heavy rain; ಕಾಸರಗೋಡು ಜಿಲ್ಲೆ: ಇಂದು ಶಾಲೆಗೆ ರಜೆ
ಶಾಲಾ ಆವರಣದಲ್ಲಿ ಮರ ಬಿದ್ದು ವಿದ್ಯಾರ್ಥಿನಿ ಸಾವು
Team Udayavani, Jul 4, 2023, 6:55 AM IST
ಕಾಸರಗೋಡು: ಜಿಲ್ಲೆಯಾದ್ಯಂತ ಸೋಮವಾರ ಉತ್ತಮ ಮಳೆಯಾಗಿದೆ. ರವಿವಾರದಿಂದ ಬಿರುಸಾಗಿ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿದಿದೆ.
ರವಿವಾರ ರಾತ್ರಿ ಎಡೆಬಿಡದೆ ಸುರಿದಿದ್ದು, ಸೋಮ ವಾರ ಬೆಳಗ್ಗಿನಿಂದ ಮತ್ತಷ್ಟು ಬಿರುಸು ಗೊಂಡಿದೆ. ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇದ್ದು, ಮುನ್ನಚ್ಚರಿಕೆ ಕ್ರಮ ವಾಗಿ ಜಿಲ್ಲಾಡಳಿತವು ಜು. 4ರಂದು ಅಂಗನವಾಡಿಯಿಂದ ಎಸೆಸೆಲ್ಸಿ ತನಕದ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದೆ.
ಪೂರ್ತಿ ಕೇರಳ ರಾಜ್ಯದಲ್ಲಿ ಭಾರೀ ಮಳೆ ಸುರಿಯುವ ಸಂಭವ ಇರುವು ದಾಗಿ ಹವಾಮಾನ ಇಲಾಖೆ ತಿಳಿಸಿದ್ದು, ಸಮುದ್ರ ಪ್ರಕ್ಷುಬ್ಧವಾಗಿರಲಿದೆ.
ರಭಸ ವಾಗಿ ಗಾಳಿ ಕೂಡ ಬೀಸುವ ಸಾಧ್ಯತೆ ಇದ್ದು, ಅಪಾಯಗಳನ್ನು ಎದುರಿಸಲು ಸಜ್ಜಾಗಿರುವಂತೆ ಹವಾಮಾನ ಇಲಾಖೆ ರಾಜ್ಯಕ್ಕೆ ಸೂಚನೆ ರವಾನಿಸಿದೆ. ಗುರು ವಾರದ ಬಳಿಕ ಮಳೆ ಪ್ರಮಾಣ ನಿಧಾನಕ್ಕೆ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕೂಡ್ಲು: 12 ಸೆಂ.ಮೀ. ಮಳೆ
ಕೇರಳ ರಾಜ್ಯದಲ್ಲಿಯೇ ಅತ್ಯಧಿಕ ಮಳೆ ಕಾಸರಗೋಡು ಜಿಲ್ಲೆಯ ಕೂಡ್ಲುವಿನಲ್ಲಿ (12 ಸೆಂ.ಮೀ.) ಸುರಿದಿದೆ.
ಶಾಲಾ ಆವರಣದಲ್ಲಿ ಮರ ಬಿದ್ದು ವಿದ್ಯಾರ್ಥಿನಿ ಸಾವು
ಕುಂಬಳೆ: ಸೋಮವಾರ ಸಂಜೆ ಬೀಸಿದ ಗಾಳಿ ಮಳೆಗೆ ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಪರಿಸರದಲ್ಲಿದ್ದ ಮರವೊಂದು ಮೈಮೇಲೆ ಬಿದ್ದು ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
6ನೇ ತರಗತಿ ವಿದ್ಯಾರ್ಥಿನಿ ಪರ್ಲಾಡ ಬಿ.ಎಂ. ಯೂಸುಫ್ ಅವರ ಪುತ್ರಿ ಆಯಿಷತ್ ಮಿನ್ಹಾ (11) ಮೃತ ಬಾಲಕಿ. ಸಂಜೆ 4ಕ್ಕೆ ಶಾಲೆ ಬಿಡುವ ವೇಳೆಗೆ ಜೋರಾಗಿ ಬೀಸಿದ ಗಾಳಿ ಮಳೆಗೆ ಬೃಹತ್ ಮರ ಉರುಳಿದ್ದು, ಅದೇ ದಾರಿಯಾಗಿ ಸಹಪಾಠಿಯ ಜತೆ ನಡೆದು ಹೋಗುತ್ತಿದ್ದ ಬಾಲಕಿಯ ಮೇಲೆಯೇ ಬಿದ್ದಿತ್ತು.
ರಿಫಾನಾ ಎಂಬ ವಿದ್ಯಾರ್ಥಿನಿಯೂ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾ ಗಿದೆ. ಶಾಲಾ ಅವರಣದಲ್ಲಿ ಹಲವು ಮರಗಳಿದ್ದು ಅವುಗಳ ಸಮೀಪವೇ ವಿದ್ಯುತ್ ತಂತಿಗಳೂ ಹಾದು ಹೋಗಿವೆ. ಅದೃಷ್ಟವಶಾತ್ ಮರದ ಕೊಂಬೆಗಳು ಅದರ ಮೇಲೆ ಬೀಳದ ಕಾರಣ ಸಂಭಾವ್ಯ ದುರಂತ ತಪ್ಪಿದೆ. ಈ ವೇಳೆ ಕಂಬದಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದುದನ್ನು ನೋಡಿದ ಅಧ್ಯಾಪಕರು ಕೆಇಬಿಗೆ ಮಾಹಿತಿ ನೀಡಿದ್ದು, ವಿದ್ಯುತ್ ಪ್ರವಾಹವನ್ನು ಕಡಿತಗೊಳಿಸಿದರು. ಬಿ.ಎಂ. ಯೂಸುಫ್ ಅವರ ಮೂವರು ಮಕ್ಕಳಲ್ಲಿ ಆಯಿಷತ್ ಕೊನೆಯವಳಾಗಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Madikeri: ದೇಗುಲದಲ್ಲಿ ಸಮಾನತೆಯೇ ಉದ್ದೇಶ ; ಕಟ್ಟೆಮಾಡಿನ ಶ್ರೀ ಮಹಾ ಮೃತ್ಯುಂಜಯ ವಿವಾದ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Kodagu: ಯೋಧ ದಿವಿನ್ ಪಂಚಭೂತಗಳಲ್ಲಿ ಲೀನ
Kasaragod ಅಪರಾಧ ಸುದ್ದಿಗಳು: ಅಂಗಡಿಗೆ ಲಾರಿ ಢಿಕ್ಕಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.