ಪಿರಿಯಾಪಟ್ಟಣದಲ್ಲಿ ಹುಚ್ಚು ನಾಯಿ ದಾಳಿ: ಮೂವರು ಬಾಲಕರು ಸೇರಿ ಒಂಬತ್ತು ಮಂದಿಗೆ ಗಾಯ
Team Udayavani, Jul 4, 2023, 8:45 PM IST
ಪಿರಿಯಾಪಟ್ಟಣ: ಹುಚ್ಚು ನಾಯಿಯೊಂದು ಮೂವರು ಬಾಲಕರು ಸೇರಿ ಒಂಬತ್ತು ಮಂದಿಗೆ ಕಚ್ಚಿರುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಪಿರಿಯಾಪಟ್ಟಣದ ಈಡಿಗರ ಬೀದಿಯ ಬಳಿ ಈ ಘಟನೆ ನಡೆದಿದ್ದು ಪಟ್ಟಣದ ನಿವಾಸಿ ಇಬಾದುಲ್ಲಾ ಖಾನ್ ಮಗ ಫರಾನ್ ಎಂಬ 9 ವರ್ಷದ ಮಗುವಿಗೆ ಮೊದಲು ಹುಚ್ಚುನಾಯಿ ಕಚ್ಚಿದ್ದು ಈ ಬಗ್ಗೆ ಇಬಾದುಲ್ಲಾ ಖಾನ್ ಪಟ್ಟಣ ಪಂಚಾಯಿತಿಗೂ ಮಾಹಿತಿ ನೀಡಿದ್ಧಾರೆ. ಈ ಮಾಹಿತಿ ನಿರ್ಲಕ್ಷಿಸಿದ ಪುರಸಭೆಯವರು ಯಾವುದೆ ಕ್ರಮವಹಿಸಿಲ್ಲ.
8 ಮಂದಿಗೆ ಕಡಿತ
ಇದೇ ನಾಯಿ ಸಂಜೆಯ ವೇಳೆಗೆ ವರ್ಧನ್ ಆರ್ಯ ಎಂಬ 10 ವರ್ಷದ ಮಗುವಿನ ಮೇಲೆ ಮಾರಣಾಂತಿಕವಾಗಿ ಕಚ್ಚಿದ್ದು ತೊಡೆಯ ಭಾಗ, ಕಾಲುಗಳಿಗೆ ಕಚ್ಚಿ ಗಾಯಗೊಳಿಸಿದೆ. ಇದಾದ ನಂತರ ಜುಬೇರ್ ಶರೀಫ್, ದರ್ಶನ್, ಸುಯೇಬ್‌ಶರೀಫ್, ಇಬಾದುಲ್ಲಾಖಾನ್ ರನ್ನು ಕಡಿದಿರುವ ನಾಯಿ ಒಂದೆ ದಿನ 7 ಮಂದಿಗೆ ಕಚ್ಚಿದೆ. ಮಗುವಿಗೆ ಜಬೀರ್ ಶರೀಫ್, ರಂಗಮ್ಮ ಎಂಬ ಮಹಿಳೆಗೆ ತೀವ್ರವಾಗಿ ಗಾಯಗೊಳಿಸಿರುವ ನಾಯಿ ತೊಂದರೆ ಉಂಟು ಮಾಡಿದೆ.
ಮೈಸೂರಿಗೆ ರವಾನೆ
ನಾಯಿಕಡಿತದಿಂದ ದಾಖಲಾದ ಇಬ್ಬರಿಗೆ ಬೆಳಿಗ್ಗೆ ರ್‍ಯಾಡೀಸ್ ಇಮನೋಗೋಬಿನ್ ಎಂಬ ಇಂಜೆಕ್ಷನ್ ನೀಡಲಾಗಿತ್ತು. ತದ ನಂತರ ಬಂದ 8 ಮಂದಿಗೆ ಇಂಜೆಕ್ಷನ್ ಇಲ್ಲವಾದ ಕಾರಣ ಎಲ್ಲರನ್ನು ಮೈಸೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಇವರ ಬಗ್ಗೆ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಗಳು ಮೈಸೂರಿನಲ್ಲಿ ಚಿಕಿತ್ಸೆ ಕೊಡಿಸುವ ಸಂಬಂಧ ಕ್ರಮವಹಿಸಲಿದ್ದಾರೆ. ಇದಲ್ಲದೆ ಬೀದಿ ನಾಯಿಗಳ ಹಾವಳಿಯ ಬಗ್ಗೆ ಘಟನೆಯಲ್ಲಿ ಹುಚ್ಚುನಾಯಿ ಕಡಿತಕ್ಕೆ ಒಳಗಾದವರ ಬಗ್ಗೆ ಕ್ರಮವಹಿಸುವಂತೆ ಪತ್ರಬರೆದು ಗಮನಕ್ಕೆ ತರಲಾಗುವುದು ಎಂದು ನಾಯಿ ಕಡಿತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ಪ್ರಮೋದ್ ತಿಳಿಸಿದ್ದಾರೆ.
ಬೀದಿನಾಯಿಗಳ ಹಾವಳಿ
ಪಿರಿಯಾಪಟ್ಟಣದ ತುಂಬೆಲ್ಲಾ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿಸುವ ಸಂಬಂಧ ಪುರಸಭೆ ಕ್ರಮವಹಿಸಬೇಕು. ಈ ಮೂಲಕ ಬೀದಿನಾಯಿಗಳ ಹಾವಳಿಯನ್ನು ತಡೆಗಟ್ಟಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಹೀಗೆ ನಾಯಿಕಡಿತಕ್ಕೆ ಒಳಗಾದವರಿಗೆ ಸೂಕ್ತ ಚಿಕಿತ್ಸೆ ಸಿಗಬೇಕು ಮತ್ತು ಯಾರಾದರೂ ಹುಚ್ಚುನಾಯಿ ಬಗ್ಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ತಕ್ಷಣ ಪುರಸಭೆವತಿಯಿಂದ ಸ್ಪಂಧಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ನಾಯಿ ಹುಚ್ಚು ಹಿಡಿದಿದ್ದು ನನ್ನ ಮಗ ಸೇರಿದಂತೆ ಇಬ್ಬರು ಮಕ್ಕಳಿಗೆ ಕಡಿದಿರುವ ಬಗ್ಗೆ ಪುರಸಬೆ ಕಚೇರಿಗೆ ಹೋಗಿ ತಿಳಿಸಿದ್ದೇನೆ ಆದರೆ ಯಾವ ಅಧಿಕಾರಿಯೂ ಕ್ರಮವಹಿಸಿಲ್ಲ ಇವರ ನಿರ್ಲಕ್ಷದಿಂದ 8 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ಧಾರೆ. ಇಬಾದುಲ್ಲಾಖಾನ್ ಕುಂಬಾರ ಬೀದಿ ನಿವಾಸಿ.
ಹುಚ್ಚುನಾಯಿ ದಾಳಿಮಾಡಿ ಕಚ್ಚಿರುವ ಬಗ್ಗೆ ಮಾಹಿತಿ ಪಡೆಯಲಾಗುತ್ತಿದ್ದು ಶೀಘ್ರದಲ್ಲಿ ಕ್ರಮವಹಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮುತ್ತಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ಮುಂದುವರಿದ ಮಳೆಯ ಆರ್ಭಟ: ಜು.5 ರಂದು ದಕ್ಷಿಣಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.