ಅಧಿಕಾರಿಗಳ ಕಾಲಹರಣ: ಹಂಪಿ ಮಾಸ್ಟರ್‌ಪ್ಲಾನ್ ವಿಳಂಬ, ಫಾರ್ಮ್ ಸ್ಟೇ ಪರವಾನಿಗೆಗೂ ತಡೆ

ಉದ್ಯೋಗಕ್ಕಾಗಿ ಗುಳೆ ಹೊರಟ ಹೊಟೇಲ್ ಕಾರ್ಮಿಕರು

Team Udayavani, Jul 1, 2023, 6:59 PM IST

ಅಧಿಕಾರಿಗಳ ಕಾಲಹರಣ: ಹಂಪಿ ಮಾಸ್ಟರ್‌ಪ್ಲಾನ್ ವಿಳಂಬ, ಫಾರ್ಮ್ ಸ್ಟೇ ಪರವಾನಿಗೆಗೂ ತಡೆ

ಗಂಗಾವತಿ: ಹಂಪಿ-ಆನೆಗೊಂದಿ ಭಾಹವನ್ನೊಳಗೊಂಡ ಹಂಪಿ ಅಭಿವೃದ್ಧಿ ಪ್ರಾಧಿಕಾರದ ನೂತನ ಮಾಸ್ಟರ್ ಪ್ಲಾನ್ ಅಧಿಕಾರಿಗಳ ಕಾಲ ಹರಣದಿಂದಾಗಿ ಘೋಷಣೆ ವಿಳಂಭವಾಗುತ್ತಿದ್ದು ಗ್ರಾ.ಪಂ.ನಿಂದ ಹಿಡಿದು ತಾಲೂಕು, ಜಿಲ್ಲಾಡಳಿತ ಅಧಿಕಾರಿಗಳಿಗೆ ನೂತನ ಮಾಸ್ಟರ್ ಪ್ಲಾನ್ ಅನುಷ್ಠಾನದ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಿರುವುದರಿಂದ ಪ್ರಸ್ತುತ ಪ್ರಾಧಿಕಾರದ ನಿಯಮಗಳಿಂದಾಗಿ ಹಂಪಿ-ಆನೆಗೊಂದಿ ಭಾಗದಲ್ಲಿ ಸ್ಥಳೀಯರು ನಡೆಸುತ್ತಿರುವ ಹೊಟೇಲ್ ಉದ್ಯಮ ಅಕ್ರಮವಾಗಿದ್ದು ಕೆಲ ಸಂಘಟನೆಗಳು, ಸ್ವಾಮೀಜಿಗಳು ಕೋರ್ಟ್ ಮೂಲಕ ಪದೇ ಪದೇ ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿದ್ದು ಸ್ಥಳೀಯ ಹೊಟೇಲ್ ಉದ್ಯಮ ನಡೆಸುವ ಮತ್ತು ಹೊಟೇಲ್‌ಗಳಲ್ಲಿ ಕೂಲಿ ಕೆಲಸ ಮಾಡುವ ಕಾರ್ಮಿಕರು ಉದ್ಯೋಗಕ್ಕಾಗಿ ಅನ್ಯ ಊರುಗಳಿಗೆ ಗುಳೆ ಹೋಗುವ ಅನಿವಾರ್ಯತೆಯುಂಟಾಗಿದ್ದು ಹಂಪಿ-ಆನೆಗೊಂದಿ ಭಾಗದ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ.

