PM Modi ರ‍್ಯಾಲಿಗೆ ತೆರಳುತ್ತಿದ್ದ ಬಸ್ ,ಟ್ರಕ್‌ಗೆ ಡಿಕ್ಕಿ; 3 ಸಾವು, 6 ಮಂದಿಗೆ ಗಾಯ

Team Udayavani, Jul 7, 2023, 12:40 PM IST

PM Modi ರ‍್ಯಾಲಿಗೆ ತೆರಳುತ್ತಿದ್ದ ಬಸ್ ,ಟ್ರಕ್‌ಗೆ ಡಿಕ್ಕಿ ; 3 ಸಾವು, 6 ಮಂದಿಗೆ ಗಾಯ

ಬಿಲಾಸ್‌ಪುರ: ರಾಯ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ರ‍್ಯಾಲಿಗೆ ಜನರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್‌ ವೊಂದು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಸೂರಜ್‌ಪುರ ಜಿಲ್ಲೆಯ ಸಜನ್ (30), ರುಕ್‌ದೇವ್ (45) ಮತ್ತು ಬಸ್ ಚಾಲಕ ಬಲರಾಮ್‌ಪುರ ಜಿಲ್ಲೆಯ ನಿವಾಸಿ ಅಕ್ರಂ ರಾಜಾ (28) ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸುಮಾರು 40 ಜನರಿದ್ದ ಬಸ್ ಅಂಬಿಕಾಪುರದಿಂದ ರಾಯಪುರಕ್ಕೆ ತೆರಳುತ್ತಿದ್ದಾಗ ಬೆಲ್ಟಾರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ ಎಂದು ಬಿಲಾಸ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ತಿಳಿಸಿದ್ದಾರೆ.

ಭಾರೀ ಮಳೆಯಿಂದಾಗಿ ರಸ್ತೆಬದಿಯಲ್ಲಿ ನಿಂತಿದ್ದ ಟ್ರಕ್ ಅನ್ನು, ಬಸ್ ಚಾಲಕನಿಗೆ ಸ್ಪಷ್ಟವಾಗಿ ಗೋಚರಿಸದ ಕಾರಣ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.

ಸೂರಜ್‌ಪುರದ ಬಿಜೆಪಿಯ ಲಾಟೋರಿ ಘಟಕದ ಮಂಡಲ ಅಧ್ಯಕ್ಷ ಲಿಲು ಗುಪ್ತಾ ಮತ್ತು ಸೂರಜ್‌ಪುರದ ಪಕ್ಷದ ಮಂಡಲ ಪ್ರಧಾನ ಕಾರ್ಯದರ್ಶಿ ವಿಶಂಭರ್ ಯಾದವ್ ಸ್ಥಿತಿ -ಗಂಭೀರವಾಗಿದ್ದು ಅವರನ್ನು ಬಿಲಾಸ್‌ಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.

ಗಾಯಗೊಂಡ ಇತರ ನಾಲ್ವರನ್ನು ಛತ್ತೀಸ್‌ಗಢ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸಿಐಎಂಎಸ್) ಬಿಲಾಸ್‌ಪುರಕ್ಕೆ ದಾಖಲಿಸಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ತೀವ್ರ ಸಂತಾಪ ಸೂಚಿಸಿದ್ದು, ಮೃತಪಟ್ಟವರ ಪ್ರತಿ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.

ರಾಯ್‌ಪುರದ ಸೈನ್ಸ್ ಕಾಲೇಜು ಮೈದಾನದಲ್ಲಿ ಪ್ರಧಾನಿಯವರ ರ‍್ಯಾಲಿಯನ್ನು ಆಯೋಜಿಸಲಾಗಿತ್ತು .

ಟಾಪ್ ನ್ಯೂಸ್

4-punjalkatte

Ajilamogaru: ನೀರು ಪಾಲಾದ ಮೈಕಲ್ ರ ಮೃತದೇಹ ಪತ್ತೆ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ಆಯ್ಕೆ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ನಿಯೋಜನೆ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

2-kushtagi

ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿ; ಚಾಲಕ ಸಾವು; ಹಲವು ಪ್ರಯಾಣಿಕರಿಗೆ ಗಾಯ

vidhana-Soudha

Karnataka Government: 7ನೇ ವೇತನ ಆಯೋಗದ ಶಿಫಾರಸಿಗೆ ಎಳ್ಳುನೀರು?

High-Court

HSRP ಅಳವಡಿಕೆ ಅವಧಿ ಸೆ. 15ರವರೆಗೆ ವಿಸ್ತರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

1-agni

Agniveer; ಪರಿಹಾರವಲ್ಲ, ಪಿಂಚಣಿ,ಹುತಾತ್ಮ ಗೌರವ ಕೊಡಿ:ಯೋಧನ ತಂದೆ ಆಗ್ರಹ

1–qewewqe

Bihar ಸೇತುವೆ ಕುಸಿತಕ್ಕೆ ಹೂಳು ತೆಗೆದಿದ್ದೇ ಕಾರಣ!

1-bhole-baba

America ಶ್ವೇತ ಭವನದಂತಿದೆ ಭೋಲೆ ಬಾಬಾ ಭವ್ಯ ಆಶ್ರಮ

Exam

6th class ಮಕ್ಕಳಿಗೆ ಇನ್ನೂ ಪಠ್ಯ ಪುಸ್ತಕಗಳನ್ನೇ ನೀಡಿಲ್ಲ!

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

4-punjalkatte

Ajilamogaru: ನೀರು ಪಾಲಾದ ಮೈಕಲ್ ರ ಮೃತದೇಹ ಪತ್ತೆ

3-kushtagi

Kushtagi: ಕಳ್ಳರ ಅಟ್ಟಹಾಸಕ್ಕೆ 13 ಶ್ರೀಗಂಧದ ಮರ ಬಲಿ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ಆಯ್ಕೆ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ನಿಯೋಜನೆ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.