರು ವರ್ಷದ ಮಗನ್ನು ಅಮ್ಯೂಸ್ ಮೆಂಟ್ ಪಾರ್ಕ್ ಗೆ ಕರೆದುಕೊಂಡು ಹೋಗಿದ್ದ ಸಂದರ್ಭ ಬಾಲಕ ಅಲ್ಲಿರುವ ಜಿಪ್ ಲೈನ್ ನಲ್ಲಿ ಆಟವಾಡಲು ಹೋಗಿ ೪೦ ಅಡಿ ಆಳಕ್ಕೆ ಬಿದ್ದಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆ ವಿವರ :
ಜೂನ್ 25 ರಂದು ಮೆಕ್ಸಿಕೋದ ಮಾಂಟೆರ್ರಿಯಲ್ಲಿ ಇರುವ ಅಮ್ಯೂಸ್ ಮೆಂಟ್ ಪಾರ್ಕ್ ವೊಂದಕ್ಕೆ ಪೋಷಕರೊಬ್ಬರು ತನ್ನ ಆರು ವರ್ಷದ ಬಾಲಕನನ್ನು ಕರೆದುಕೊಂಡು ಹೋಗಿದ್ದಾರೆ ಈ ಪಾರ್ಕ್ ಒಳಗಡೆ ಕೆಲವೊಂದಷ್ಟು ಆಟಗಳನ್ನು ಆಡಿದ್ದಾರೆ ಬಳಿಕ ಬಾಲಕ ಅಲ್ಲಿರುವ ಜಿಪ್ ಲೈನ್ ನಲ್ಲಿ ಆಟವಾಡಲು ಹೋಗಿದ್ದಾನೆ ಇತ್ತ ಪೋಷಕರು ಬಾಲಕ 40 ಅಡಿ ಎತ್ತರದ ಜಿಪ್ ಲೈನ್ ನಲ್ಲಿ ಹೋಗುವ ವಿಡಿಯೋ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ ಇನ್ನೇನು ಬಾಲಕ ಈ ಬದಿಯಿಂದ ಇನ್ನೊಂದು ಬದಿಗೆ ತಲುಪಬೇಕು ಎನ್ನುವಷ್ಟರಲ್ಲಿ ಬಾಲಕನಿಗೆ ಕಟ್ಟಿದ ರೋಪ್ ತುಂಡಾಗಿ ಸುಮಾರು 40 ಅಡಿ ಆಳಕ್ಕೆ ಬಿದ್ದಿದ್ದಾನೆ. ಈ ವೇಳೆ ಅಲ್ಲಿದ್ದ ರಕ್ಷಣಾ ಸಿಬ್ಬಂದಿ ಕೂಡಲೇ ಬಾಲಕನ ರಕ್ಷಣೆಗೆ ಧಾವಿಸಿ ಬಾಲಕನನ್ನು ರಕ್ಷಿಸಿದ್ದಾರೆ.
ನೀರಿಗೆ ಬಿದ್ದು ಜೀವ ಉಳಿಯಿತು:
ಅದುಷ್ಟವಷಾತ್ ಬಾಲಕ 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದು ಪಾರ್ಕ್ ಒಳಗಡೆ ನಿರ್ಮಿಸಿದ ಕೆರೆಗೆ ಹಾಗಾಗಿ ಬಾಲಕನಿಗೆ ಅಲ್ಪಸ್ವಲ್ಪ ಗಾಯಗಳಾಗಿ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ಪಾರ್ಕ್ ವಿರುದ್ಧ ದೂರು:
ಇತ್ತ ಜಿಪ್ ಲೈನ್ ದುರ್ಘಟನೆ ಸಂಭವಿಸುತ್ತಿದ್ದಂತೆ ಪಾರ್ಕ್ ನ ಆಡಳಿತ ಮಂಡಳಿ ಕೂಡಲೇ ಜಿಪ್ ಲೈನ್ ಆಟ ಸ್ಥಗಿತಗೊಳಿಸಿದೆ. ಇತ್ತ ಪೋಷಕರು ಪಾರ್ಕ್ ನಲ್ಲಿರುವ ಜಿಪ್ ಲೈನ್ ರೋಪ್ ಗಳು ಗುಣಮಟ್ಟದಲ್ಲಿ ಇಲ್ಲ ಕಳಪೆ ಗುಣಮಟ್ಟದ ವಸ್ತುಗಳನ್ನು ಇಲ್ಲಿ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ಘಟನೆ ಕುರಿತು ಆಡಳಿತ ಮಂಡಳಿ ತನಿಖೆ ನಡೆಸುವ ಭರವಸೆ ನೀಡಿದ್ದು ತಪಿತಸ್ಥರಿಗೆ ಶಿಕ್ಷಿ ನೀಡುವ ಕುರಿತು ಮಾಹಿತಿ ನೀಡಿದ್ದಾರೆ.
ಮಕ್ಕಳ ಕುರಿತು ಇರಲಿ ಎಚ್ಚರ:
ಪೋಷಕರೇ ಮಕ್ಕಳ ಖುಷಿಗೋಸ್ಕರ ನಡೆಸುವ ಕೆಲವೊಂದು ಆಟಿಕೆಗಳು ಮಕ್ಕಳ ಜೀವಕ್ಕೆ ಸಂಚಕಾರ ತಂದೊಡ್ಡಬಹುದು ಹಾಗಾಗಿ ಕೆಲವೊಂದು ಆಟಿಕೆಗಳ ಕುರಿತು ಪೋಷಕರು ಎಚ್ಚರ ವಹಿಸುವುದು ಅಗತ್ಯವಾಗಿದೆ.
ಇದನ್ನೂ ಓದಿ: President of India Murmu ಭೇಟಿ: ಸ್ಕಂದಗಿರಿ, ನಂದಿಗಿರಿ ಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ
🇲🇽 • A six-year-old boy falls from a height of 12 meters while on a ropes rack at Fundidora Park in Monterrey, Mexico pic.twitter.com/DAysWyikiA
— Around the world (@1Around_theworl) June 26, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್ ಇದ್ರು ಸಿಕ್ಕಿದ್ದು ಕೇವಲ 155 ಮತ!!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್!
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.