![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 4, 2023, 6:40 AM IST
ಇಸ್ಲಾಮಾಬಾದ್: ಆರ್ಥಿಕ ದುಃಸ್ಥಿತಿ ಎದುರಿಸುತ್ತಿರುವ ಪಾಕಿಸ್ಥಾನ ಮುಂದಿನ 9 ತಿಂಗಳುಗಳಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯಿಂದ 300 ಕೋಟಿ ಡಾಲರ್ ಸಾಲ ಪಡೆಯಲಿದೆ. ಈ ಮೂಲಕ ಐಎಂಎಫ್ನಿಂದ ಅತೀ ಹೆಚ್ಚು ಸಾಲ ಪಡೆದ ಜಗತ್ತಿನ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ.
ಅನೇಕ ವರ್ಷಗಳಿಂದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ಥಾನ, ಪ್ರಸ್ತುತ ಅತೀ ಹೆಚ್ಚು ಸಾಲ ಪಡೆದ ಜಗತ್ತಿನ ಐದನೇ ರಾಷ್ಟ್ರವಾಗಿದೆ.
ಕಳೆದ 8 ತಿಂಗಳುಗಳಿಂದ ಪಾಕಿಸ್ಥಾನದ ಸರಣಿ ಮನವಿಗಳ ಅನಂತರ 300 ಕೋಟಿ ಡಾಲರ್ ಸಾಲ ನೀಡುವ ಘೋಷಣೆಯನ್ನು ಗುರುವಾರ ಐಎಂಎಫ್ ಮಾಡಿತು. ಹಂತ- ಹಂತವಾಗಿ ಈ ಮೊತ್ತವನ್ನು ಮುಂದಿನ 9 ತಿಂಗಳಲ್ಲಿ ಬಿಡುಗಡೆ ಗೊಳಿಸಲಿದೆ.
ಈ ಮೊದಲು, ಐಎಂಎಫ್ನಿಂದ ಅತೀ ಹೆಚ್ಚು ಸಾಲ ಪಡೆದ ರಾಷ್ಟ್ರಗಳ ಪೈಕಿ ಕ್ರಮವಾಗಿ ಅರ್ಜೆಂಟೀನಾ (4600 ಕೋಟಿ ಡಾಲರ್), ಈಜಿಪ್ಟ್ (1800 ಕೋಟಿ ಡಾಲರ್), ಉಕ್ರೇನ್(1220 ಕೋಟಿ ಡಾಲರ್), ಈಕ್ವೆಡಾರ್(820 ಕೋಟಿ ಡಾಲರ್) ಮತ್ತು ಪಾಕಿಸ್ಥಾನ(740 ಕೋಟಿ ಡಾಲರ್) ಇತ್ತು. ಇದೀಗ ಈಕ್ವೆಡಾರ್‌ಗಿಂತ ಹೆಚ್ಚು ಸಾಲ ಪಡೆದು, ನಾಲ್ಕನೇ ಸ್ಥಾನಕ್ಕೆ ಏರಲಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.