ಅಧಿಕಾರಿಗಳು ತನ್ನ ಮನವಿ ತಿರಸ್ಕರಿಸಿದರೆಂದು ಕಚೇರಿಯೊಳಗೆ ಉಡ ತಂದು ಬಿಟ್ಟ ವ್ಯಕ್ತಿ…
ತನ್ನ ಮನವಿ ಈಡೇರಿಸದಿದ್ದರೆ ಕಚೇರಿಯೊಳಗೆ ಹಾವುಗಳನ್ನು ಬಿಡುವ ಬೆದರಿಕೆ
Team Udayavani, Jul 3, 2023, 5:06 PM IST
ಮಧ್ಯಪ್ರದೇಶ: ತಾನು ಸಲ್ಲಿಸಿದ ಮನವಿಯನ್ನು ಸರಕಾರಿ ಅಧಿಕಾರಿಯೊಬ್ಬರು ತಿರಸ್ಕರಿಸಿದ್ದಾರೆ ಎಂದು ಸಿಟ್ಟಿಗೆದ್ದ ವ್ಯಕ್ತಿಯೋರ್ವ ಸರಕಾರಿ ಅಧಿಕಾರಿಯ ಕಚೇರಿಯೊಳಗೆ ಉಡವನ್ನು ತಂದು ಬಿಟ್ಟಿರುವ ಪ್ರಸಂಗ ಮಧ್ಯಪ್ರದೇಶದ ಚಂದೇರಿಯಲ್ಲಿ ನಡೆದಿದೆ.
ಏನಿದು ಪ್ರಕರಣ: ಮಧ್ಯ ಪ್ರದೇಶದ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬ ತನಗೆ ವಾಸಕ್ಕೆ ಮನೆ ನಿರ್ಮಿಸಲು ಸರಕಾರಿ ಜಾಗ ಮಂಜೂರು ಮಾಡುವಂತೆ ಮುನ್ಸಿಪಲ್ ಅಧಿಕಾರಿಗಳಿಗೆ ಮನವಿಯನ್ನು ಕೊಟ್ಟಿದ್ದಾನೆ ಆದರೆ ಅಧಿಕಾರಿಗಳು ಮನೆ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲು ಕೊಟ್ಟಿದ್ದ ಮನವಿಯನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ವ್ಯಕ್ತಿ ವಾಸ ಮಾಡಲು ಜಾಗವನ್ನು ಗುತ್ತಿಗೆ ನೀಡುವಂತೆಯೂ ಮನವಿ ಮಾಡಿಕೊಂಡಿದ್ದಾನೆ ಆದರೆ ಈತನ ಈ ಮನವಿಗೂ ಅಧಿಕಾರಿಗಳು ಬೆಲೆ ಕೊಡಲೇ ಇಲ್ಲ ಇದರಿಂದ ಕಚೇರಿಗೆ ಅಲೆದು ಅಲೆದು ಸುಸ್ತಾಗಿ ತನ್ನ ಮನವಿಗೆ ಯಾವುದೇ ರೀತಿಯಲ್ಲಿ ಅಧಿಕಾರಿಗಳು ಸ್ಪಂದಿಸುವುದಿಲ್ಲ ಎಂದು ಬೇಸರಗೊಂಡ ವ್ಯಕ್ತಿ ಅಧಿಕಾರಿಗೆ ಏನಾದರು ತೊಂದರೆ ಕೊಡಬೇಕೆಂದು ಆಲೋಚಿಸಿ ಕಚೇರಿ ಒಳಗೆ ಯಾವುದಾದರೂ ವಿಷಕಾರಿ ಸರಿಸೃಪವನ್ನು ಬೀಡಬೇಕೆಂದು ನಿರ್ಧರಿಸಿದ್ದಾನೆ, ಅಸಲಿಗೆ ಈ ವ್ಯಕ್ತಿ ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುವ ಪ್ರವೃತ್ತಿಯನ್ನೂ ಮಾಡುತ್ತಿದ್ದ ಎನ್ನಲಾಗಿದೆ.
ಅದರಂತೆ ಕಳೆದ ಶನಿವಾರ ಒಂದು ಉಡವನ್ನು ಚೀಲದೊಳಗೆ ತುಂಬಿಸಿಕೊಂಡು ಬಂದು ಮುನ್ಸಿಪಾಲಿಟಿ ಕಚೇರಿಯ ಅಧಿಕಾರಿಯ ಕಚೇರಿ ಒಳಗೆ ಬಿಡಲು ಬಂದಿದ್ದಾನೆ ಆದರೆ ಈ ವೇಳೆ ಕಚೇರಿಯಲ್ಲಿ ಅಧಿಕಾರಿ ಇರಲಿಲ್ಲ ಇದರಿಂದ ಕುಪಿತಗೊಂಡ ವ್ಯಕ್ತಿ ಇದೆ ಕಟ್ಟಡದಲ್ಲಿದ್ದ ಇನ್ನೋರ್ವ ಅಧಿಕಾರಿಯ ಕಚೇರಿಯೊಳಗೆ ಉಡವನ್ನು ಬಿಟ್ಟಿದ್ದಾನೆ.
ಇತ್ತ ಕಚೇರಿ ಒಳಗೆ ಉಡ ಕಾಣಿಸುತ್ತಿದ್ದಂತೆ ಅಧಿಕಾರಿಗಳು ಗಾಬರಿಗೊಂಡಿದ್ದಾರೆ ಬಳಿಕ ಅಧಿಕಾರಿಗಳು ವ್ಯಕ್ತಿಯ ಬಳಿ ಸಾಕಷ್ಟು ಮನವಿ ಮಾಡಿದ ಬಳಿಕ ಉಡವನ್ನು ಹಿಡಿದು ಅಲ್ಲಿಂದ ತೆರಳಿದ್ದಾನೆ, ವ್ಯಕ್ತಿ ತೆರಳುವ ವೇಳೆ ನನ್ನ ವಾಸಕ್ಕೆ ಜಾಗ ಮಂಜೂರು ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಷಕಾರಿ ಹಾವುಗಳನ್ನು ಬಿಡುವುದಾಗಿ ಹೇಳಿಕೊಂಡಿದ್ದಾನೆ.
ಅಧಿಕಾರಿಗಳು ಹೇಳೋದೇನು:
ಚಂದೇರಿ ಮುನ್ಸಿಪಲ್ ಕಾರ್ಪೊರೇಶನ್‌ನ ಸಿಎಂಒ ಸಂತೋಷ್ ಸೈನಿ, ಈ ಜಮೀನಿನಲ್ಲಿ ತೋಟರಾಮ್‌ಗೆ ವಸತಿ ಮಂಜೂರಾಗಿದ್ದು, ಈಗಾಗಲೇ ಅವರಿಗೆ ಒಂದು ಲಕ್ಷ ರೂಪಾಯಿಗಳನ್ನು ಮನೆ ನಿರ್ಮಾಣಕ್ಕೆ ಒದಗಿಸಲಾಗಿದೆ, ಆದರೆ ಆ ಹಣವನ್ನು ಆತ ಖರ್ಚು ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Cardless Cash: ಎಸ್ ಬಿಐನ ಪರಿಷ್ಕೃತ “YONO App” ನಲ್ಲಿ ಏನೇನು ಬದಲಾವಣೆಯಾಗಿದೆ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್!
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್
Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.