ದವಡೆ ಹಲ್ಲು ಮುರಿದ ವೈದ್ಯನಿಗೆ 1.19 ಲಕ್ಷ ದಂಡ!


Team Udayavani, Jul 2, 2023, 2:49 PM IST

ದವಡೆ ಹಲ್ಲು ಮುರಿದ ವೈದ್ಯನಿಗೆ 1.19 ಲಕ್ಷ ದಂಡ!

ಬೆಂಗಳೂರು: ಮಹಿಳೆಯೊಬ್ಬರ ದಂತ ಶಸ್ತ್ರ ಚಿಕಿತ್ಸೆಯಲ್ಲಿ ಎಡವಟ್ಟು ಮಾಡಿದ ದಂತ ವೈದ್ಯನಿಗೆ ಗ್ರಾಹಕರ ನ್ಯಾಯಾಲಯ 1.19 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಬೆಂಗಳೂರಿನ 36 ವರ್ಷದ ಮಹಿಳೆಯೊಬ್ಬರು 2016ರಲ್ಲಿ ಹಲ್ಲುಗಳ ಸಂವೇದನಾ ಶೀಲತೆ ಸಮಸ್ಯೆಯಿಂದ ಬಳಲುತ್ತಿದ್ದು, ಅದರ ಚಿಕಿತ್ಸೆಗೆ ಇಂದಿರಾ ನಗರದ ದಂತ ಕ್ಲಿನಿಕ್‌ಗೆ ತೆರಳಿದ್ದರು. ಈ ವೇಳೆ ವೈದ್ಯರು ಹಲ್ಲುಗಳಿಗೆ ಕಟ್ಟು ಪಟ್ಟಿ (ಹಲ್ಲಿಗೆ ಸರಿಗೆ) ಹಾಕಬೇಕು. ಅದಕ್ಕಾಗಿ ದವಡೆ (ಬುದ್ಧಿವಂತಿಕೆ ಹಲ್ಲು) ಹಲ್ಲು ತೆಗೆಯುವಂತೆ ಸಲಹೆ ನೀಡಿದ್ದರು. ಅದಕ್ಕಾಗಿ ಅವರೇ ಇನ್ನೊಬ್ಬ ವೈದ್ಯರ ಮೂಲಕ ಹಲ್ಲು ಶಸ್ತ್ರ ಚಿಕಿತ್ಸೆ ನಡೆಸಲು ಸೂಚನೆ ನೀಡಿದ್ದರು. ಅಂತೆಯೇ ಮಹಿಳೆಯು 2019ರ ಆ.2 ರಂದು ಸರ್ಜರಿಗೆ ಒಳಗಾಗಿದ್ದು, ಈ ವೇಳೆ ಮಹಿಳೆಗೆ 2 ಬಾರಿ ಸಾಮಾನ್ಯ ಅರವಳಿಕೆ ನೀಡಿ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ. ತದ ನಂತರ ಮಹಿಳೆಯು ನಿರಂತರವಾಗಿ ದವಡೆ ನೋವಿನಿಂದ ಬಳಲುತ್ತಿದ್ದು, ಇದಕ್ಕಾಗಿ ಸುಮಾರು 1 ತಿಂಗಳು ನೋವು ನಿವಾರಕ ಮಾತ್ರೆಯನ್ನು ಸೇವಿಸಿದ್ದಾರೆ.

