ಯಡಮೊಗೆ; ಕಾಲು ಸಂಕದಿಂದ ಆಯತಪ್ಪಿ ನದಿಗೆ ಬಿದ್ದು ವೃದ್ಧ ಮೃತ್ಯು
Team Udayavani, Jul 5, 2023, 4:27 PM IST
ಸಿದ್ದಾಪುರ(ಕುಂದಾಪುರ) : ಇಲ್ಲಿನ ಯಡಮೊಗೆ ಗ್ರಾಮದಲ್ಲಿ ಮಂಗಳವಾರ ಸಂಜೆ ಕುಬ್ಜಾ ನದಿಗೆ ಅಡ್ಡಲಾಗಿ ಹಾಕಿದ್ದ ಖಾಯಂ ಸಣ್ಣ ಸೇತುವೆಗೆ ಅಡ್ಡಲಾಗಿದ್ದ ಮರದಿಂದ ಮಾಡಿದ್ದ ತಾತ್ಕಾಲಿಕ ಕಾಲು ಸಂಕದಿಂದ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ವೃದ್ಧರೊಬ್ಬರು ನೀರು ಪಾಲಾದ ಘಟನೆ ನಡೆದಿದೆ.
ಮೃತ ದುರ್ದೈವಿ ಶೇಷಾದ್ರಿ ಐತಾಳ್ (73) ಎನ್ನುವವರಾಗಿದ್ದು,ಇವರು ಕಮಲಶಿಲೆ ದೇವಾಲಯದಲ್ಲಿ ಹಿರಿಯ ಅರ್ಚಕರಾಗಿ ಪೂಜಾ ವಿಧಿಗಳನ್ನು ನಡೆಸುತ್ತಿದ್ದರು. ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಅವರ ಮನೆಯ ಬಳಿ ಘಟನೆ ನಡೆದಿದೆ. ಮೃತ ದೇಹ ಬುಧವಾರ ಬೆಳಗ್ಗೆ 10. 45ರ ಸುಮಾರಿಗೆ ಬಿದ್ದ ಸ್ಥಳದ 50 ಮೀಟರ್ ದೂರದಲ್ಲಿ ಪತ್ತೆಯಾಗಿದೆ.ಮೃತದೇಹವನ್ನು ಅಂಪಾರು ವಲಯದ ಶೌರ್ಯ ವಿಪತ್ತು ತಂಡದ ಮಂಜುನಾಥ್ ನಾಯ್ಕ್ ಮತ್ತು ತಂಡದವರು ಮೇಲಕೆತ್ತುವಲ್ಲಿ ಸಹಕರಿಸಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಪೊಲೀಸರು ಸ್ಥಳದಲ್ಲೇ ಹಾಜರಿದ್ದು ಸ್ಥಳ ತನಿಖೆ ವರದಿ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.