ರಾಜ್ಯಪಾಲರ ಕಾರ್ಯವೈಖರಿ ಹುದ್ದೆಯ ಘನತೆ, ಗೌರವಕ್ಕೆ ಚ್ಯುತಿ ತರದಿರಲಿ


Team Udayavani, Jul 1, 2023, 5:19 AM IST

LAW

ವಿವಿಧ ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಯಾಗಿ ಕೇಂದ್ರೀಯ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ತಮಿಳುನಾಡಿನ ಡಿಎಂಕೆ ಸರಕಾರದಲ್ಲಿ ಈಗಲೂ ಸಚಿವರಾಗಿ ಮುಂದುವರಿದಿರುವ ವಿ. ಸೆಂಥಿಲ್‌ ಬಾಲಾಜಿ ಅವರನ್ನು ಗುರುವಾರದಂದು ಸಚಿವ ಸ್ಥಾನದಿಂದ ವಜಾಗೊಳಿಸಿ ಆದೇಶ ಹೊರಡಿಸಿ ಭಾರೀ ಟೀಕೆಗೆ ಗುರಿಯಾಗಿದ್ದ ತಮಿಳುನಾಡಿನ ರಾಜ್ಯಪಾಲರಾದ ಆರ್‌.ಎನ್‌. ರವಿ ಅವರು ಕೇಂದ್ರ ಗೃಹ ಸಚಿವಾಲಯದ ಮಧ್ಯಪ್ರವೇಶದ ಬಳಿಕ ತಮ್ಮ ಆದೇಶವನ್ನು ರಾತ್ರಿಯೇ ವಾಪಸ್‌ ಪಡೆದುಕೊಂಡಿದ್ದರು. ಇಡೀ ಬೆಳವಣಿಗೆ ರಾಜಕೀಯವಾಗಿ ಮಾತ್ರ ವಲ್ಲದೆ ಸಾಂವಿಧಾನಿಕವಾಗಿಯೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯಪಾಲರ ಈ ಏಕಪಕ್ಷೀಯ ವರ್ತನೆ ರಾಜ್ಯದ ಆಡಳಿತಾರೂಢ ಡಿಎಂಕೆಯ ಆಕ್ರೋಶಕ್ಕೆ ಗುರಿಯಾಗಿತ್ತಲ್ಲದೆ ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರುವ ಎಚ್ಚರಿಕೆಯನ್ನು ನೀಡಿತ್ತು. ರಾಜ್ಯ ಸಚಿವ ಸಂಪುಟದ ಯಾವುದೇ ಶಿಫಾರಸು ಇಲ್ಲದೇ ರಾಜ್ಯಪಾಲರು ಏಕಪಕ್ಷೀಯವಾಗಿ ಸಚಿವರನ್ನು ವಜಾಗೊಳಿಸುವ ನಿರ್ಧಾರ ಕೈಗೊಂಡುದುದು ವಿವಾದವಾಗಿ ಮಾರ್ಪಟ್ಟಿತ್ತು. ಅಷ್ಟು ಮಾತ್ರವಲ್ಲದೆ ರಾಜ್ಯಪಾಲರ ಈ ದಿಢೀರ್‌ ನಿರ್ಧಾರ ಸಂವಿಧಾನ ಮತ್ತು ಕಾನೂನು ತಜ್ಞರ ಟೀಕೆಗೂ ಗುರಿಯಾಗಿತ್ತು.
ತಮಿಳುನಾಡಿನ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ರವಿ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರಕಾರದ ನಡುವೆ ಸಂಘರ್ಷಗಳು ನಡೆಯುತ್ತಲೇ ಬಂದಿವೆ. ರಾಜ್ಯ ಸರಕಾರ ಅಂಕಿತಕ್ಕಾಗಿ ಕಳುಹಿಸಿದ ಮಸೂದೆಗಳನ್ನು ಮತ್ತೆ ಸರಕಾರಕ್ಕೆ ವಾಪಸ್‌ ಕಳುಹಿಸುವ ಮೂಲಕ ರಾಜ್ಯ ಸರಕಾರದೊಡನೆ ಗುದ್ದಾಟ ನಡೆಸುತ್ತಲೇ ಬಂದಿರುವ ರಾಜ್ಯಪಾಲರ ಕಾರ್ಯವೈಖರಿಯ ಬಗೆಗೆ ಮುಖ್ಯಮಂತ್ರಿ ಸ್ಟಾಲಿನ್‌ ಮತ್ತವರ ಪಕ್ಷವಾದ ಡಿಎಂಕೆ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಲೇ ಬಂದಿದೆ.

