Karnataka Budget: ʻಪವರ್ ಸ್ಟಾರ್ʼ ಸ್ಮರಣಾರ್ಥ ಯೋಜನೆಯೊಂದನ್ನು ಘೋಷಿಸಿದ ಸಿದ್ದರಾಮಯ್ಯ
ಆರೋಗ್ಯ ಕ್ಷೇತ್ರಕ್ಕೆ ಸರ್ಕಾರದ ಮಹತ್ವದ ಕೊಡುಗೆ... ಇದರ ವಿಶೇಷತೆಯೇನು ಗೊತ್ತಾ.?
Team Udayavani, Jul 7, 2023, 4:38 PM IST
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ದಾಖಲೆಯ 14ನೇ ರಾಜ್ಯ ಬಜೆಟ್ ಮಂಡಿಸಿದ್ಧಾರೆ. ಮೂರು ಲಕ್ಷದ 27 ಸಾವಿರ ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.
ಅವುಗಳ ಪೈಕಿ ವಿಶೇಷವಾಗಿ ʻಪವರ್ ಸ್ಟಾರ್ʼ ಸ್ಮರಣಾರ್ಥ ಯೋಜನೆಯೊಂದನ್ನು ಘೋಷಿಸಿದ್ದು, ಹಠಾತ್ ಹೃದಯ ಸ್ತಂಭನದ ವೇಳೆ ತುರ್ತು ಚಿಕಿತ್ಸೆಗೆ ಈ ಯೋಜನೆ ನೆರವಾಗಲಿದೆ.
ಕರ್ನಾಟಕ ರತ್ನ ಡಾ|| ಪುನೀತ್ ರಾಜ್‌ಕುಮಾರ್‌ರವರ ಸ್ಮರಣಾರ್ಥವಾಗಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು ಸರ್ಕಾರ Automated External Defibrillators (AED) ಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸುವ ಯೋಜನೆಯ ಬಗ್ಗೆ ಬಜೆಟ್‌ನಲ್ಲಿ ಹೇಳಿಕೊಂಡಿದೆ. ಇದಕ್ಕಾಗಿ ಆರು ಕೋಟಿ ರೂ. ಅನುದಾನ ಒದಗಿಸಲಾಗುವುದು ತಮ್ಮ ಬಜೆಟ್ ಮಂಡನೆಯ ವೇಲೆ ಸಿಎಂ ಸಿದ್ದರಾಮಯ್ಯ ಘೋಷಿಸಿದ್ಧಾರೆ.
ಇದನ್ನೂ ಓದಿ: Budget: ಆಶಾಕಿರಣ ಯೋಜನೆ, ಸಿ.ಟಿ ಸ್ಕ್ಯಾನ್ ಸೆಂಟರ್; ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?
Automated External Defibrillators (AED) ಎಂದರೇನು.?
ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ ಅಥವಾ Automated External Defibrillators (AED)ಗಳು, ಹಠಾತ್ ಹೃದಯ ಸ್ತಂಭನದ ಸಮಯದಲ್ಲಿ ವ್ಯಕ್ತಿಗೆ ತುರ್ತು ಚಿಕಿತ್ಸೆಯಾಗಿ ಹೃದಯಕ್ಕೆ ವಿದ್ಯುತ್ ಆಘಾತವನ್ನು ನೀಡುವ ಸುರಕ್ಷಿತ ಮತ್ತು ಬಳಸಲು ಸುಲಭವಾದ ಸಾಧನವಾಗಿದೆ. AED ಗಳು ಮೊಬೈಲ್ ಯಂತ್ರಗಳಾಗಿದ್ದು ಎಲ್ಲಿಂದೆಲ್ಲಿಗೂ ಕೊಂಡೊಯ್ಯಬಹುದಾಗಿದೆ. ಸಾಮಾನ್ಯವಾಗಿ ಅಗ್ನಿಶಾಮಕ ಯಂತ್ರದಂತೆಯೇ ಅಮೆರಿಕದಾದ್ಯಂತ ಸಾರ್ವಜನಿಕ ಸ್ಥಳಗಳು ಮತ್ತು ನಿಗಮಗಳ ಗೋಡೆಗಳ ಮೇಲೆ AED ಯಂತ್ರಗಳು ಕಂಡುಬರುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.