ಟೊಮ್ಯಾಟೊ ಬಳಿಕ ಶುಂಠಿ, ಕೊತ್ತಂಬರಿ, ಹಸಿಮೆಣಸಿನ ದರವೂ ದುಬಾರಿ
Team Udayavani, Jul 7, 2023, 7:30 AM IST
ನವದೆಹಲಿ: ದೇಶದಲ್ಲಿ ಬೆಲೆ ಇಳಿಕೆಯಾಗಬಹುದೆನ್ನುವ ಆಶಾವಾದ ಶುರುವಾಗಿರುವ ಹೊತ್ತಿನಲ್ಲೇ, ತರಕಾರಿ ಬೆಲೆಗಳು ವಿಪರೀತ ಏರಿವೆ. ಈ ಹಿಂದೆ ಅಗ್ಗವೆಂದೇ ಪರಿಗಣಿಸಲ್ಪಟ್ಟಿದ್ದ ಟೊಮ್ಯಾಟೊ ದೇಶದ ಒಂದೊಂದು ನಗರಗಳಲ್ಲಿ ಒಂದೊಂದು ರೀತಿ ಏರಿಕೆಯಾಗಿದೆ. ಮಾತ್ರವಲ್ಲ ಹೂಕೋಸು, ಶುಂಠಿ, ಕೊತ್ತಂಬರಿ, ಹಸಿಮೆಣಸಿನ ಬೆಲೆಗಳೂ ಏರಿವೆ.
ಕೋಲ್ಕತದಲ್ಲಿ ಟೊಮ್ಯಾಟೊ ಬೆಲೆ ಕೆಜಿಗೆ 152 ರೂ, ದೆಹಲಿಯಲ್ಲಿ 120 ರೂ., ಚೆನ್ನೈನಲ್ಲಿ 117 ರೂ., ಮುಂಬೈನಲ್ಲಿ 108 ರೂ. ಇದೆ. ಇನ್ನು ದೆಹಲಿಯಲ್ಲಿ ಹೂಕೋಸಿನ ಬೆಲೆ 80 ರೂ., ಶುಂಠಿ 1 ಕೆಜಿಗೆ 380 ರೂ., ಹಸಿಮೆಣಸು ಕೆಜಿಗೆ 170 ರೂ.ಗಳಾಗಿದೆ.
ಏಪ್ರಿಲ್ನಲ್ಲಿ ಹಣದುಬ್ಬರ ಪ್ರಮಾಣ ಶೇ. 4.7ರಷ್ಟಿತ್ತು. ಮೇ ನಲ್ಲಿ ಆ ಪ್ರಮಾಣ ಶೇ.4.25ಕ್ಕೆ ಇಳಿದಿದೆ. ಹೀಗಿದ್ದರೂ ತರಕಾರಿ ಬೆಲೆ ಏರುತ್ತಿರುವುದು ಜನರ ಜೇಬಿಗೆ ದೊಡ್ಡಮಟ್ಟದಲ್ಲಿ ಕತ್ತರಿ ಹಾಕಿದೆ. ಒಂದು ಕಡೆ ವಿಪರೀತ ಬಿಸಿಲು, ಮತ್ತೂಂದು ಕಡೆ ಪ್ರವಾಹ ಇವೆರಡರಿಂದ ತರಕಾರಿ ಪೂರೈಕೆಯೇ ಅಸ್ತವ್ಯಸ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.