ರಾಜ್ಯದಲ್ಲಿ ಶೇ.100 ಟಿಬಿ ರೋಗಿಗಳ ದತ್ತು ಸ್ವೀಕಾರ


Team Udayavani, Jul 6, 2023, 2:33 PM IST

ರಾಜ್ಯದಲ್ಲಿ ಶೇ.100 ಟಿಬಿ ರೋಗಿಗಳ ದತ್ತು ಸ್ವೀಕಾರ

ಬೆಂಗಳೂರು: ಸಾರ್ವಜನಿಕರ ಸಹಭಾಗಿತ್ವದಲ್ಲಿ ಕ್ಷಯ ರೋಗ (ಟಿಬಿ) ಮುಕ್ತ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶದ ಆಹಾರ ಒದಗಿ ಸಲು ನೋಂದಣಿಗೊಂಡ ನಿ-ಕ್ಷಯ ಮಿತ್ರರಲ್ಲಿ ಸಹಾಯ ಕೋರಿದ ಶೇ.100ರಷ್ಟು ಟಿಬಿ ರೋಗಿಗಳನ್ನು ದಾನಿಗಳು ದತ್ತುಕೊಂಡಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆಯು 2022ರ ಸೆ.9ರಂದು ಕರ್ನಾಟಕ ಸೇರಿದಂತೆ ದೇಶಾದ್ಯಂತ ಟಿಬಿ ಮುಕ್ತ ಭಾರತ ಅಭಿಯಾನವನ್ನು ಜಾರಿಗೆ ತಂದಿದೆ. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವ ವನ್ನು ಸಹ ಪಡೆದುಕೊಂಡಿದೆ. ಅದರ ಅನ್ವಯ ಕ್ಷಯ ರೋಗಿಗಳನ್ನು ಒಬ್ಬ ವ್ಯಕ್ತಿ, ಚುನಾಯಿತ ಪ್ರತಿ ನಿ ಧಿಗಳು ಅಥವಾ ಸಂಸ್ಥೆಗಳು ದತ್ತು ತೆಗೆದು ಕೊಂಡು ಆರೈಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ದೇಶದಲ್ಲಿ ಇಲ್ಲಿಯವರೆಗೆ 88,750 ಲಕ್ಷ ಮಂದಿ ಪೋರ್ಟಲ್‌ ನಿ-ಕ್ಷಯ ಮಿತ್ರರ ನೋಂದಣಿಯಾಗಿದ್ದಾರೆ. 14.39 ಲಕ್ಷ ಟಿಬಿ ರೋಗಿಗಳಿದ್ದು, 10,74,575 ನಿ-ಕ್ಷಯ ಮಿತ್ರರ ಸಹಾಯ ಕೋರಿದ್ದು, ಅವರಲ್ಲಿ 10,70,897 ಮಂದಿಗೆ ದಾನಿಗಳು ಪೌಷ್ಟಿಕ ಆಹಾರ ಒದಗಿಸುತ್ತಿದ್ದಾರೆ. ಇನ್ನೂ ಕರ್ನಾಟಕದಲ್ಲಿ 2,220 ಮಂದಿ ವೈಯಕ್ತಿಕವಾಗಿ, 203 ಸಂಸ್ಥೆಗಳು, 151 ಎನ್‌ಜಿಒ, ರಾಜಕೀಯ ಪಕ್ಷ 87, ಜನಪ್ರತಿನಿಧಿಗಳು 57, ಕಾರ್ಪೋರೆಟ್‌ 31, ಸಹಕಾರ ಸಂಘ 13 ಹಾಗೂ ಇತರೆ 341 ಮಂದಿ ಸೇರಿದಂತೆ 3101 ಮಂದಿ ದಾನಿಗಳು ನಿ-ಕ್ಷಯ ಮಿತ್ರದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.

