ಭಟ್ಕಳ: ತಗ್ಗಿದ ಮಳೆಯ ಪ್ರಮಾಣ… ನಿಟ್ಟುಸಿರು ಬಿಟ್ಟ ಜನ


Team Udayavani, Jul 7, 2023, 10:02 PM IST

ಭಟ್ಕಳ: ತಗ್ಗಿದ ಮಳೆಯ ಪ್ರಮಾಣ… ನಿಟ್ಟುಸಿರು ಬಿಟ್ಟ ಜನ

ಭಟ್ಕಳ: ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಶುಕ್ರವಾರ ಸ್ವಲ್ಪ ಬಿಡುವು ದೊರೆತಿದ್ದು ಜನರು ನಿಟ್ಟುಸಿರು ಬಿಡುವಂತಾಯಿತು. ಶಾಲೆಗೆ ರಜೆ ಕೊಟ್ಟಿದ್ದರಿಂದ ಮಳೆಯಿಲ್ಲದಿದ್ದರೂ ರಸ್ತೆಯಲ್ಲಿ ಸಂಚಾರ ವಿರಳವಾಗಿತ್ತು.

ಕಳೆದ ಮರ‍್ನಾಲ್ಕು ದಿನಗಳಿಂದ ಎಲ್ಲೆಂದರಲ್ಲಿ ನೀರು ತುಂಬಿಕೊಂಡಿದ್ದೇ ಕಾಣುತ್ತಿದ್ದರೆ ಇಂದು ನೀರಿನ ಪ್ರಮಾಣ ತಗ್ಗಿದ್ದು ಸ್ವಲ್ಪ ಸಮಾಧಾನ ತರುವಂತಿತ್ತು.

ಗುರುವಾರ ಸಂಜೆ ಸಚಿವ ಮಂಕಾಳ ವೈದ್ಯ ಐಆರ್‌ಬಿ, ಹೆದ್ದಾರಿ ಪ್ರಾಧಿಕಾರ, ಪುರಸಭೆಯ ಅಧಿಕಾರಿಗಳಿಗೆ ಹೆದ್ದಾರಿಯ ಮೇಲೆ ನೀರು ನಿಲ್ಲುವ ಕುರಿತು ಹಿಗ್ಗಾಮುಗ್ಗಾ ಝಾಢಿಸಿದ್ದರಿಂದ ಇಂದು ಬೆಳಿಗ್ಗೆಯಿಂದಲೇ ಐ.ಆರ್.ಬಿ. ಕಂಪೆನಿಯ ಜೆ.ಸಿ.ಬಿ. ಕಾಣಿಸಿಕೊಂಡಿದೆ. ಮಳೆ ನೀರು ಹರಿದು ಹೋಗಲು ಗಟಾರ ಬಿಡಿಸಿಕೊಡುವ ಕೆಲಸಕ್ಕೆ ಚಾಲನೆ ಸಿಕ್ಕಿತ್ತು. ಪುರಸಭೆಯವರೂ ಸಹ ತಾಲೂಕು ಪಂಚಾಯತ್, ಪಿಎಲ್‌ಡಿ ಬ್ಯಾಂಕ್ ಎದುರು ಮತ್ತಿತರ ಕಡೆ ಜೆಸಿಬಿ ಸಹಾಯದಿಂದ ನೀರು ಸರಾಗವಾಗಿ ಹರಿದು ಹೋಗಲು ಗಟಾರ ಬಿಡಿಸುವ ಕೆಲಸ ಮಾಡಿದರು.

ಸಚಿವರು ಅಧಿಕಾರಿಗಳ ಸಭೆಯಲ್ಲಿ ಈ ಹಿಂದೆ ಮಳೆಗಾಲಕ್ಕೂ ಮೂರು ತಿಂಗಳ ಮೊದಲು ಜಿಲ್ಲಾಧಿಕಾರಿಗಳು ಸಭೆ ಮಾಡಿ ಮಳೆಗಾಲಕ್ಕೆ ಮೊದಲು ತಯಾರಿ ಮಾಡಿಕೊಳ್ಳಲು ಹೇಳಿದ್ದರೂ ಸಹ ಎನೂ ಮಾಡದೇ ಹೆದ್ದಾರಿಯಲ್ಲಿ ಹೊಳೆಯಾಗುವಂತೆ ಮಾಡಿದ್ದೀರಲ್ಲ ಎಂದು ಅಧಿಕಾರಿಗಳನ್ನು, ಐ.ಆರ್.ಬಿ.ಯವರನ್ನು ಪ್ರಶ್ನಿಸಿದ್ದಲ್ಲದೇ ಯಾವುದೇ ಅಧಿಕಾರಿ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಜಿಲ್ಲೆಯಿಂದ ಹೊರಗೆ ವರ್ಗ ಮಾಡಿಕೊಂಡು ಹೋಗುವುದಕ್ಕೆ ತಾನೇ ಅನುಮತಿ ನೀಡುತ್ತೇನೆ ಎಂದಿದ್ದು ಪುರಸಭಾ ಅಧಿಕಾರಿಗಳಾದಿಯಾಗಿ ಎಲ್ಲರಿಗೂ ಬಿಸಿ ಮುಟ್ಟಿತ್ತು.

