Bangalore mysore expressway: ಎಕ್ಸ್‌ಪ್ರೆಸ್ ವೇನಲ್ಲಿ ತಗ್ಗಿದ ಅಪಘಾತ
Team Udayavani, Jul 5, 2023, 3:03 PM IST
ರಾಮನಗರ: ನಿರಂತರ ಅಪಘಾತಗಳಿಂದಾಗಿ ಡೆತ್‌ವೇ ಎಂಬ ಕಳಂಕಕ್ಕೆ ಪಾತ್ರವಾಗಿದ್ದ ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ಕಳೆದ 15 ದಿನಗಳಿಂದ ಅಪಘಾತಗಳ ಪ್ರಮಾಣ ತಗ್ಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಹೌದು.., ಸಾಲು ಸಾಲು ಅಪಘಾತಗಳಿಂದ ಸಾವಿನ ಹೆದ್ದಾರಿ ಎಂಬ ಕುಖ್ಯಾತಿ ಪಡೆದಿದ್ದ ಎನ್‌ಎಚ್ 275ರ ಎಕ್ಸ್‌ಪ್ರೆಸ್‌ವೇ ಅಪಘಾತಗಳು ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ರಾಜ್ಯ ಸರ್ಕಾರದ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಹೆದ್ದಾರಿ ಅವ್ಯವಸ್ಥೆಯ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದು, ಇದೀಗ ಜಿಲ್ಲಾ ಪೊಲೀಸ್ ಇಲಾಖೆ ಅಪಾ ಘಾತ ನಿಯಂತ್ರಣಕ್ಕೆ ಕಳೆದ 15 ದಿನಗಳಿಂದ ಗಂಭೀರ ಕ್ರಮ ಕೈಗೊಂಡ ಪರಿಣಾಮ ಈ ತಿಂಗಳು ಅಪಘಾತದ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಜೂನ್‌ನಲ್ಲಿ ತಗ್ಗಿದ ಅಪಘಾತ: ಬೆಂಗಳೂರು ಮೈಸೂ ರು ಎಕ್ಸ್‌ಪ್ರೆಸ್ ವೇನಲ್ಲಿ ಜೂನ್ ತಿಂಗಳಲ್ಲಿ ಅಪಘಾತದ ಪ್ರಮಾಣ ತಗ್ಗಿದೆ. ಜೂನ್ ತಿಂಗಳಲ್ಲಿ 12 ಮಾರಣಾಂ ತಿಕ ಅಪಘಾತಗಳು ಸಂಭವಿಸಿದ್ದು, 14 ಮಂದಿ ಸಾವಿಗೀಡಾಗಿದ್ದಾರೆ. ಇನ್ನು ಸಾಮಾನ್ಯ ಅಪಘಾತಗಳಲ್ಲಿ 47 ಮಂದಿ ಗಾಯಗೊಂಡಿದ್ದಾರೆ. ಎರಡು ದಿನಗಳ ಹಿಂದೆ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಅವಘಡದಲ್ಲಿ 22 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಗಾಯಾಳುಗಳ ಸಂಖ್ಯೆ ಈ ತಿಂಗಳು ಹೆಚ್ಚಾಗಿದೆ. ಅದರಲ್ಲೂ ಕಳೆದ 15 ದಿನಗಳಲ್ಲಿ ಸಂಭವಿಸಿರುವ ಅಪಘಾತಗಳ ಪ್ರಮಾಣ ತೀರಾ ಕಡಿಮೆ ಇದ್ದು, ಜೂ.15ರಿಂದ 8 ಅಪಘಾತಗಳು ಸಂಭವಿಸಿ 6 ಮಂದಿ ಸಾವಿಗೀಡಾಗಿ ದ್ದಾ ರೆ. 2023ರ ಜನವರಿ ಯಿಂದ ಮೇ ತಿಂಗಳ ವರೆಗೆ ಎಕ್ಸ್‌ಪ್ರೆಸ್ ವೇನಲ್ಲಿ 85 ಮಾರಣಾಂತಿಕ ಅಪಘಾತ ಗಳ ಲ್ಲಿ 91 ಮಂದಿ ಸಾವಿಗೀಡಾಗಿದ್ದು, 230 ಸಾಮಾನ್ಯ ಅಪಘಾತಗಳಲ್ಲಿ 365 ಮಂದಿ ಗಾಯಗೊಂಡಿದ್ದಾರೆ.