ಅರೋಗ್ಯ ಕಿಟ್‌ನಲ್ಲಿ ಏನಿದೆ?: ಸುಮಾರು 600 ರೂ. ಮೊತ್ತ ಕಿಟ್‌ ಟಿಬಿ ರೋಗಿಗೆ ದಾನಿಯೊಬ್ಬರು ನೀಡಬೇಕು. ಪ್ರಸ್ತುತ ಪಡಿತರದಲ್ಲಿ ಅಕ್ಕಿ ಉಚಿತವಾಗಿ ಲಭ್ಯವಾಗುತ್ತಿರುವುದರಿಂದ ಆರೋಗ್ಯ ಇಲಾಖೆಯು ಕಡಲೆ ಬೀಜ, ಬೆಲ್ಲ, ದ್ವಿದಳ ಧಾನ್ಯ, ಬೇಳೆ ಕಾಳಗಳನ್ನು ಪಟ್ಟಿಯಲ್ಲಿ ಸೇರಿಸಿದೆ. ದಾನಿಯು ಇಷ್ಟ ಪಟ್ಟ ಪ್ರದೇಶದಲ್ಲಿ ಟಿಬಿ ರೋಗಿಯನ್ನು ದತ್ತು ತೆಗೆದುಕೊಳ್ಳಬಹುದು. ಇಲ್ಲಿ ಹಣವನ್ನು ನೀಡುವಂತಿಲ್ಲ. ದಾನಿಗೆ ಒಂದು ವೇಳೆ ಕಿಟ್‌ ಕೋರಿಯರ್‌ ಮಾಡಲು ಸಾಧ್ಯವಾಗದೇ ಇದ್ದರೆ, ಆರೋಗ್ಯ ಇಲಾಖೆಗೆ ತಿಳಿಸಿದರೆ, ಅವರ ಸಿಬ್ಬಂದಿಯೇ ರೋಗಿಗಳ ಮನೆಗೆ ತಲುಪಿಸುತ್ತಾರೆ.

22 ಸಾವಿರ ರೋಗಿಗಳ ದತ್ತು: ರಾಜ್ಯದಲ್ಲಿ 0-14ವರ್ಷದೊಳಗಿನ 1,783 ಮಂದಿ ಹಾಗೂ 15 ವರ್ಷ ಮೇಲ್ಪಟ್ಟ 36,406 ರೋಗಿಗಳು ಸೇರಿದಂತೆ ಒಟ್ಟು 38,176 ಮಂದಿ ಕ್ಷಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 22,531 ಕ್ಷಯ ರೋಗಿಗಳು ಸಹಾಯ ಕೋರಿದ್ದಾರೆ. ಅವರನ್ನು ನಿ-ಕ್ಷಯ ಮಿತ್ರರ ಮೂಲಕ ದತ್ತು ನೀಡಿ, ಮಾಸಿಕ ಪೌಷ್ಟಿಕಾಂಶ ಭರಿತ ಆಹಾರ ಕಿಟ್‌ ವಿತರಿಸಲಾಗುತ್ತಿದೆ.

3 ವರ್ಷದವರೆಗೆ ದತ್ತು : ರಾಜ್ಯದಲ್ಲಿ ಕ್ಷಯ ರೋಗಿಗಳ ದತ್ತು ಪ್ರತಿಕ್ರಿಯೆಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ.61.6 ದಾನಿಗಳು ಆರು ತಿಂಗಳ ಅವಧಿಗೆ, ಶೇ.36.3ರಷ್ಟು ದಾನಿಗಳು ಒಂದು ವರ್ಷ ಅವಧಿಗೆ, ಶೇ.1.7ರಷ್ಟು ದಾನಿಗಳು 2 ವರ್ಷದ ಅವಧಿಗೆ ಕ್ಷಯ ರೋಗಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಆಸ್ತಕರು ಆನ್‌ ಲೈನ್‌ https://communitysupport.nikshay.in  ಮೂಲಕ ನೋಂದಾಯಿಸಿಕೊಳ್ಳ ಬಹುದು.

ಕ್ಷಯ ಮುಕ್ತ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರಕಿದೆ. ಆಹಾರ ಕಿಟ್‌ ರೋಗಿಗಳ ಮನೆಗೆ ತಲುಪಿಸಲು ಪ್ರಸ್ತುತ ಬಿಗ್‌ ಬಾಸ್ಕೇಟ್‌, ಅಕ್ಷಯ ಪಾತ್ರೆ ಅವರ ಜತೆ ಮಾತುಕತೆ ನಡೆಸಲಾಗಿದೆ. ಜಿ.ಪಂ., ತಾಪಂನಲ್ಲಿ ಈ ಬಗ್ಗೆ ಅರಿವು ಮೂಡಿಸಿ, ರೋಗಿ ಗಳನ್ನು ದತ್ತು ತೆಗೆದುಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ. -ಡಾ. ಅನಿಲ್‌ ಜಂಟಿ ನಿರ್ದೇಶಕ (ಕ್ಷಯ ರೋಗ)

-ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

BGT 2024: team India won the test in Perth

BGT 2024: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್:‌ ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.