On Camera: ಹಿಂಬದಿ ಸೀಟಿನಲ್ಲಿ… ಮಹಿಳೆ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಕಂಡಕ್ಟರ್
Team Udayavani, Jul 1, 2023, 3:59 PM IST
ಲಕ್ನೋ: ಚಲಿಸುತ್ತಿರುವ ಬಸ್ಸಿನಲ್ಲೇ ಕಂಡಕ್ಟರ್ ಯೊಬ್ಬ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಘಟನೆ ಲಕ್ನೋದಲ್ಲಿ ನಡೆದಿರುವುದು ವರದಿಯಾಗಿದೆ.
ಲಕ್ನೋಗೆ ತೆರಳುತ್ತಿದ್ದ ಹತ್ರಾಸ್ ಡಿಪೋದ ಬಸ್ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಂಡಕ್ಟರ್ ಬಸ್ ಹಿಂಬದಿ ಸೀಟಿನಲ್ಲಿ ಕುಳಿತಿರುವುದನ್ನು ಪ್ರಯಾಣಿಕರೊಬ್ಬರು ನೋಡಿದ್ದಾರೆ. ಕಂಡಕ್ಟರ್ ವರ್ತನೆ ವಿಚಿತ್ರವಾಗಿ ಕಾಣುತ್ತಿದ್ದರಿಂದ ಪ್ರಯಾಣಿರೊಬ್ಬರು ಮೊಬೈಲ್ ನಲ್ಲಿ ಇದನ್ನು ಚಿತ್ರೀಕರಣ ಮಾಡುತ್ತಾ ಹೋಗಿದ್ದಾರೆ. ಹತ್ತಿರ ಹೋಗಿ ನೋಡಿದಾಗ ಕಂಬಳಿಯೊಳಗೆ ಮಹಿಳೆಯೊಬ್ಬರೊಂದಿಗೆ ಕಂಡಕ್ಟರ್ ಲೈಂಗಿಕ ಕ್ರಿಯೆಯನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಪ್ರಯಾಣಿಕ ವಿಡಿಯೋ ಮಾಡುತ್ತಿರುವಾಗಲೇ ಕಂಡಕ್ಟರ್ ಎಚ್ಚೆತ್ತುಕೊಂಡು ಕಂಬಳಿಯಿಂದ ಮಾನ ಮುಚ್ಚಿಕೊಂಡು ಗೊಂದಲಕ್ಕೆ ಒಳಗಾಗಿದ್ದಾನೆ. ಇದನ್ನು ನೋಡಿದ ಇತರ ಪ್ರಯಾಣಿಕರು ದುರ್ವರ್ತನೆ ಬಗ್ಗೆ ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಈ ಘಟನೆ 10 ದಿನಗಳ ಹಿಂದೆ ನಡೆದಿದೆ ಎಂದು ಕೆಲ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಈ ಘಟನೆ ಆನ್ಲೈನ್ನಲ್ಲಿ ವೈರಲ್ ಆದ ಬಳಿಕ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, (ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕ), ತ್ವರಿತ ಕ್ರಮ ಕೈಗೊಂಡು ಘಟನೆಯಲ್ಲಿ ಚಾಲಕ ಮತ್ತು ಕಂಡಕ್ಟರ್ ಇಬ್ಬರು ಶಾಮೀಲು ಆಗಿದ್ದು, ಚಾಲಕ ಮತ್ತು ಕಂಡಕ್ಟರ್ ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh; ಎರಡು ಪ್ರತ್ಯೇಕ ಅವಘಡದಲ್ಲಿ ಬಾವಿಗೆ ಬಿದ್ದು 9 ಮಂದಿ ಮೃತ್ಯು
Sudha Murthy 30 ವರ್ಷದಿಂದ ಒಂದೂ ಸೀರೆ ಖರೀದಿಸಿಲ್ಲವೇಕೆ ಗೊತ್ತಾ?
RJD: ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್
Mumbai; ಟೀಮ್ ಇಂಡಿಯಾ ಸ್ವಾಗತ ಮೆರವಣಿಗೆ ಬಳಿಕ ಭಾರೀ ಕಸ ಸಂಗ್ರಹ
Pune Porsche crash; 300 ಪದಗಳ ಪ್ರಬಂಧ ಬರೆದು ಸಲ್ಲಿಸಿದ ಬಾಲಾಪರಾಧಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.