![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 2, 2023, 7:28 AM IST
ಮೇಷ: ಆರೋಗ್ಯದಲ್ಲಿ ಮಧ್ಯಮ ಸುಖ. ಆಸ್ತಿ ಮೀರಿದ ಸಂಪತ್ತುಗಳಲ್ಲಿ ಪ್ರಗತಿ. ಉತ್ತಮ ಧನಾರ್ಜನೆ. ಮಾನಸಿಕ ಒತ್ತಡದಿಂದ ಕೂಡಿದ ಕಾರ್ಯ ವೈಖರಿ. ದಂಪತಿಗಳಿಂದ ಪರಸ್ಪರ ಪ್ರೋತ್ಸಾಹ. ವ್ಯಾಜ್ಯಗಳಿಗೆ ಅವಕಾಶ ನೀಡದಿರಿ. ಗುರುಹಿರಿಯರ ಮಾರ್ಗದರ್ಶನ.
ವೃಷಭ: ಉತ್ಸಾಹದಿಂದ ಕೂಡಿದ ದಿನ.ಆರೋಗ್ಯದಲ್ಲಿ ಸುಧಾರಣೆ ಸಂತೋಷ. ನಿರೀಕ್ಷಿತ ಕಾರ್ಯಗಳಲ್ಲಿ ಸಫಲತೆ. ಉತ್ತಮ ಧನಾರ್ಜನೆ. ವಾಕ್ ಚತುರತೆ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿಯ ಬದಲಾವಣೆ. ಯಶಸ್ಸು ಪ್ರಾಪ್ತಿ.
ಮಿಥುನ: ದೈಹಿಕ ಮಾನಸಿಕ ಆರೋಗ್ಯ ವೃದ್ಧಿ. ಸಂದಭೋìಚಿತವಾಗಿ ಆಲೋಚಿಸಿ ಮಾಡಿದ ಕೆಲಸ ಕಾರ್ಯಗಳಲ್ಲಿ ಉತ್ತಮ ಲಾಭದಾಯಕ ಪ್ರಗತಿ. ಧಾರ್ಮಿಕ ಚಟುವಟಿಕೆಗಳಲ್ಲಿಯೂ ದೀರ್ಘ ಪ್ರಯಾಣದಲ್ಲಿಯೂ ಆಸಕ್ತಿ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ.
ಕರ್ಕ: ಆರೋಗ್ಯ ವೃದ್ಧಿ. ಶಿಸ್ತಿನಿಂದ ಕೂಡಿದ ಕಾರ್ಯ ವೈಖರಿ. ನಿರೀಕ್ಷಿತ ಸ್ಥಾನ ಗೌರವ ಪ್ರಾಪ್ತಿ. ಉತ್ತಮ ಜನರ ಒಡನಾಟ. ಸಾಂಸಾರಿಕ ಸುಖದಲ್ಲಿ ಪ್ರಗತಿ. ಗೃಹೋಪಕರಣ ವಸ್ತುಗಳ ಸಂಗ್ರಹ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭಿವೃದ್ಧಿ.
ಸಿಂಹ: ನಾನಾರೀತಿಯ ಚಟುವಟಿಕೆಗಳಿಂದ ಕೂಡಿದ ದಿನ. ದೃಢ ನಿರ್ಧಾರಗಳಿಂದ ಅಭಿವೃದ್ಧಿ. ಅನಿರೀಕ್ಷಿತ ಧನಾಗಮನ. ಆಸ್ತಿ ವಿಚಾರವಾಗಿ ಪ್ರಗತಿ. ಪತ್ರ ವ್ಯವಹಾರಗಳಲ್ಲಿ ಲಾಭ. ನೂತನ ಮಿತ್ರರ ಭೇಟಿ. ಸಹೋದ್ಯೋಗಿಗಳ
ಸಹಕಾರ. ಅವಿವಾಹಿತರಿಗೆ ಕಂಕಣ ಭಾಗ್ಯ.
ಕನ್ಯಾ: ಆರೋಗ್ಯ ವಿಚಾರದಲ್ಲಿ ಉದಾಸೀನತೆ ಸಲ್ಲದು. ಅನ್ಯರ ವಿಚಾರದಲ್ಲಿ ಜಾಗೃತೆಯಿಂದ ವ್ಯವಹರಿಸಿ. ಧನಾರ್ಜನೆಗೆ ಕೊರತೆಯಾಗದು. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ. ದಾಂಪತ್ಯದಲ್ಲಿ ಪರಸ್ಪರ ಸಹಕಾರ ಅಗತ್ಯ. ಹಿರಿಯರ ಮಾರ್ಗದರ್ಶನದ ಲಾಭ.
