![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Jul 6, 2023, 10:46 AM IST
ಹೈದರಾಬಾದ್: ಬಿಗೆಸ್ಟ್ ಪ್ಯಾನ್ ಇಂಡಿಯಾ ʼಸಲಾರ್ʼ ಟೀಸರ್ ರಿಲೀಸ್ ಆಗಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡು ಟ್ರೆಂಡಿಂಗ್ ನಲ್ಲಿದೆ.
ʼಸಲಾರ್ʼ ಸಿನಿಮಾ ಟೀಸರ್ ಡೇಟ್ ರಿಲೀಸ್ ಆದ ದಿನವೇ ಅದರ ಸಮಯವನ್ನು ಕೆಜಿಎಫ್ ಸಿನಿಮಾಕ್ಕೆ ಹೋಲಿಕೆ ಮಾಡಲಾಗಿತ್ತು. ಕೆಜಿಎಫ್ ನಲ್ಲಿ ಯಶ್ ಮುಳುಗುವುದು ಮುಂಜಾನೆ 5:12 ಕ್ಕೆ ಅದೇ ಸಮಯದಲ್ಲಿ ʼಸಲಾರ್ʼ ಟೀಸರ್ ಆಗುವುದು ಎರಡೂ ಸಿನಿಮಾಕ್ಕೂ ಏನೋ ಒಂದು ಲಿಂಕ್ ಇದೆ ಎಂದು ಫ್ಯಾನ್ಸ್ ಗಳು ಊಹಿಸಿದ್ದಾರೆ.
ಅದರಂತೆ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಇದರಲ್ಲೂ ಕೆಲ ಹೋಲಿಕೆಗಳನ್ನು ಮಾಡಲಾಗಿದೆ. ಕೆಜಿಎಫ್ ನಲ್ಲಿರುವಂತೆ ಇಲ್ಲಿಯೂ ನಾಯಕನ ಕಥೆ ಹೇಳಲು ಒಬ್ಬರಿದ್ದಾರೆ ಎನ್ನುವುದನ್ನು ಟೀಸರ್ ನಲ್ಲಿ ತೋರಿಸಲಾಗಿದೆ. ಬಾಲಿವುಡ್ ನ ಹಿರಿಯ ಟಿನು ಆನಂದ್ “ಸಿಂಹ.. ಚಿರತೆ.. ಹುಲಿ.. ಆನೆ.. ತುಂಬಾ ಡೇಂಜರಸ್.. ಎನ್ನುವಾಗ ದೈತ್ಯ ಗನ್ ಗಳನ್ನು ಹಿಡಿದು ನೂರಾರು ಜನರನ್ನು ಯುದ್ಧದ ಅಖಾಡದಲ್ಲಿ ಸಂಹಾರ ಮಾಡುವ ನಾಯಕ ನಟ ಪ್ರಭಾಸ್ ಅವರನ್ನು ಇಲ್ಲಿ ತೋರಿಸಲಾಗಿದೆ. ಅದ್ದೂರಿ ಮೇಕಿಂಗ್ ಸೆಟ್ ನಲ್ಲಿ ಫೈಟ್ ಗಳಿವೆ, ‘ಕೆಜಿಎಫ್’ ನಂತೆ ಇಲ್ಲೂ ಒಂದು ದೊಡ್ಡ ಅಖಾಡದಲ್ಲಿ ನೂರಾರು ಜನರೊಂದಿಗೆ ಒಂಟಿಯಾಗಿಯೇ ಹೋರಾಡುವ ನಾಯಕನ ಕಿಚ್ಚು ಇರುವುದು ಟೀಸರ್ ಝಲಕ್ ನಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: ಆ್ಯಕ್ಷನ್ ಅಖಾಡದಲ್ಲಿ ಈತ ಸಿಂಹ, ಚಿರತೆ, ಆನೆಗಿಂತಲೂ ಅಪಾಯಕಾರಿ: ‘ಸಲಾರ್’ ಟೀಸರ್ ಔಟ್
ಆ್ಯಕ್ಷನ್ ದೃಶ್ಯಗಳನ್ನು ನೋಡುವಾಗ ಪ್ರೇಕ್ಷಕರಿಗೆ ಕೆಜಿಎಫ್ ನೆನಪಾಗುತ್ತದೆ. ಇದನ್ನೇ ಇಟ್ಟುಕೊಂಡು ಕೆಲ ನೆಟ್ಟಿಗರು ʼಸಲಾರ್ʼ – ಕೆಜಿಎಫ್ ಗೆ ಲಿಂಕ್ ಇದೆ ಎಂದು ಕೆಲ ಕಾರಣವನ್ನು ಕೊಟ್ಟಿದ್ದಾರೆ. ಮುಖ್ಯವಾಗಿ ಕೆಜಿಎಫ್ ನಲ್ಲಿ C-516 ಬರೆದಿರುವ ಒಂದು ಕಂಟೇನರ್ ಇದೆ. ಇನ್ನು ʼಸಲಾರ್ʼ ನಲ್ಲಿ ಅದೇ C-516 ಎಂದು ಬರೆದಿರುವ ಕಂಟೇನರ್ ಇದೆ. ಇದು ಸಲಾರ್ – ಕೆಜಿಎಫ್ ಲಿಂಕ್ ಗೆ ಸುಳಿವು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಇನ್ನೊಂದು ವಿಶೇಷವೆಂದರೆ ಕೆಜಿಎಫ್ ನಲ್ಲಿ ನಟಿಸಿರುವ ಈಶ್ವರಿ ಅವರು ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ ಎನ್ನುವುದು.
ಸೆ.28 ರಂದು ವಿಶ್ವದೆಲ್ಲೆಡೆ ʼಸಲಾರ್ʼ ಸಿನಿಮಾ ತೆರೆಗೆ ಬರಲಿದ್ದು, ಈ ಸಿನಿಮಾದಲ್ಲಿ ಪ್ರಭಾಸ್ , ಶ್ರುತಿ ಹಾಸನ್, ಶ್ರೀಯಾ ರೆಡ್ಡಿ, ಈಶ್ವರಿ ರಾವ್, ಮಧು ಗುರುಸ್ವಾಮಿ ಮತ್ತು ಜಗಪತಿ ಬಾಬು ಮುಂತಾದವರು ನಟಿಸಿದ್ದಾರೆ.
Pic 1: #KGFChapter2 post credit scene
Pic 2: #SalaarTeaserSo #KGFxSALAAR confirmed #YashBOSS𓃵 #Prabhas #PrashanthNeel 🫡 pic.twitter.com/DqPIIlY42Y
— ᴷᶦᶜᶜʰᵃ ⁴⁶ ₦𝖎ʂհ@ητђ™ ᵧₐₛₕ ₁₉ (@Nishanthks_54) July 6, 2023
Actress #EaswariRao is part of #Salaar cast..
Is there a connect between #Salaar and #KGF Universe..
— Ramesh Bala (@rameshlaus) July 6, 2023
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.