NSG ಕಮಾಂಡೋ ಹೆಸರಿನಲ್ಲಿ ಮನೆ ಬಾಡಿಗೆ: ವಂಚನೆ
Team Udayavani, Jul 5, 2023, 5:04 AM IST
ಮಂಗಳೂರು: ಮನೆ ಬಾಡಿಗೆಗೆ ಪಡೆಯುವುದಾಗಿ ಹೇಳಿ ಎನ್ಎಸ್ಜಿ (ರಾಷ್ಟ್ರೀಯ ಭದ್ರತಾ ದಳ) ಕಮಾಂಡೋ ಹೆಸರಿನಲ್ಲಿ ವಂಚಿಸಿರುವ ಘಟನೆ ನಡೆದಿದೆ.
ಮನೆ ಮಾಲಕರೊಬ್ಬರು ಮನೆ ಬಾಡಿಗೆಗೆ ಇದೆ ಎಂದು ವೆಬ್ಸೈಟ್ನಲ್ಲಿ ಜಾಹೀರಾತು ಹಾಕಿದ್ದರು. ಜು. 2ರಂದು 7735161638ರಿಂದ ಮಾಲಕರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ತಾನು ಎನ್ಎಸ್ಜಿ ಕಮಾಂಡೋ ಆಗಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕರ್ತವ್ಯಕ್ಕೆ ವರ್ಗಾವಣೆಯಾಗಿದೆ.
ಬಾಡಿಗೆಗೆ ಮನೆ ಬೇಕಾಗಿದ್ದು ಮುಂಗಡ ಹಣ ಪಾವತಿ ಮಾಡುವುದಾಗಿ ತಿಳಿಸಿದ್ದ. ಬಳಿಕ ಎನ್ಎಸ್ಜಿಯ ನಕಲಿ ಗುರುತು ಚೀಟಿ, ಆಧಾರ್ ಕಾರ್ಡ್, ಪಾನ್ಕಾರ್ಡ್, ಆರ್ಮಿ ಕ್ಯಾಂಟೀನ್ ಕಾರ್ಡ್ಗಳನ್ನು ಕಳುಹಿಸಿ, ಹೆಡ್ಕ್ವಾರ್ಟಸ್ನಿಂದ ಕರೆ ಮಾಡುತ್ತಾರೆ ಎಂದು ಹೇಳಿದ್ದ. ಹತ್ತು ನಿಮಿಷಗಳ ಅನಂತರ ಹೆಡ್ಕ್ವಾರ್ಟಸ್ನಿಂದ ಕರೆ ಮಾಡುತ್ತಿರುವುದಾಗಿ ಹೇಳಿದ ಇನ್ನೋರ್ವ ವ್ಯಕ್ತಿ ಮಾಲಕರಿಗೆ ಕರೆ ಮಾಡಿ ಬಾಡಿಗೆ ಮನೆಯ ಮುಂಗಡ ಹಣ ಪಾವತಿಸಲು ಖಾತೆಯನ್ನು ಖಚಿತಪಡಿಸಿಕೊಳ್ಳಬೇಕು.
ಅದಕ್ಕಾಗಿ 5 ರೂ.ಗಳನ್ನು ಪಾವತಿಸಿ ಎಂದು ತಿಳಿಸಿದ. ಅದರಂತೆ ಮಾಲಕರು 5 ರೂ.ಗಳನ್ನು ಪಾವತಿಸಿದರು. ಬಳಿಕ ಮಾಲಕರ ಖಾತೆಗೆ 5 ರೂ. ಜಮೆಯಾಗಿತ್ತು. ಆದರೆ ಬಳಿಕ ಮಾಲಕರ ಖಾತೆಯಿಂದಲೇ ಹಂತ ಹಂತವಾಗಿ 50,000 ರೂ. ಮತ್ತು 20,000 ರೂ. ಸೇರಿದಂತೆ ಒಟ್ಟು 70,000 ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು
Tulu Cinema: ತುಳುನಾಡಿನ ಗ್ರಾಮೀಣ ಕಥಾನಕ ತೆರೆದಿಟ್ಟ “ದಸ್ಕತ್’
Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್ ಟೀಕೆ
Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.