ಹಂಪಿ ಪ್ರದೇಶವನ್ನು ಯುಸೆಸ್ಕೋ ಸಂಸ್ಥೆ ವಿಶ್ವದ ಅಪರೂಪದ ಸ್ಮಾರಕಗಳೆಂದು ಘೋಷಣೆಯಾದಾಗಿನಿಂದ ಯುನೆಸ್ಕೋಪಟ್ಟಿಯಲ್ಲಿ ಹಂಪಿ ಪ್ರದೇಶವನ್ನು ಉಳಿಸಿಕೊಳ್ಳಲು ರಚನೆಯಾಗಿರುವ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಟ್ಟು ಪ್ರಸ್ತುತ 28 ಗ್ರಾಮಗಳಿವೆ. ಇಲ್ಲಿ ಪ್ರಾಧಿಕಾರದ ನಿಯಮಗಳಿಗೆ ಅನುಗುಣವಾಗಿ ಅಭಿವೃದ್ಧಿ ಮತ್ತು ಪ್ರವಾಸೋದ್ಯಮವನ್ನು ಬೆಳೆಸಲು ಅವಕಾಶವಿದೆ. ಯುನೆಸ್ಕೋ ಸಹ ಸ್ಥಳೀಯರನ್ನೊಳ್ಳದ ಪ್ರವಾಸೋದ್ಯಮ ಬಹಳದಿನ ಉಳಿಯದು ಎಂದು ಸ್ಪಷ್ಟಪಡಿಸಿದರೂ ಪ್ರಾಧಿಕಾರದ ನಿಯಮಗಳು ಪ್ರತಿ 10 ವರ್ಷಗಳಿಗೊಮ್ಮೆ ಬದಲಾಗದೇ ಇರುವುದರಿಂದ ಅನಧಿಕೃತ ವ್ಯವಹಾರಗಳು ಹೆಚ್ಚಾಗಲು ಕಾರಣವಾಗಿದೆ. ಯುನೆಸ್ಕೋ ನಿಯಮದ ಪ್ರಕಾರ ಕೋರ್, ಬಫರ್, ಪೆರಿಪರಲ್ ವಲಯಗಳು(ಝೋನ್) ಎಂದು ಸ್ಮಾರಕಳಿರುವ ಪ್ರದೇಶವನ್ನು ಗುರುತಿಸಿ ಸ್ಮಾರಕಗಳಿರುವ ಜಾಗದಲ್ಲಿ ಯಾವುದೇ ವಾಣಿಜ್ಯ ವ್ಯವಹಾರ ನಡೆಸಲು ಅವಕಾಶ ನೀಡಿಲ್ಲ. ಹಂಪಿ ಪ್ರದೇಶದಲ್ಲಿ ಸುಮಾರು 87 ಎಎಸ್‌ಐ(ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸ್ಮಾರಕಗಳು)ಗಳಿದ್ದು ಆನೆಗೊಂದಿ ಗ್ರಾಮ ಮತ್ತು ವಿರೂಪಾಪೂರಗಡ್ಡಿ ಪ್ರದೇಶ ಮಾತ್ರ ಕೋರ್ ಝೋನ್ ವ್ಯಾಪ್ತಿಗೆ ಬರುತ್ತದೆ. ಉಳಿದಂತೆ ಸಾಣಾಪೂರ, ಹನುಮನಹಳ್ಳಿ, ರಾಘವೇಂದ್ರ ಕಾಲೋನಿ(ಬೆಂಚಿಕುಟ್ರಿ) ಜಂಗ್ಲಿ,ರಂಗಾಪೂರ, ಚಿಕ್ಕರಾಂಪೂರ, ಕಡೆಬಾಗಿಲು, ರಾಂಪೂರ, ತಿರುಮಲಾಪೂರ, ಸೇರಿ ಉಳಿದ ಗ್ರಾಮಗಳು ಭಪರ್ ಮತ್ತು ಪೆರಿಪರಲ್ ಝೋನ್ ನಲ್ಲಿ ಬರುತ್ತವೆ. ಪ್ರಾಧಿಕಾರ ಸ್ಥಾಪನೆಯಾಗಿ 30 ವರ್ಷ ಕಳೆದರೂ ಈ ಮೂರು ಝೋನ್ ಗಳ ನಿಯಮಗಳಲ್ಲಿ ಸ್ವಲ್ಪವೂ ಬದಲಾಗಿಲ್ಲ. ಯುನೆಸ್ಕೋ ಪ್ರಕಾರ ಸ್ಥಳೀಯರನ್ನೊಳಗೊಂಡ ಪ್ರವಾಸೋದ್ಯಮ ಅತ್ಯುತ್ತಮವಾಗಿರುತ್ತದೆ.ಪ್ರಾಧಿಕಾರದ ನಿಯಮಗಳು ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಪ್ರತಿ 10 ವರ್ಷಗಳಿಗೊಮ್ಮೆ ಹಂಪಿ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ಬದಲಾವಣೆ ಮಾಡಲು ಅವಕಾಶವಿದ್ದರೂ ಇದುವರೆಗೂ ಒಂದು ಭಾರಿ ಮಾತ್ರ ಸ್ಥಳೀಯರನ್ನು ಹೊರಗಿಟ್ಟು ಮಾಸ್ಟರ್ ಪ್ಲಾನ್ ಬದಲಾಯಿಸಲಾಗಿದೆ. 2018ರಲ್ಲಿ ಬದಲಾಗಬೇಕಿದ್ದ ಮಾಸ್ಟರ್ ಪ್ಲಾನ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದುವರೆಗೂ ಘೋಷಣೆಯಾಗಿಲ್ಲ.
ಇದರಿಂದ ಹಂಪಿ-ಆನೆಗೊಂದಿ ಭಾಗದಲ್ಲಿ ಹೋಂ ಸ್ಟೇ, ಫಾರ್ಮ್ ಸ್ಟೇಗಳ ಮಾಡಿಕೊಂಡು ಪ್ರವಾಸಿಗರಿಗೆ ಊಟ ವಸತಿ ನೀಡುವುದು ಸಹ ಪ್ರಾಧಿಕಾರದ ನಿಯಮಗಳ ಪ್ರಕಾರ ಅಪರಾಧವಾಗಿದೆ.