ತುಲಾ: ನಾನಾ ರೀತಿಯ ಚಟುವಟಿಕೆಗಳಿಂದ ಕೂಡಿದ ದಿನ. ಉದ್ಯೋಗ ವ್ಯವಹಾರಗಳಲ್ಲಿ ಗೌರವಾದಿ ಪ್ರಾಪ್ತಿ. ನೂತನ ಮಿತ್ರರ ಸಮಾಗಮ. ಪರಸ್ಪರ ಪ್ರೋತ್ಸಾಹ ಸಹಕಾರ. ಉತ್ತಮ ಧನಾರ್ಜನೆ. ದಾಂಪತ್ಯದಲ್ಲಿ ಸಣ್ಣ ವಿಷಯಗಳ ಚರ್ಚೆ.
ವೃಶ್ಚಿಕ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ದೈಹಿಕ ಶ್ರಮ ಅಧಿಕವಾದ್ದರಿಂದ ದೇಹಾಯಾಸ ತೋರೀತು. ದೀರ್ಘ ಪ್ರಯಾಣ ಸಂಭವ. ಮನೆಯಲ್ಲಿ ಸಂತಸದ ವಾತಾವರಣ. ವಿದ್ಯಾರ್ಥಿಗಳಿಗೆ ಅಧಿಕ ಪರಿಶ್ರಮದಿಂದ
ನಿರೀಕ್ಷಿತ ಸ್ಥಾನ ಸುಖ.
ಧನು: ನಿರೀಕ್ಷೆಗೂ ಮೀರಿದ ಧನಾರ್ಜನೆ. ಉತ್ತಮ ವಾಕ್ ಚತುರತೆಯಿಂದ ಕಾರ್ಯಸಾಧನೆ. ಗುರುಹಿರಿಯರ ಆರೋಗ್ಯ ವೃದ್ಧಿ. ವಿದ್ಯಾರ್ಥಿಗಳಿಗೆ ಸಣ್ಣ ಪ್ರಯಾಣ ಸಂಭವ. ಹೆಚ್ಚಿನ ಬದಲಾವಣೆಗೆ ಅವಕಾಶ. ದಾಂಪತ್ಯ ತೃಪ್ತಿ. ವ್ಯವಹಾರದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಪ್ರಗತಿ.
ಮಕರ: ದೇಶ ವಿದೇಶದ ವ್ಯವಹಾರಗಳಲ್ಲಿ ಪ್ರಗತಿ. ದೀರ್ಘ ಸಂಚಾರ ಸಂಭವ. ಗೌರವಾದಿ ಪ್ರಾಪ್ತಿ. ಕೌಟುಂಬಿಕ ಸುಖ ವೃದ್ಧಿ. ಗೃಹೋಪಕರಣ ವಸ್ತುಗಳ ಖರ್ಚು. ಅಧ್ಯಯನಶೀಲರಿಗೆ ವಿಪುಲ ಅವಕಾಶ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಆರೋಗ್ಯದಲ್ಲಿ ಪ್ರಗತಿ.
ಕುಂಭ: ಉತ್ತಮ ದೈಹಿಕ ಆರೋಗ್ಯ. ಧನಾರ್ಜನೆಗೆ ಸರಿಸಮವಾದ ಖರ್ಚು. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ದಾಂಪತ್ಯದಲ್ಲಿ ಹೆಚ್ಚಿದ ಸಂತೋಷ. ವಿದ್ಯಾರ್ಥಿಗಳಿಗೆ ಹೆಚ್ಚಿದ ಜವಾಬ್ದಾರಿ. ಗುರು ಹಿರಿಯರ ಉತ್ತಮ ಪ್ರೋತ್ಸಾಹ. ದೂರದ ಉದ್ಯೋಗದಲ್ಲಿ ಮುನ್ನಡೆ.
ಮೀನ: ಮನೆಯಲ್ಲಿ ಸಂತಸದ ವಾತಾವರಣ. ದೇವತಾ ಕಾರ್ಯಗಳಲ್ಲಿ ಆಸಕ್ತಿ. ದೂರದ ಮಿತ್ರರ ಭೇಟಿ. ವಿದ್ಯಾರ್ಥಿಗಳಿಗೆ ಗುರುಗಳ ಸಹಕಾರ ಮಾರ್ಗದರ್ಶನದ ಸುಖ. ಬಹಳ ಸಮಯದಿಂದ ವಿಳಂಬಿತ ಕಾರ್ಯಗಳಲ್ಲಿ ಪ್ರಗತಿ. ದಾಂಪತ್ಯ ಸುಖ ವೃದ್ಧಿ. ಪರರಿಗೆ ಸಹಾಯ ಮಾಡುವಾಗ ಜಾಗೃತೆ ವಹಿಸಿ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.