NCP Crisis; ನನಗೆ ನಿವೃತ್ತರಾಗಲು ಹೇಳಲು ಅವರು ಯಾರು? ಸೋದರಳಿಯನ ವಿರುದ್ಧ ಗುಡುಗಿದ ಶರದ್
Team Udayavani, Jul 8, 2023, 11:23 AM IST
ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ಯ ಬಿಕ್ಕಟ್ಟು ಮುಂದುವರಿದಿದೆ. ಸೋದರಳಿಯ ಅಜಿತ್ ಪವಾರ್ ಅವರ ‘ನಿವೃತ್ತಿ’ ಹೇಳಿಕೆಗೆ ತಿರುಗೇಟು ನೀಡಿರುವ ವರಿಷ್ಠ ಶರದ್ ಪವಾರ್, ‘ನಾ ಟೈಯರ್ಡ್ ಹು, ನಾ ರಿಟೈಯರ್ಡ್ ಹು’ (ದಣಿದೂ ಇಲ್ಲ, ನಿವೃತ್ತನೂ ಅಲ್ಲ) ಎಂದು ಹೇಳಿದ್ದಾರೆ.
ಇಂಡಿಯಾ ಟುಡೇ ಜೊತೆ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ತನ್ನನ್ನು ಮುಂದುವರಿಯುವಂತೆ ಹೇಳಿರುವ ಕಾರಣ 82 ವರ್ಷವಾದರೂ ನಾನಿನ್ನು ಕೆಲಸ ಮಾಡುತ್ತಿದ್ದೇನೆ ಎಂದರು.
ತನಗೆ ಇನ್ನೂ ವಯಸ್ಸಾಗಿಲ್ಲ ಎಂದ ಶರದ್ ಪವಾರ್ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಸಿದ್ದ ‘ನಾ ಟೈಯರ್ಡ್ ಹು, ನಾ ರಿಟೈಯರ್ಡ್ ಹು’ ಮಾತನ್ನು ಹೇಳಿದರು.
ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಮತ್ತು ಅವರು ಯಾವುದೇ ಸಚಿವ ಸ್ಥಾನವನ್ನು ಹೊಂದಿಲ್ಲ ಎಂದ ಎನ್ಸಿಪಿ ಮುಖ್ಯಸ್ಥ ಶರದ್, “ನನಗೆ ನಿವೃತ್ತರಾಗಲು ಹೇಳಲು ಅವರು ಯಾರು? ನಾನು ಇನ್ನೂ ಕೆಲಸ ಮಾಡಬಹುದು” ಎಂದರು.
ಶರದ್ ಪವಾರ್ ಅವರ ಸಭೆ ಕಾನೂನು ಬಾಹಿರ ಎಂಬ ಅಜಿತ್ ಹೇಳಿಕೆಗೆ ತಿರುಗೇಟು ನೀಡಿದ ಶರದ್, ‘ಪ್ರಫುಲ್ ಪಟೇಲ್ ಸೇರಿ ಪಕ್ಷದಲ್ಲಿ ಮಾಡಿರುವ ಎಲ್ಲಾ ನೇಮಕಾತಿಗಳು ಕಾನೂನು ಬಾಹಿರ’ ಎಂದರು.
ಶರದ್ ಪವಾರ್ ಪರಿವಾರ ರಾಜಕಾರಣ ಮಾಡುತ್ತಿದ್ದಾರೆಂಬ ಅಜಿತ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅಳಿಯ ಅಜಿತ್ ಗೆ ನಾಲ್ಕು ಬಾರಿ ಉಪಮುಖ್ಯಮಂತ್ರಿ ಹುದ್ದೆ ಕೊಡಲಾಗಿತ್ತು. ಅಲ್ಲದೆ ಪ್ರಮುಖ ಖಾತೆಗಳನ್ನು ನೀಡಲಾಗಿತ್ತು. ಚುನಾವಣೆಯಲ್ಲಿ ಸೋತರೂ ಯುಪಿಎಯಲ್ಲಿ ಪ್ರಫುಲ್ ಪಟೇಲ್ ಅವರನ್ನು ಮಂತ್ರಿ ಮಾಡಲಾಯಿತು, ಯುಪಿಎಯಲ್ಲಿ ಪಿಎ ಸಂಗ್ಮಾ ಅವರ ಪುತ್ರಿ ಕೇಂದ್ರ ಸಚಿವೆಯಾಗಿ ನೇಮಕಗೊಂಡರು, ಸುಪ್ರಿಯಾ ಸುಳೆ ಅವರಿಗೆ ಇನ್ನೂ ಆ ಅವಕಾಶ ಸಿಕ್ಕಿಲ್ಲ, ಅಜಿತ್ ಹೀಗೆ ಹೇಳುತ್ತಿರುವುದು ಹೇಗೆ? ಇದು ತಪ್ಪು” ಎಂದು ಎನ್ಸಿಪಿ ಮುಖ್ಯಸ್ಥರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengal; 104 ವರ್ಷದ ವೃದ್ಧನಿಗೆ ಕೊನೆಗೂ ಜೈಲು ವಾಸದಿಂದ ಮುಕ್ತಿ!!
Mahayuti; ಮತ್ತೊಮ್ಮೆ ಮಹಾ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಆಯ್ಕೆ
UP; ಹಿಂಸಾಚಾರ ಪೀಡಿತ ಸಂಭಾಲ್ ಗೆ ತೆರಳುತ್ತಿದ್ದ ರಾಹುಲ್ ಗಾಂಧಿ ನಿಯೋಗಕ್ಕೆ ತಡೆ
Navy Day; ನೌಕಾಪಡೆಯ ಬದ್ಧತೆಯಿಂದ ದೇಶದ ಸುರಕ್ಷತೆ, ಸಮೃದ್ಧಿ ಖಾತ್ರಿ: ಪ್ರಧಾನಿ ಮೋದಿ
Kerala; ಅಯ್ಯಪ್ಪ ಭಕ್ತರ ಬಸ್ ಅಪಘಾ*ತ: ಓರ್ವ ಮೃ*ತ್ಯು, 19 ಮಂದಿಗೆ ಗಾಯ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್ಗಾಗಿ ಅಡಿಲೇಡ್ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.