ಹುಸಿಯಾದ ಸಿಎಂ ಭರವಸೆ: ಹಂಪಿ-ಆನೆಗೊಂದಿ ಭಾಗದ ಜನತೆ ಇಲ್ಲಿಗೆ ವೀಕ್ ಎಂಡ್ ಮತ್ತು ದಿನ ನಿತ್ಯ ಆಗಮಿಸುವ ಪ್ರವಾಸಿಗಳಿಗೆ ಊಟವಸತಿ ನೀಡಲು ಹೊಲ ಗದ್ದೆ ಹೊಂದಿರುವ ಕೃಷಿಕರು ಸ್ವಲ್ಪ ಭಾಗದಲ್ಲಿ ಫಾರ್ಮ್ ಸ್ಟೇ ಮಾಡಿ ಊಟವಸತಿ ನೀಡುವ ಯೋಜನೆ ಕುರಿತು ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಫಾರ್ಮ್ಸ್ಟೇಗಳಿಗೆ ಪರವಾನಿಗೆ ನೀಡಲು ಇರುವ ಅವಕಾಶಗಳ ಕುರಿತು ಭರವಸೆ ನೀಡಿದ್ದರು. ಸರಕಾರ ಕೂಡ ಪ್ರಾಧಿಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆಯನ್ನು ನೀಡಿತ್ತು. ನಂತರ ಪ್ರಾಧಿಕಾರ ಮತ್ತು ಕೊಪ್ಪಳ,ವಿಜಯನಗರ ಜಿಲ್ಲಾಡಳಿತಗಳು ಫಾರ್ಮ್ಸ್ಟೇ ಪರವಾನಿಗೆ ನೀಡಲು ಕೆಲ ಇರುವ ಝೋನ್ ನಿಯಮಗಳನ್ನು ಬದಲಾಯಿಸಿ ಗೆಜೆಟ್ ಮೂಲಕ ಸಾರ್ವಜನಿಕರ ಆಕ್ಷೇಪವನ್ನು ಕರೆದು ಸರಕಾರಕ್ಕೆ ವರದಿಯನ್ನು ಕಳಿಸಿತ್ತು. ನಂತರ ಹಂಪಿ-ಆನೆಗೊಂದಿ ಭಾಗದ ಸ್ಮಾರಕಗಳ ಸಂರಕ್ಷಣೆಯ ನೋಡೆಲ್ ಎಜೆನ್ಸಿಯಾಗಿರುವ ಭಾರತೀಯ ಪುರಾತತ್ವ ಇಲಾಖೆಯ ಅಭಿಪ್ರಾಯ ಪಡೆಯಲು ನಗರಾಭಿವೃದ್ಧಿ ಇಲಾಖೆ ಪತ್ರ ಬರೆದು ಅಭಿಪ್ರಾಯವನ್ನು ಪಡೆದು ವರ್ಷ ಕಳೆದರೂ ಫಾರ್ಮ್ ಸ್ಟೇ ಪರವಾನಿಗೆ ನೀಡಲು ಗೆಜೆಟ್ ಮೂಲಕ ನಿಯಮಾಳಿ ಘೋಷಣೆ ಮಾಡುತ್ತಿಲ್ಲ. ಇದರಿಂದ ಹಂಪಿ – ಆನೆಗೊಂದಿ ಭಾಗದ ಸ್ಥಳೀಯರು ಪ್ರವಾಸೋದ್ಯಮದ ಮೂಲಕ ಉದ್ಯೋಗ ಕಂಡುಕೊಳ್ಳುವಲ್ಲಿ ನಿರಾಸೆ ಹೊಂದಿದ್ದಾರೆ.