ಫಲ ನೀಡಿದ ಪೊಲೀಸ್ ಪರಿಶ್ರಮ: ಬೆಂ-ಮೈ ಹೆದ್ದಾರಿಯಲ್ಲಿ ಅಪಘಾತ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್ ಇಲಾಖೆ ಅಪಘಾತ ನಿಯಂತ್ರಣಕ್ಕೆ ರಸ್ತೆಗಿಳಿದು ಅವ್ಯವಸ್ಥೆಯನ್ನು ಸರಿಮಾಡಲು ಮುಂದಾಗಿದ್ದು, ಅಪಘಾತ ನಿಯಂತ್ರಣಕ್ಕೆ ಕಾರಣವಾಗಿದೆ. ಟೋಲ್ ಪ್ಲಾಜಾಗಳಲ್ಲಿ ಪೊಲೀಸರು ಪ್ರಯಾಣಿಕರಲ್ಲಿ ಸಂಚಾರ ಸುರಕ್ಷತೆಯ ಪಾಠ ಹೇಳುವ ಜೊತೆಗೆ ಹೈವೇ ಪೆಟ್ರೋಲಿಂಗ್ ಸೇರಿದಂತೆ ಹಲವು ಸಂಚಾರ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಪ್ರಯಾಣಿಕರಲ್ಲಿ ಎಚ್ಚರಿಕೆ ಮೂಡಿಸಿದ್ದು ಅಪಘಾತ ನಿಯಂತ್ರಣಕ್ಕೆ ಸಹಕಾರಿಯಾಗಿದೆ.
ವೇಗ ನಿಯಂತ್ರಣಕೆ ಬಂತು ರಾಡಾರ್‌ಗನ್!:
ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಶರವೇಗದಲ್ಲಿ ಸಂಚರಿಸುವ ವಾಹನಗಳಿಗೆ ಬ್ರೇಕ್ ಹಾಕಲು ಇದೀಗ ಪೊಲೀಸ್ ಇಲಾಖೆ ರಾಡಾರ್ ಗನ್ ಹಿಡಿದು ಎಕ್ಸ್‌ಪ್ರೆಸ್ ವೇಗಿಳಿದಿದೆ. ಬೆಂ-ಮೈ ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ವಾಹನಗಳಿಗೆ ಗರಿಷ್ಠ ವೇಗಮಿತಿಯನ್ನು 100 ಕಿ.ಮೀ. ಎಂದು ನಿಗದಿ ಪಡಿಸಲಾಗಿತ್ತು. ಆದರೆ, ವಾಹನ ಚಾಲಕರು 120 ರಿಂದ 160 ಕಿ.ಮೀ. ವೇಗದವರೆಗೆ ಚಾಲನೆ ಮಾಡುತ್ತಿದ್ದರು. ಈ ಮಿತಿ ಮೀರಿದ ವೇಗ ಅಪಘಾತಕ್ಕೆ ಪ್ರಮುಖ ಕಾರಣ ಎಂಬು ದು ಪೊಲೀಸರಿಗೆ ಮನದಟ್ಟಾದ ಹಿನ್ನೆಲೆಯಲ್ಲಿ ವೇಗಕ್ಕೆ ಬ್ರೇಕ್ ಹಾಕಲು ರಾಡರ್‌ಗನ್ ಹಿಡಿದು ರಸ್ತೆಗೆ ಇಳಿದಿದ್ದಾರೆ. ರಾಡಾರ್‌ಗನ್ ಮೂಲಕ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ವೇಗದ ಮೇಲೆ ನಿಗಾವಹಿಸಲಾಗುವುದು. ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿವರ ಚಿತ್ರ ಸಮೇತವಾಗಿ ಕ್ಯಾಮರಾದಲ್ಲಿ ಸೆರೆಯಾಗಲಿದೆ. ಇದರ ಆಧಾರದ ಮೇಲೆ ಪೊಲೀಸರು ಈಗಾಗಲೇ ಹೆದ್ದಾರಿಯಲ್ಲಿ ಅಳವಡಿಸಿರುವ ಬ್ಯಾರಿಕೇಡ್ ಗಳ ಸಹಾಯದಿಂದ ಅಂತಹ ವಾಹನವನ್ನು ತಡೆದು ದಂಡ ವಿಧಿಸುವ ಮೂಲಕ ಅತಿವೇಗದಿಂದ ವಾಹನ ಚಾಲನೆ ಮಾಡುವ ಚಾಲಕರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಮಂಗಳ ವಾರ(ಜು.4)ಮಧ್ಯಾಹ್ನದಿಂದಲೇ ರಾಡಾರ್ ಗನ್ ಮೂಲಕ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿರುವ ಪೊಲೀಸ್ ಇಲಾಖೆ ಅತಿವೇಗದ ಹತ್ತಾರು ವಾಗನಗಳ ಚಾಲಕರಿಗೆ ದಂಡ ಹಾಕಿದ್ದಾರೆ. ವೇಗದ ಜೊತೆಗೆ ಅಡ್ಡಾದಿಡ್ಡಿ ಚಾಲನೆ, ಸೀಟ್ ಬೆಲ್ಟ್ ಸೇರಿದಂತೆ ಸುರಕ್ಷತಾ ಕ್ರಮಗಳ ಬಗ್ಗೆಯೂ ರಾಡಾರ್‌ಗನ್ ನಿಗಾವಹಿಸುತ್ತದೆ.