ಇದಾಗಿಯೂ ಮಹಿಳೆ ನೋವು ನಿವಾರಣೆಯಾಗದ ಹಿನ್ನೆಲೆ ಯಲ್ಲಿ ಬೇರೆ ವೈದ್ಯರನ್ನು ಸಂಪರ್ಕಿಸಿದ್ದು, ಈ ವೇಳೆ ನಡೆಸಲಾದ ತಪಾಸಣೆಯಲ್ಲಿ ಶಸ್ತ್ರ ಚಿಕಿತ್ಸೆಯಲ್ಲಿ ಎಡವಟ್ಟಿನಿಂದಾಗಿ ಹಲ್ಲುಗಳ ಕೆಲವೊಂದು ಅಂಶ ಮೂಲಸ್ಥಳದಲ್ಲಿ ಉಳಿದುಕೊಂಡಿದೆ. ಇದರಿಂದಾಗಿ ಇನ್ನೊಂದು ಹಲ್ಲಿನ ನರಗಳಿಗೂ ಪೆಟ್ಟಾಗಿದೆ. ಇದರಿಂದಾಗಿ ನಿರಂತರವಾಗಿ ನರಳುವಂತಾಗಿದೆ ಎನ್ನುವುದು ತಿಳಿಯುತ್ತಿದಂತೆ ಮಹಿಳೆಯು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಮಹಿಳೆಯ ಆರೋಪವನ್ನು ನಿರಾಕರಿಸಿದ ದಂತ ವೈದ್ಯ, “ಸಂವೇದನಾ ಶೀಲ ಹಲ್ಲುಗಳ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆ ಶಸ್ತ್ರ ಚಿಕಿತ್ಸೆ ಉತ್ತಮ ರೀತಿಯಲ್ಲಿ ಆಗಿತ್ತು. ಆದರೆ ಮಹಿಳೆಯು ವೈದ್ಯರ ಆಹಾರ ಕ್ರಮ ಅನುಸರಿಸಿಲ್ಲ ಹಾಗೂ ಕಾಲಕಾಲಕ್ಕೆ ತಪಾಸಣೆಗೆ ಬಾರದ ಕಾರಣ ಸಮಸ್ಯೆ ಎದುರಿಸುವಂತಾಗಿದೆ’ ಎಂದು ವಾದ ಮಂಡಿಸಿದ್ದಾರೆ. ಆದರೆ ಮಂಡಿಸಿರುವ ವಾದಗಳಿಗೆ ಸರಿಯಾದ ದಾಖಲೆ ನೀಡಲು ದಂತ ವೈದ್ಯ ವಿಫ‌ಲರಾಗಿದ್ದಾರೆ. ಎರಡು ಕಡೆಯ ವಾದ ವಿವಾದ ಆಲಿಸಿದ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರು, ಮಹಿಳೆಯ ಶಸ್ತ್ರ ಚಿಕಿತ್ಸೆ ಮಾಡಿರುವ ವೈದ್ಯರು ಸಣ್ಣ ಹಲ್ಲಿನ ಚೂರು ದವಡೆಯಲ್ಲಿ ಉಳಿಸಿರುವುದರಿಂದ ಇನ್ನೊಂದು ಹಲ್ಲಿನ ನರಗಳಿಗೆ ಪೆಟ್ಟಾಗಿದೆ ಎನ್ನುವುದನ್ನು ಕರ್ನಾಟಕ ದಂತ ವೈದ್ಯರ ಮಂಡಳಿ ದೃಢಪಡಿಸಿದೆ.

ಈ ಹಿನ್ನೆಲೆ ಯಲ್ಲಿ ದವಡೆ ಹಲ್ಲಿನ ಶಸ್ತ್ರ ಚಿಕಿತ್ಸೆಗೆ ಪಡೆದುಕೊಂಡ 14,000 ರೂ., ದವಡೆ ಹಲ್ಲಿನ ಸಣ್ಣ ಸಣ್ಣ ತುಂಡುಗಳನ್ನು ಅಲ್ಲಿಯೇ ಉಳಿಸಿ, ಇನ್ನೊಂದು ಹಲ್ಲು ಹಾನಿಗೊಳಿಸಿರುವುದಕ್ಕೆ 1 ಲಕ್ಷ ರೂ. ದಂಡ ಪರಿಹಾರ, ಕಾನೂನು ವ್ಯಾಜ್ಯದ ಬಾಬ್ತು 5000 ರೂ. ಸೇರಿದಂತೆ ಒಟ್ಟು 1.19 ಲಕ್ಷ ರೂ ಜುಲೈ 6ರೊಳಗೆ ಪಾವತಿಸುವಂತೆ ತೀರ್ಪು ನೀಡಿದೆ.

ಟಾಪ್ ನ್ಯೂಸ್

Alanada

Alanda: ಕಲುಷಿತ ನೀರು ಸೇವಿಸಿ ನಿಂಬರ್ಗಾ ಗ್ರಾಮದ 80ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Koratagere: ಚಿನ್ನ ನೀಡುವುದಾಗಿ ಹಣ ಪಡೆದು ವಂಚಿಸಿದ ಪ್ರಕರಣ: ಮೂವರ ಬಂಧನ

Koratagere: ಚಿನ್ನ ನೀಡುವುದಾಗಿ ಹಣ ಪಡೆದು ವಂಚಿಸಿದ ಪ್ರಕರಣ: ಮೂವರ ಬಂಧನ

Aravind-Bellad

Dharwad: ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ: ಶಾಸಕ ಅರವಿಂದ ಬೆಲ್ಲದ್‌ ಭವಿಷ್ಯ

modi (4)

PM Modi ಯಿಂದ ನೆತನ್ಯಾಹುಗೆ ಕರೆ:ನಮ್ಮ ಜಗತ್ತಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ..