ಹಂಪಿ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ಘೋಷಣೆಯೂ ಇಲ್ಲ ಮತ್ತು ಫಾರ್ಮ್ಸ್ ಸ್ಟೇ ಪರವಾನಿಗೆ ನೀಡುವ ಸರಕಾರದ ಘೋಷಣೆಯೂ ಅನುಷ್ಠಾನವಾಗದಿರುವುದರಿಂದ ಸ್ಥಳೀಯರು ನಿರುದ್ಯೋಗಿಗಳಾಗುತ್ತಿದ್ದಾರೆ.

ಹಂಪಿ ಪ್ರಾಧಿಕಾರದ ನೂತನ ಮಾಸ್ಟರ್ ಪ್ಲಾನ್ ಇನ್ನೂ ಘೋಷಣೆಯಾಗಿಲ್ಲ. ಇತ್ತೀಚೆಗೆ ಫಾರ್ಮ್ಸ್ಟೇಗಳಿಗೆ ಪರವಾನಿಗೆ ನೀಡುವ ಕುರಿತು ಸರಕಾರದ ಚಿಂತನೆಯ ಪರಿಣಾಮ ಸಾರ್ವಜನಿಕರಿಂದ ಆಕ್ಷೇಪ ಕರೆಯಲಾಗಿತ್ತು. ನಗರಾಭಿವೃದ್ಧಿ ಇಲಾಖೆ ನೋಡೆಲ್ ಎಜೆನ್ಸಿ ಎಎಸ್‌ಐ ಅಭಿಪ್ರಾಯ ಕೇಳಿ ಪಡೆದುಕೊಂಡಿದ್ದು ಪ್ರಾಧಿಕಾರ ಅಥವಾ ಜಿಲ್ಲಾಡಳಿತಕ್ಕೆ ಫಾರ್ಮ್ ಸ್ಟೇಗಳಿಗೆ ಪರವಾನಿಗೆ ನೀಡುವ ಕುರಿತು ಯಾವುದೇ ನೂತನ ಆದೇಶವಾಗಿಲ್ಲ. ಪ್ರಾಧಿಕಾರದ ನಿಯಮ ಉಲ್ಲಂಘಿಸಿ ನಿರ್ಮಿಸಿದ್ದ ಅಕ್ರಮ ರೆಸಾರ್ಟ್, ಹೊಟೇಲ್ ತೆರವು ಮಾಡಲಾಗಿದ್ದು ಕೋರ್ಟ್ನಿಂದ ತಡೆಯಾಜ್ಞೆ ಇರುವ ರೆಸಾರ್ಟ್ ಹೊಟೇಲ್ ಸೀಜ್ ಮಾಡಲಾಗಿದೆ.
– ಎಂ.ಸುಂದರೇಶಬಾಬು ಜಿಲ್ಲಾಧಿಕಾರಿಗಳು.

ಇದನ್ನೂ ಓದಿ: ಉತ್ತರಕನ್ನಡದ ಅರಣ್ಯ ಸಂಪತ್ತು ಕಾಯ್ದುಕೊಂಡು ಬರಬೇಕಾಗಿದೆ: ಸಚಿವ ವೈದ್ಯ

ಟಾಪ್ ನ್ಯೂಸ್

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯKarnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.