![Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’](https://www.udayavani.com/wp-content/uploads/2025/02/sha-415x304.jpg)
![Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’](https://www.udayavani.com/wp-content/uploads/2025/02/sha-415x304.jpg)
Team Udayavani, Jul 5, 2023, 10:18 PM IST
ಹೊಸದಿಲ್ಲಿ: ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಬುಧವಾರ, ಜುಲೈ 5 ರಂದು ಪ್ರಕಟಿಸಿದ್ದು ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಭಾರತವು ಕೆಲವು ಯುವ ತಾರೆಯರಿಗೆ ಅವಕಾಶಗಳನ್ನು ನೀಡಿದ್ದರಿಂದ ದೊಡ್ಡ ಸ್ಟಾರ್‌ಗಳನ್ನು ಆಯ್ಕೆ ಮಾಡಲಾಗಿಲ್ಲ. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಅಸಾಧಾರಣವಾದ ಆಟ ವಾಡಿದ ಎಡಗೈ ಬ್ಯಾಟ್ಸ್ ಮ್ಯಾನ್ ತಿಲಕ್ ವರ್ಮಾ ಅವರು ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಕರೆಯನ್ನು ಪಡೆದಿದ್ದಾರೆ.
ಐಪಿಎಲ್ ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಯಶಸ್ವಿ ಜೈಸ್ವಾಲ್ ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ. ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್ ಮತ್ತು ಅರ್ಶ್‌ದೀಪ್ ಸಿಂಗ್ ಅವರಂತಹ ವೇಗದ ಬೌಲರ್ ಗಳಿದ್ದಾರೆ.
ಟಿ 20 ಸರಣಿಯು ಆಗಸ್ಟ್ 3 ರಿಂದ ಆಗಸ್ಟ್ 13 ರವರೆಗೆ ನಡೆಯಲಿದೆ. ಸರಣಿಯ ಮೊದಲ ಪಂದ್ಯವನ್ನು ತಾರೌಬಾದ ಲ್ಲಿರುವ ಬ್ರಿಯಾನ್ ಲಾರಾ ಸ್ಟೇಡಿಯಂ ನಲ್ಲಿ ಆಡಲಾಗುತ್ತದೆ. ನಂತರ ಎರಡು ಮತ್ತು ಮೂರನೇ ಪಂದ್ಯಗಳು ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯಲಿವೆ.
ಎರಡು ತಂಡಗಳು ನಂತರ ಯುನೈಟೆಡ್ ಸ್ಟೇಟ್ಸ್‌ಗೆ ತೆರಳಲಿದ್ದು, ಅಲ್ಲಿ ಕೊನೆಯ ಎರಡು ಟಿ 20ಗಳು ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ನಡೆಯಲಿವೆ.
Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’
Special Train: ಉಡುಪಿ-ಪ್ರಯಾಗರಾಜ್ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ
CEC Appoint: ಜ್ಞಾನೇಶ್ ಕುಮಾರ್ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ
Udupi: ಮತ್ಸ್ಯಗಂಧ ರೈಲಿಗೆ ನೂತನ ಎಲ್‌ಎಚ್‌ಬಿ ಬೋಗಿ ಅಳವಡಿಕೆ
ಕಾಂಞಂಗಾಡ್ -ಕಾಣಿಯೂರು ಹಳಿ ನಿರ್ಮಾಣಕ್ಕೆ ಕರ್ನಾಟಕ ಅನುಮತಿ ನಿರೀಕ್ಷೆ: ಸಂಸದ ಉಣ್ಣಿತ್ತಾನ್
You seem to have an Ad Blocker on.
To continue reading, please turn it off or whitelist Udayavani.