![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jul 5, 2023, 5:39 PM IST
ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಮರದ ತುಂಡು ಹೇರಿಕೊಂಡು ಬರುತ್ತಿದ್ದ ಟ್ರಕ್ಕೊಂದು ಹಳಿಯಾಳ-ದಾಂಡೇಲಿ ರಸ್ತೆಯ ಆಲೂರು ಎಂಬಲ್ಲಿ ಪಲ್ಟಿಯಾಗಿ ವಾಹನಕ್ಕೆ ಹಾನಿಯಾಗಿ, ಪವಾಡ ಸದೃಶ್ಯವಾಗಿ ಚಾಲಕ ಪಾರಾದ ಘಟನೆ ಇಂದು ಬುಧವಾರ ನಡೆದಿದೆ.
ಮರದ ತುಂಡು ತುಂಬಿಕೊಂಡು ಕಾಗದ ಕಾರ್ಖಾನೆಗೆ ಬರುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಟ್ರಕ್ಕಿನಲ್ಲಿದ್ದ ಕಟ್ಟಿಗೆಗಳು ಚೆಲ್ಲಪಿಲ್ಲಿಯಾಗಿ ರಸ್ತೆ ತುಂಬಾ ಹರಡಿಕೊಂಡಿದ್ದು, ಇನ್ನೂ ವಾಹನವೂ ನಡುರಸ್ತೆಯಲ್ಲಿ ಪಲ್ಟಿಯಾದ ಹಿನ್ನಲೆಯಲ್ಲಿ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ನಂತರ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇದನ್ನೂ ಓದಿ: ರಾಯಚೂರು: ಆಹಾರ ಅರಸಿ ಊರಿಗೆ ನುಗ್ಗಿದ ಮೊಸಳೆ… ಕಂಗಾಲಾದ ಗ್ರಾಮಸ್ಥರು
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.