1-asas

Belagavi; ಮಹಾನಗರ ಪಾಲಿಕೆ ಸೂಪರ್ ಸೀಡ್ ಮಾಡುವಂತೆ ಬೃಹತ್ ಪ್ರತಿಭಟನೆ

1-qwewqe

Varanasi; ಇದೇನಾ ‘ಸ್ವಚ್ಛ ಭಾರತ’?: ಫೋಟೋ ಮೂಲಕ ಪ್ರಧಾನಿಗೆ ಟಾಂಗ್ ನೀಡಿದ ಅಖಿಲೇಶ್

Election-Bond

Election Bond:ನಿರ್ಮಲಾ, ನಡ್ಡಾ, ಬಿವೈವಿ, ನಳಿನ್‌ ಸೇರಿ ಹಲವರ ವಿರುದ್ಧದ ಎಫ್‌ಐಆರ್‌ಗೆ ತಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Kerala Kannadigas: ಕೇರಳಿಗರಿಗೆ ಕನ್ನಡ ಕಲಿಸಲು ವಿಶೇಷ ತರಗತಿ

8

Arrested: ಜಲಮಂಡಳಿಯ ಸೆಂಟ್ರಿಂಗ್‌ ಸಾಮಗ್ರಿ ಕಳವು ಮಾಡುತ್ತಿದ್ದ ಇಬ್ಬರ ಬಂಧನ 

Fraud: ಸರ್ಕಾರಿ ಕೆಲಸದ ಆಸೆ ತೋರಿಸಿ 28 ಲಕ್ಷ ವಂಚನೆ 

Fraud: ಸರ್ಕಾರಿ ಕೆಲಸದ ಆಸೆ ತೋರಿಸಿ 28 ಲಕ್ಷ ವಂಚನೆ 

Theft: ದ್ವಿಚಕ್ರ ವಾಹನ ಅಡ್ಡಗಟ್ಟಿ ಇಬ್ಬರು ವಿದ್ಯಾರ್ಥಿಗಳ ಚಿನ್ನದ ಸರ ಕಳವು

Theft: ದ್ವಿಚಕ್ರ ವಾಹನ ಅಡ್ಡಗಟ್ಟಿ ಇಬ್ಬರು ವಿದ್ಯಾರ್ಥಿಗಳ ಚಿನ್ನದ ಸರ ಕಳವು

Bengaluru: 2 ದ್ವಿಚಕ್ರ ವಾಹನಕ್ಕೆ ಒಂದೇ ನಂಬರ್‌ ಪ್ಲೇಟ್‌

Bengaluru: 2 ದ್ವಿಚಕ್ರ ವಾಹನಕ್ಕೆ ಒಂದೇ ನಂಬರ್‌ ಪ್ಲೇಟ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Alanada

Alanda: ಕಲುಷಿತ ನೀರು ಸೇವಿಸಿ ನಿಂಬರ್ಗಾ ಗ್ರಾಮದ 80ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Untitled-1

Malpe: ಹುಲ್ಲು ತರಲು ಹೋಗಿದ್ದ ಮಹಿಳೆ ನಾಪತ್ತೆ

Koratagere: ಚಿನ್ನ ನೀಡುವುದಾಗಿ ಹಣ ಪಡೆದು ವಂಚಿಸಿದ ಪ್ರಕರಣ: ಮೂವರ ಬಂಧನ

Koratagere: ಚಿನ್ನ ನೀಡುವುದಾಗಿ ಹಣ ಪಡೆದು ವಂಚಿಸಿದ ಪ್ರಕರಣ: ಮೂವರ ಬಂಧನ

Aravind-Bellad

Dharwad: ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ: ಶಾಸಕ ಅರವಿಂದ ಬೆಲ್ಲದ್‌ ಭವಿಷ್ಯ

modi (4)

PM Modi ಯಿಂದ ನೆತನ್ಯಾಹುಗೆ ಕರೆ:ನಮ್ಮ ಜಗತ್ತಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.