ಎಡಿಜಿಪಿ ಪ್ರಶಂಸೆ: ರಾಮನಗರ ಜಿಲ್ಲಾ ಪೊಲೀಸರ ಈ ಕ್ರ ಮ ದ ಬಗ್ಗೆ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿ ಜಿಸಿ ಅಲೋಕ್‌ಕುಮಾರ್ ಟ್ವೀಟ್ ಮೂಲಕ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಜೂ.27ರಂದು ಅಲೋಕ್‌ಕುಮಾರ್ ಬೆಂ - ಮೈ ಹೆದ್ದಾರಿ ಅವ್ಯವಸ್ಥೆಗೆ ಸಂಬಂಧಿಸಿದಂತೆ ಹೆದ್ದಾರಿ ಪರಿಶೀಲನೆ ನಡೆಸಿದರು. ಇನ್ನು ಎಡಿಜಿಪಿ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಟ್ವೀಟಿಗರು, ಎಕ್ಸ್‌ಪ್ರೆಸ್ ವೇನಲ್ಲಿ 120 ಕಿ.ಮೀ. ವೇಗ ಮಿತಿ ಇದ್ದು 90 ಕಿ.ಮೀ. ವೇಗಕ್ಕೆ ದಂಡ ವಿಧಿಸುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ವೇಗ ನಿಯಂತ್ರಣ ಮಾಡಿರುವ ಕ್ರಮವನ್ನು ಪ್ರಶಂಸಿಸಿದ್ದಾರೆ.
ಏನಿದು ರಾಡಾರ್ ಗನ್?: ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ವೇಗ ಕಂಡುಹಿಡಿಯಲು ಸಂಚಾರ ಪೊಲೀಸರು ಬಳಸುವ ವೈಜ್ಞಾನಿಕ ಸಾಧನವೇ ರಾಡಾರ್‌ಗನ್. ಅತ್ಯಾಧುನಿಕ ತಂತ್ರಜ್ಞಾನದಿಂದ ಸಿದ್ಧಪಡಿಸಿರುವ ರಾಡಾರ್‌ಗನ್ ಅನ್ನು ಪೊಲೀಸ್ ವಾಹನವೊಂದಕ್ಕೆ ಅಳವಡಿಸಲಾಗಿರುತ್ತದೆ. ಇದು ವೇಗವಾಗಿ ದೃಶ್ಯವನ್ನು ಸೆರೆ ಹಿಡಿಯುವ ಕ್ಯಾಮೆರಾವನ್ನು ಹೊಂದಿರುತ್ತದೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನದತ್ತ ಗುರಿ ಮಾಡಿ ಗನ್ ಮೂಲಕ ರಾಡಾರ್ ಕಿರಣಗಳನ್ನು ಹಾಯಿಸಲಾಗುತ್ತದೆ. ರಾಡಾರ್ ಕಿರಣಗಳು ವಾಹನವನ್ನು ತಲುಪಿ ಹಿಂದಿರುಗಲು ತೆಗೆದುಕೊಳ್ಳುವ ಸಮಯವನ್ನು ಆಧರಿಸಿ ವಾಹನದ ವೇಗವನ್ನು ಅಳತೆ ಮಾಡಲಾಗುತ್ತದೆ. ಇನ್ನು ವಾಹನದಲ್ಲಿ ಈ ರಾಡಾರ್ ಗನ್‌ಗೆ ಲ್ಯಾಪ್‌ಟಾಪ್ ಸಂಪರ್ಕ ನೀಡಿದ್ದು, ವಾಹನದ ಚಿತ್ರದ ಸಮೇತವಾಗಿ ವೇಗವಾಗಿ ಚಲಿಸಿದ್ದಕ್ಕೆ ಪೋಟೋ ಸಮೇತ ದಾಖಲೆ ನೀಡಿ ದಂಡವನ್ನು ವಿಧಿಸಲಾಗುತ್ತದೆ. ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಸಂಚರಿಸುವ ವಾಹನಗಳಿಗೆ ಕಡಿವಾಣ ಹಾಕಲು ಇದು ಸಹಕಾರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ
Winter Session Issue: ಬಂಧನ, ಪೊಲೀಸ್ ದೌರ್ಜನ್ಯ: ಡಿಜಿಪಿಗೆ ಸಿ.ಟಿ.ರವಿ ದೂರು
Valmiki Nigama: ಜಪ್ತಿ ಮಾಡಿರುವ 6.11 ಕೋಟಿ ರೂ. ಬಿಡುಗಡೆಗೆ ಸೂಚನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.