Goa; ಮೈದುಂಬಿಕೊಂಡ ಹರ್ವಳೆ ಜಲಪಾತ; ಪವಿತ್ರ ಯಾತ್ರಾ ಸ್ಥಳವಿದು
Team Udayavani, Jul 5, 2023, 5:32 PM IST
ಪಣಜಿ: ಮಳೆಗಾಲದಲ್ಲಿ ಪ್ರಸಿದ್ಧಿ ಪಡೆದಿರುವ ಹಾಗೂ ವಿಶ್ವ ಪ್ರವಾಸಿ ತಾಣವಾಗಿ ಮಾರ್ಪಟ್ಟಿರುವ ಹರ್ವಳೆ ಜಲಪಾತ ಇದೀಗ ಮೈದುಂಬಿಕೊಂಡಿದೆ. ಕಳೆದ ಎಂಟು-ಹತ್ತು ದಿನಗಳಿಂದ ಗೋವಾದೆಲ್ಲೆಡೆ ಸುರಿಯುತ್ತಿರುವ ಭಾರೀ ಮಳೆಗೆ ಜಲಪಾತ ಧುಮ್ಮಿಕ್ಕುತ್ತಿದೆ.
ಹರ್ವಳೆ ಜಲಪಾತವು ಗೋವಾದ ಸಾಖಳಿ ಪಟ್ಟಣದ ಸಮೀಪದಲ್ಲಿದೆ ಮತ್ತು ಬಿಚೋಲಿ ಪಟ್ಟಣದಿಂದ ಸುಮಾರು 9 ಕಿಮೀ. ದೂರದಲ್ಲಿದೆ. ಈ ಜಲಪಾತದ ಎದುರು ಶ್ರೀ ರುದ್ರೇಶ್ವರ ದೇವಸ್ಥಾನವಿದೆ, ಇದನ್ನು ಪವಿತ್ರ ಯಾತ್ರಾ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ಪ್ರದೇಶವು ಧಾರ್ಮಿಕ ಮಹತ್ವವನ್ನು ಪಡೆದುಕೊಂಡಿದೆ. ಈ ಜಲಪಾತಕ್ಕೆ ಹೋಗುವ ದಾರಿಯಲ್ಲಿ ಸಮೀಪದಲ್ಲಿ ‘ಪಾಂಡವ ಕಾಲೀನ ಗುಹೆಯಿದೆ. ಗೋವಾಕ್ಕೆ ಬರುವ ಪ್ರವಾಸಿಗರು ಗುಹೆಗೆ ಭೇಟಿ ನೀಡಬಹುದಾಗಿದೆ.
ಹರ್ವಳೆ ಜಲಪಾತವು ಅತೀ ಎತ್ತರದ ಜಲಪಾತವಲ್ಲದಿದ್ದರೂ ಅತ್ಯಾಕರ್ಷಣೀಯ ಜಲಪಾತವಾಗಿದೆ.ಈ ಜಲಪಾತದಲ್ಲಿ 24 ಅಡಿ ಎತ್ತರದಿಂದ ನೀರು ಬೀಳುತ್ತದೆ. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಈ ಜಲಪಾತ ದೇಶಿ ಹಾಗೂ ವಿದೇಶಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಪ್ರವಾಸಿಗರು ಈ ಜಲಪಾತದ ದೃಶ್ಯವನ್ನು ಆನಂದಿಸಲು ಮತ್ತು ವರ್ಷದಲ್ಲಿ ಪ್ರವಾಸೋದ್ಯಮವನ್ನು ಆನಂದಿಸಲು ಜಲಪಾತದ ಕಡೆಗೆ ಹೆಜ್ಜೆ ಹಾಕುತ್ತಾರೆ. ಭಾನುವಾರ ಮತ್ತು ಇತರ ರಜಾದಿನಗಳಲ್ಲಿ, ಜಲಪಾತವು ಕಿಕ್ಕಿರಿದಿರುತ್ತದೆ. ಸದ್ಯ ಈ ಜಲಪಾತ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗುತ್ತಿದೆ. ಮಾನ್ಸೂನ್ ಪ್ರವಾಸೋದ್ಯಮವು ನಿಧಾನವಾಗಿ ಅಭಿವೃದ್ಧಿ ಹೊಂದುವ ಲಕ್ಷಣಗಳಿವೆ.
ಜಲಪಾತವು ಮಳೆಕಾಡಿಗೆ ಹೆಸರುವಾಸಿಯಾಗಿದ್ದರೂ, ಪ್ರವಾಸೋದ್ಯಮವನ್ನು ಆನಂದಿಸುವಾಗ ಪ್ರತಿಯೊಬ್ಬರೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಈ ಜಲಪಾತದ ನೀರಿನಲ್ಲಿ ಈಜುವುದು ಅಪಾಯಕಾರಿ. ನೀರಿನಲ್ಲಿ ಫೋಟೋ ಶೂಟ್ ಅಥವಾ ಸೆಲ್ಫಿ ಕೂಡ ಅಷ್ಟೇ ಅಪಾಯಕಾರಿ. ಈ ಹಿಂದೆಯೂ ಇಂತಹ ಮೋಜು ಮಸ್ತಿ ನಡೆಸಲು ತೆರಳಿ ಕೆಲವರು ಜಲಪಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮಳೆಗಾಲದಲ್ಲಿ ಜಲಪಾತದಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಲು ಪ್ರವಾಸೋದ್ಯಮ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.