ಭಟ್ಕಳದಲ್ಲಿ ನೀರು ತುಂಬಿಕೊಳ್ಳಲು ಪುರಸಭೆಯವರ ನಿರ್ಲಕ್ಷ ಕೂಡಾ ಇದೆ ಎನ್ನುವುದನ್ನು ಇನಾಯತ್‌ವುಲ್ಲಾ ಶಾಬಂದ್ರಿ ತಿಳಿಸಿದ್ದರು.

ಪಟ್ಟಣದಲ್ಲಿ ಐಆರ್‌ಬಿಯವರು ಮಳೆಗಾಲದ ಪೂರ್ವದಲ್ಲೇ ಗಟಾರ ನಿರ್ಮಾಣ ಅಥವಾ ಸರಿಯಾಗಿ ನೀರು ಹರಿದು ಹೋಗಲು ಗಟಾರ ಬಿಡಿಸಿಕೊಡುವ ಕೆಲಸ ಮಾಡಿದ್ದರೆ ಮಳೆಗಾಲದಲ್ಲಿ ಮಳೆ ನೀರು ಹೆದ್ದಾರಿ ಮೇಲೆ ಶೇಖರಣೆ ಆಗಿ ಜನರಿಗೆ ತೊಂದರೆ ಆಗುವ ಪ್ರಶ್ನೆಯೇ ಇರುತ್ತಿರಲಿಲ್ಲ ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬಂದಿದೆ. ಶುಕ್ರವಾರ ಬೆಳಿಗ್ಗೆಯಿಂದ 24 ಗಂಟೆಗಳಲ್ಲಿ 120 ಮಿಮಿ ಮಳೆಯಾಗಿದೆ.

ಇದನ್ನೂ ಓದಿ: 

ಟಾಪ್ ನ್ಯೂಸ್

army

J&K ; ಮತ್ತೆ ಉಗ್ರರ ಅಟ್ಟಹಾಸ: ದಾಳಿಯಲ್ಲಿ ನಾಗರಿಕ ಸಾ*ವು, ಹಲವು ಯೋಧರಿಗೆ ಗಾಯ

1-kutti

Mangaluru CCB: 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊ*ಲೆ ಆರೋಪಿ ಬಂಧನ

court

Koppal; ಮರುಕುಂಬಿ ಪ್ರಕರಣ: 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

1-bharat

BJP; ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಸಿದ ಭರತ್ ಬೊಮ್ಮಾಯಿ

1-congress

By Election; ಕೈ ಶಕ್ತಿ ಪ್ರದರ್ಶನ: ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಅನ್ನಪೂರ್ಣ

u

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಚೀನಾದಲ್ಲೂ ಭಾರತದ ಜ್ಞಾನದ ಕುರಿತು ಮಾಹಿತಿ ಇದೆ:ಭಾಟೇ

somashekar st

Karnataka BJP ; 8 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ..!; ಎಸ್.ಟಿ.ಸೋಮಶೇಖರ್ ಬಾಂಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Bidar; ಸಾಲ ಬಾಧೆಯಿಂದ ರೈತ ಆತ್ಮಹ*ತ್ಯೆ

court

Koppal; ಮರುಕುಂಬಿ ಪ್ರಕರಣ: 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

1-bharat

BJP; ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಸಿದ ಭರತ್ ಬೊಮ್ಮಾಯಿ

1-congress

By Election; ಕೈ ಶಕ್ತಿ ಪ್ರದರ್ಶನ: ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಅನ್ನಪೂರ್ಣ

somashekar st

Karnataka BJP ; 8 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ..!; ಎಸ್.ಟಿ.ಸೋಮಶೇಖರ್ ಬಾಂಬ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

army

J&K ; ಮತ್ತೆ ಉಗ್ರರ ಅಟ್ಟಹಾಸ: ದಾಳಿಯಲ್ಲಿ ನಾಗರಿಕ ಸಾ*ವು, ಹಲವು ಯೋಧರಿಗೆ ಗಾಯ

13

Siddapura: ಅಂಪಾರು ಮನೆ ಕಳವು; 24 ತಾಸಿನಲ್ಲಿ ಆರೋಪಿ ಸೆರೆ

15

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ; ಪ್ರಗತಿಯತ್ತ ದಾಪುಗಾಲು

1-wewqewqe

Bidar; ಸಾಲ ಬಾಧೆಯಿಂದ ರೈತ ಆತ್ಮಹ*ತ್ಯೆ

bike

Doddangudde: ದ್ವಿಚಕ್ರ ವಾಹನ ಕಳವು; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.