ಸಂಚಾರ ಉಲ್ಲಂಘನೆ ಪ್ರಕರಣಗಳು: 2.33 ಕೋಟಿ ಕೇಸ್, 473 ಕೋಟಿ ರೂ. ದಂಡ
Team Udayavani, Jul 1, 2023, 1:25 PM IST
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸಂಚಾರ ವಿಭಾಗವು ಡಿಜಿಟಲ್ ತಂತ್ರಜ್ಞಾನದ ಮೊರೆ ಹೋದ ಬೆನ್ನಲ್ಲೇ ಕಳೆದ ಎರಡೂವರೆ ವರ್ಷಗಳಲ್ಲಿ 2.33 ಕೋಟಿ ಸಂಚಾರ ಉಲ್ಲಂಘನೆ ಪ್ರಕರಣಗಳು ದಾಖಲಾಗಿ, 473 ಕೋಟಿ ರೂ. ದಂಡ ಸಂಗ್ರಹವಾಗಿದೆ.
ಹೌದು, ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆ ಸಮಸ್ಯೆಯ ಜತೆಗೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಕಡಿವಾಣ ಹಾಕುವುದೇ ಪೊಲೀಸ್ ವಿಭಾಗಕ್ಕೆ ದೊಡ್ಡ ತಲೆನೋವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಸಂಚಾರ ಪೊಲೀಸ್ ವಿಭಾಗವು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದರು. ಪರಿಣಾಮ 2021ರಿಂದ 2023ರ ವರೆಗೆ ಸಂಚಾರ ನಿಯಮ ಉಲ್ಲಂ ಸಿದ ಬರೋಬ್ಬರಿ 2.33 ಕೋಟಿ ಪ್ರಕರಣಗಳು ದಾಖಲಾದರೆ, 473 ದಂಡ ಸಂಗ್ರಹಿಸಲಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ಅವಧಿಯಲ್ಲಿ ಅತ್ಯಧಿಕ ಕೇಸ್ ಹಾಗೂ ದಂಡದ ಪ್ರಮಾಣ ಏರಿಕೆಯಾಗಿದೆ.
ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಸಂಖ್ಯೆ ಸೆರೆ ಹಿಡಿಯುವ ಕ್ಯಾಮೆರಾಗಳು, ಕ್ಷಣ ಮಾತ್ರದಲ್ಲಿ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸುತ್ತವೆ. ನಿಯಮ ಉಲ್ಲಂಘನೆಗೆ ಅನುಗುಣವಾಗಿ ಸ್ವಯಂಚಾಲಿತವಾಗಿ ದಂಡ ಬೀಳುತ್ತದೆ. ಹೀಗಾಗಿ ಪೊಲೀಸರಿಗೂ ವಾಹನಗಳ ಮೇಲೆ ಕಣ್ಣಿಡುವ ಹೊರೆ ತಪ್ಪಿದೆ.
ಯಾವೆಲ್ಲಾ ಆಧುನಿಕ ತಂತ್ರಜ್ಞಾನ?: ಸುರಕ್ಷತೆ, ವಾಹನ ಸಂಖ್ಯೆ ಪರಿಶೀಲಿಸುವ, ವಾಹನ ಸಾಮರ್ಥ್ಯ ಪರಿಶೀಲಿಸುವ ಆಧುನಿಕ ಕ್ಯಾಮೆರಾ ಅಳವಡಿಸಲಾಗಿದೆ. ಸಂಚಾರ ಪೊಲೀಸರಿಗೆ ಬಾಡಿ ವೋರ್ನ್ ಕ್ಯಾಮೆರಾ, ನಿಯಮ ಉಲ್ಲಂಘಿಸುವ ವಾಹನಗಳ ಸಂಖ್ಯೆ ಮೊಬೈಲ್‌ನಲ್ಲೇ ಸೆರೆಹಿಡಿದು ಕಳುಹಿಸುವ ವ್ಯವಸ್ಥೆ, ಬೆಂಗಳೂರಿನ 160ಕ್ಕೂ ಹೆಚ್ಚಿನ ಸಿಗ್ನಲ್‌ಗಳಲ್ಲಿ ಕೃತಕ ಬುದ್ದಿಮತ್ತೆ ಸಂಚಾರ ನಿಯಂ ತ್ರಣ ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಂಡಿದೆ. ವೇಗಮಿತಿ ಪರಿಶೀಲನೆ ಯಂತ್ರ, ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆಗೆ ಆಧುನಿಕ ಆಲ್ಕೋಮೀಟರ್ ಬಳಕೆ, ಅಲ್ಲಲ್ಲಿ ವಾಹನ ತಪಾಸಣೆ ನಡೆಸಿ ಡಿಜಿಟಲ್ ರೂಪದಲ್ಲಿ ದಂಡ ವಿಧಿಸುವುದು ಸೇರಿದಂತೆ ಇನ್ನಿತರ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಅಡ್ಡಾದಿಡ್ಡಿ ವಾಹನ ಚಾಲನೆ, ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು “ಲೋಕಲ್ ಏರಿಯಾ ಟ್ರಾಫಿಕ್ ಮ್ಯಾನೇಜ್‌ಮೆಂಟ್’ ವ್ಯವಸ್ಥೆ ಇದೆ.
