ಸಂಸದೆಯ ಚುಡಾಯಿಸಿದನಿಗೆ 364 ದಿನ ಜೈಲು ಶಿಕ್ಷೆ!
Team Udayavani, Jul 5, 2023, 7:40 AM IST
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ರಾಜಕಾರಣಿ, ಕಾಂಗ್ರೆಸ್ ಸದಸ್ಯೆ ಪ್ರಮಿಳಾ ಜಯಪಾಲ್ ಅವರನ್ನು ಹಿಂಬಾಲಿಸಿ, ಚುಡಾಯಿಸಿ, ಜೀವ ಬೆದರಿಕೆ ಹಾಕಿರುವ ಅಪರಾಧದ ಮೇರೆಗೆ 49 ವರ್ಷದ ವ್ಯಕ್ತಿಯೊಬ್ಬನಿಗೆ ವಾಷಿಂಗ್ಟನ್ ನ್ಯಾಯಾಲಯವು 364 ದಿನಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.
ಬ್ರೆಟ್ ಫಾರ್ಸೆಲ್ ಎಂಬಾತ ಹ್ಯಾಂಡ್ಗನ್ ಹಿಡಿದು, ಜಯಪಾಲ್ ಅವರ ನಿವಾಸದೆದುರು ಹಾಜರಾಗಿದ್ದ. ಅಲ್ಲದೇ, ಪ್ರಮಿಳಾ ಅವರನ್ನು ಭಾರತಕ್ಕೆ ಹಿಂದಿರುಗುವಂತೆಯೂ, ಇಲ್ಲದಿದ್ದಲ್ಲಿ ಅವರನ್ನು ಕೊಲ್ಲುವುದಾಗಿಯೂ ಬೆದರಿಕೆ ಒಡ್ಡಿದ್ದಾನೆ. ಬಳಿಕ ಸೀಟಲ್ ಪೊಲೀಸರು ಆತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ವೇಳೆ ಪ್ರಮಿಳಾ ಅವರಿಗೆ ಕಿರುಕುಳ ನೀಡಿರುವುದನ್ನು ಪರಿಗಣಿಸಿ, ನ್ಯಾಯಾಲಯವು ಆತನಿಗೆ ಶಿಕ್ಷೆ ವಿಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.