ರಾಜ್ಯಪಾಲ ಹುದ್ದೆಯ ಹೊಣೆಗಾರಿಕೆ ಮತ್ತು ಪಾತ್ರದ ಬಗೆಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆಯಾದರೂ ಈ ಹಿಂದಿನಿಂದಲೂ ಕೇಂದ್ರದಲ್ಲಿರುವ ಆಡಳಿತಾರೂಢ ಸರಕಾರಗಳು ರಾಜ್ಯಗಳಲ್ಲಿನ ವಿಪಕ್ಷಗಳ ನೇತೃತ್ವದ ಸರಕಾರದ ಮೇಲೆ ಸವಾರಿ ನಡೆಸಲು ಈ ಹುದ್ದೆಯನ್ನು ಬಳಸಿಕೊಳ್ಳುತ್ತಲೇ ಬಂದಿವೆ. ವಿವಿಧ ನ್ಯಾಯಾಲಯಗಳ ನಿರಂತರ ವಾಗ್ಧಾಳಿ, ತೀರ್ಪುಗಳ ಬಳಿಕ ಇತ್ತೀಚಿನ ವರ್ಷಗಳಲ್ಲಿ ಇಂತಹ ಬೆಳವಣಿಗೆಗಳು ಒಂದಿಷ್ಟು ಕಡಿಮೆಯಾಗಿವೆ. ಆದರೆ ವಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಪದೇಪದೆ ಸರಕಾರದೊಡನೆ ಸಂಘರ್ಷಕ್ಕಿಳಿಯುವ ಪ್ರಸಂಗಗಳು ನಡೆಯುತ್ತಲೇ ಇವೆ.

ರಾಜ್ಯಪಾಲ ಹುದ್ದೆ ರಾಜಕೀಯ ರಹಿತವಾಗಿದ್ದು ರಾಜ್ಯಪಾಲರು ಪಕ್ಷ ರಾಜಕೀಯದಲ್ಲಿ ತೊಡಗಿಕೊಳ್ಳದೇ ರಾಜ್ಯ ಸರಕಾರ ಸುಸೂತ್ರವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರಗಳಿಗೆ ಕಿವಿಮಾತು, ಸಲಹೆ ಸೂಚನೆಗಳನ್ನು ನೀಡಬೇಕೇ ವಿನಾ ಸ್ವತಃ ಹಸ್ತಕ್ಷೇಪ ನಡೆಸುವುದು, ತಮ್ಮ ಕಾರ್ಯವೈಖರಿಗಳಿಂದ ಆ ಹುದ್ದೆಗಿರುವ ಘನತೆ, ಗೌರವಕ್ಕೆ ಚ್ಯುತಿ ತರಬಾರದು. ಇನ್ನು ರಾಜ್ಯಪಾಲರ ಸಲಹೆಗಳು ನ್ಯಾಯಯುತವಾಗಿದ್ದಲ್ಲಿ ಅವುಗಳನ್ನು ಪಾಲಿಸುವುದು ತಮ್ಮ ಹೊಣೆಗಾರಿಕೆ ಎಂಬುದನ್ನು ರಾಜ್ಯ ಸರಕಾರ ಮರೆಯಬಾರದು. ಇಲ್ಲವಾದಲ್ಲಿ ಆಡಳಿತ ಸೂತ್ರ ಎರಡು ದೋಣಿಗಳಲ್ಲಿ ಕಾಲಿಟ್ಟಂತಾಗುವುದರಲ್ಲಿ ಸಂದೇಹವಿಲ್ಲ.

ಟಾಪ್ ನ್ಯೂಸ್

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ

Tiger-Hunasuru

Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!

Vijayapura-Sainik

Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

1-ammi

J&K Assembly polls; ಈಗ ಪಾಕಿಸ್ಥಾನವು ಮೋದಿಗೆ ಹೆದರುತ್ತಿದೆ: ಅಮಿತ್ ಶಾ ವಾಗ್ದಾಳಿ

Achraya-das

Tirupati laddoo: ʼಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಲಡ್ಡು ಪ್ರಸಾದ ಹಂಚಿದ್ದೆವುʼ

1-ewqewqe

AtishiAAP; ದೆಹಲಿಯ ಮೂರನೇ ಮಹಿಳಾ ಸಿಎಂ ಆದ ಆತಿಷಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

Namma-clinic

Karnataka; ಬಸ್‌ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ ಸಮುಚಿತ ನಿರ್ಧಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ

R Ashok (2)

BJP; ವಿಪಕ್ಷ ನಾಯಕ ಆರ್‌. ಅಶೋಕ್‌ ನಡೆಗೆ ಕಾಂಗ್ರೆಸ್‌ ಖಂಡನೆ

Tiger-Hunasuru

Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!

Vijayapura-Sainik

Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ

Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ

Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.