Asian Kabaddi ಚಾಂಪಿಯನ್‌ಶಿಪ್; ಇರಾನ್ ಸೋಲಿಸಿ ಪ್ರಶಸ್ತಿ ಉಳಿಸಿಕೊಂಡ ಭಾರತ
Team Udayavani, Jun 30, 2023, 9:24 PM IST
ಬುಸಾನ್ (ಕೊರಿಯಾ): ಇಲ್ಲಿ ಶುಕ್ರವಾರ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷರ ಕಬಡ್ಡಿ ತಂಡವು ಹೈ-ವೋಲ್ಟೇಜ್ ಫೈನಲ್‌ನಲ್ಲಿ 42-32 ಅಂತರದಲ್ಲಿ ಇರಾನ್ ಅನ್ನು ಸೋಲಿಸಿ ಪ್ರಶಸ್ತಿ ಉಲಿಸಿಕೊಂಡಿದೆ. ಇದು ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಎಂಟನೇ ಪ್ರಶಸ್ತಿಯಾಗಿದೆ.
ಇರಾನ್ ಆಕ್ರಮಣಕಾರಿಯಾಗಿ ಪ್ರಾರಂಭಿಸಿತು, ಭಾರತೀಯರು ಪ್ರತಿಯಾಗಿ ಭರ್ಜರಿ ಆಟವಾಡಿದರು. ನಾಯಕ ಪವನ್ ಸೆಹ್ರಾವತ್ ಭಾರತಕ್ಕೆ ಎರಡು ಟಚ್ ಪಾಯಿಂಟ್‌ಗಳೊಂದಿಗೆ ಮೊದಲ ಆಲ್-ಔಟ್ ಮಾಡಲು ಸಹಾಯ ಮಾಡಿದರು ಮತ್ತು ಅವರ ತಂಡಕ್ಕೆ 10-4 ಮುನ್ನಡೆ ನೀಡಿದರು.
ಭಾರತ ಇರಾನಿಯನ್ನರ ಮೇಲೆ ಒತ್ತಡವನ್ನು ಹೆಚ್ಚಿಸಿತು ಮತ್ತು ಮತ್ತೊಂದು ಆಲ್-ಔಟ್ ಅನ್ನು ಮಾಡಿತು. ವಿರಾಮದ ವೇಳೆಗೆ ಭಾರತ 23-11ರಿಂದ ಮುಂದಿತ್ತು.
ಇರಾನ್‌ನ ಆಲ್‌ರೌಂಡರ್ ಮೊಹಮ್ಮದ್ರೇಜಾ ಚಿಯಾನೆಹ್ ತನ್ನ ತಂಡದ ಪುನರಾಗಮನ ಮಾಡಲು ಪ್ರಯತ್ನಿಸಿದರು ಆದರೆ ಅವರು 14-33 ರಿಂದ ಹಿನ್ನಡೆಗೆ ಮತ್ತೊಂದು ಆಲ್-ಔಟ್ ಅನ್ನು ಬಿಟ್ಟುಕೊಟ್ಟರು. ಭಾರತವು ಮೇಲುಗೈ ಉಳಿಸಿಕೊಂಡಿತು.
“ಇರಾನ್ ವಿರುದ್ಧದ ಅಂತಿಮ ಪಂದ್ಯದಲ್ಲಿ 42-32 ಸ್ಕೋರ್‌ನೊಂದಿಗೆ, ಟೀಂ ಇಂಡಿಯಾ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಉಳಿಸಿಕೊಂಡಿದೆ. ಇಡೀ ತಂಡಕ್ಕೆ ಅಭಿನಂದನೆಗಳು. ಚೆನ್ನಾಗಿ ಆಡಿದ ಹುಡುಗರೇ,” ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ಟ್ವೀಟ್ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.