ಇನ್ನು ಶೀಘ್ರದಲ್ಲೇ ಡ್ರೋನ್ ಕ್ಯಾಮೆರಾ ಬಳಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಇಂತಹ ಹೈಟೆಕ್ ತಂತ್ರಜ್ಞಾನದಿಂದ ಕೇಸ್‌ಗಳ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಈ ಹಿಂದೆ ಸಂಚಾರ ಪೊಲೀಸರು ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂ ಸುವ ವಾಹನಗಳ ನಂಬರ್‌ಗಳನ್ನು ಪುಸ್ತಕದಲ್ಲಿ ಬರೆದು ದಂಡ ವಿಧಿಸುತ್ತಿದ್ದರು. ಇದು ಪೊಲೀಸರಿಗೂ ಕಿರಿ-ಕಿರಿ ಉಂಟಾಗುತ್ತಿತ್ತು.
5 ತಿಂಗಳಲ್ಲಿ 154 ಕೋಟಿ ದಂಡ ಸಂಗ್ರಹ : ರಾಜ್ಯ ರಾಜಧಾನಿ ದೇಶದಲ್ಲೇ 2ನೇ ಅತೀ ಹೆಚ್ಚಿನ ವಾಹನ ಹೊಂದಿರುವ ನಗರವಾಗಿದೆ. 1.9 ಕೋಟಿ ವಾಹನಗಳು ಬೆಂಗಳೂರಿನಲ್ಲಿವೆ. ಈ ಪೈಕಿ 73.32 ಲಕ್ಷ ಬೈಕ್‌ಗಳಿದ್ದರೆ, 22.33 ಲಕ್ಷ ಕಾರುಗಳಿವೆ. ಪ್ರತಿದಿನ 65 ಲಕ್ಷಕ್ಕೂ ಹೆಚ್ಚಿನ ವಾಹನಗಳು ರಸ್ತೆಗಿಳಿಯುತ್ತಿವೆ. 2021ರಲ್ಲಿ ದಾಖಲಾಗಿದ್ದ 93 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಕೇಸ್, 2022ಕ್ಕೆ 1.4 ಕೋಟಿಗೆ ಏರಿಕೆಯಾಗಿದೆ.
ಇನ್ನು 2023 ಮೇ ತಿಂಗಳವರೆಗೆ 35.73 ಲಕ್ಷ ಪ್ರಕರಣ ದಾಖಲಾಗಿವೆ. 2021ರಲ್ಲಿ 140 ಕೋಟಿ ರೂ., 2022ರಲ್ಲಿ 179 ಕೋಟಿ ರೂ. ಹಾಗೂ 2023ರಲ್ಲಿ 5 ತಿಂಗಳಲ್ಲಿ ಬರೋಬ್ಬರಿ 154 ಕೋಟಿ ರೂ. ದಂಡ ಟ್ರಾಫಿಕ್ ಫೋಲಿಸ್ ಖಜಾನೆ ಸೇರಿದೆ.
2021-2023ರ ವರೆಗೆ ನಿಯಮ ಉಲ್ಲಂಘಿಸಿದ ಅಂಕಿ-ಅಂಶ:
1,00,45,885 ಹೆಲ್ಮೆಟ್ ಧರಿಸದೆ ಚಾಲನೆ 52,60,665
ಹಿಂಬದಿ ಸವಾರ ಹೆಲ್ಮೆಟ್ ಧರಿಸದಿರುವುದು 3,16,636
ಮೊಬೈಲ್ ಬಳಸಿ ವಾಹನ ಚಾಲನೆ 24,27,310
ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ 16,57,531
ಸಿಗ್ನಲ್ ಜಂಪ್ 6,05,312 ಸೇಫ್ಟಿ ಬೆಲ್ಟ್ ಧರಿಸದಿರುವುದು
8,81074 ತಪ್ಪು ನೋಂದಣಿ ಸಂಖ್ಯೆ ಅಳವಡಿಕೆ
ಸಾರ್ವಜನಿಕರ ಸುಗಮ ಸಂಚಾರಕ್ಕಾಗಿಯೇ ಸಂಚಾರ ನಿಯಮ ರೂಪಿಸಲಾಗಿದೆ. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು. ತಂತ್ರಜ್ಞಾನ ಬಳಕೆಯಿಂದ ದಾಖಲಾದ ಕೇಸ್, ಸಂಗ್ರಹಿಸಿದ ದಂಡವೂ ಹೆಚ್ಚಿದೆ. ● ಸಚಿನ್ ಘೋರ್ಪಡೆ, ಡಿಸಿಪಿ, ಉತ್ತರ ಸಂಚಾರ ವಿಭಾಗ
-ಅವಿನಾಶ್ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.