Budget ಮಂಡನೆ ವೇಳೆ ಭದ್ರತಾ ಲೋಪ; ಶಾಸಕರ ಸೀಟ್ ನಲ್ಲಿ ಅನಾಮಿಕ!!
ಶಾಸಕರ ಹೆಸರು ಹೇಳಿ ಮಾರ್ಷಲ್ಗಳಿಗೆ ಆವಾಜ್ ಹಾಕಿ ಒಳ ಪ್ರವೇಶ...!
Team Udayavani, Jul 7, 2023, 6:18 PM IST
ವಿಧಾನಸಭೆ : ಸಿಎಂ ಸಿದ್ದರಾಮಯ್ಯ ಅವರುಶುಕ್ರವಾರ, ಜು 07 ರಂದು ಬಜೆಟ್ ಮಂಡಿಸುತ್ತಿದ್ದ ವೇಳೆ ಭದ್ರತಾ ಲೋಪವಾಗಿದ್ದು, ಅನಾಮಿಕ ವ್ಯಕ್ತಿಯೊಬ್ಬ ವಿಧಾನಸಭೆ ಪ್ರವೇಶಿಸಿದ್ದು ಮಾತ್ರವಲ್ಲದೇ 15 ನಿಮಿಷಗಳ ಜಾಲ ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮ ಜಿ ನಾಯಕ್ ಅವರು ಕುಳಿತುಕೊಳ್ಳಬೇಕಾಗಿದ್ದ ಆಸನದಲ್ಲಿ ಕುಳಿತುಕೊಂಡಿದ್ದಾನೆ.
ಅನಾಮಿಕನನ್ನು ಕಂಡು ಅನುಮಾನಗೊಂಡ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ತತ್ ಕ್ಷಣ ಎದ್ದು ಹೋಗಿ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ತಿಳಿಸಿದ್ದಾರೆ. ಅಷ್ಟರೊಳಗೆ ಅನಾಮಿಕ ಅಲ್ಲಿಂದ ಕಾಲು ಕಿತ್ತಿದ್ದ.ಈ ವಿಚಾರ ಆತಂಕಕ್ಕೂ ಕಾರಣವಾಗಿತ್ತು.
ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಗಿಳಿದು ಅನಾಮಿಕನನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಆತನನ್ನು ತಿಪ್ಪೇರುದ್ರ (72) ಎಂದು ಗುರುತಿಸಲಾಗಿದ್ದು, ಸದನವನ್ನು ಪ್ರವೇಶಿಸುವಾಗ ಮಾರ್ಷಲ್ಗಳು ವಿಚಾರಿಸಿದ್ದು, ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ಹೆಸರು ಹೇಳಿ ಅವಾಜ್ ಹಾಕಿ ಸದನದೊಳಗೆ ಪ್ರವೇಶಿಸಿದ್ದ. ಕೈಯಲ್ಲಿ ಒಂದು ಬ್ಯಾಗ್ ಕೂಡ ತಂದಿದ್ದ ಎಂದು ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.