ಇಂದಿರಾ ಆಸ್ಪತ್ರೆಯಲ್ಲಿ ಶಿಶು ನ್ಯೂನತೆ ಪತ್ತೆ ಸೇವೆ

Team Udayavani, Jul 9, 2023, 11:20 AM IST

ಇಂದಿರಾ ಆಸ್ಪತ್ರೆಯಲ್ಲಿ ಶಿಶು ನ್ಯೂನತೆ ಪತ್ತೆ ಸೇವೆ

ಬೆಂಗಳೂರು: ಗರ್ಭಾವಸ್ಥೆ ಅಥವಾ ಭ್ರೂಣವಸ್ಥೆ ಯಲ್ಲಿ ಮಗುವಿನ ನ್ಯೂನತೆ ಪತ್ತೆ ಹಚ್ಚಲು ಬಳಸುವ ‘’ಫೀಟಲ್‌ ಮೆಡಿಸಿನ್‌’ ವಿಭಾಗವನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಪ್ರಾರಂಭಿಸಲು ಸಿದ್ಧತೆ ನಡೆಸಲಾಗಿದೆ.

ತಾಯಿಯ ಗರ್ಭದಲ್ಲಿ ಬೆಳೆಯುವ ಶಿಶುಗಳಲ್ಲಿ ಕಂಡು ಬರುವ ಅನುವಂಶೀಯ ಕಾಯಿಲೆ, ಅಂಗ ವೈಕಲ್ಯತೆ, ಹೃದಯ ಸಂಬಂಧಿ ಕಾಯಿಲೆಯಂತಹ ನ್ಯೂನ್ಯತೆಗಳನ್ನು ಭ್ರೂಣಾವಸ್ಥೆಯಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಪ್ರಕ್ರಿಯೆಗೆ ಫೀಟಲ್‌ ಚಿಕಿತ್ಸೆ ಎನ್ನಲಾಗುತ್ತದೆ. ಆದರೆ, ಈ ಚಿಕಿತ್ಸೆ ರಾಜ್ಯದ ಕೆಲವೇ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದೆ. ಲಕ್ಷಾಂತರ ಬಡ ಮಹಿಳೆಯರು ಭ್ರೂಣವಸ್ಥೆಯಲ್ಲಿ ಶಿಶುವಿನಲ್ಲಿ ನ್ಯೂನತೆಗಳಿದ್ದರೂ ಆರ್ಥಿಕ ಮುಗ್ಗಟ್ಟಿನಿಂದ ಸೂಕ್ತ ಚಿಕಿತ್ಸೆ ಪಡೆಯುತ್ತಿರಲಿಲ್ಲ. ಪರಿಣಾಮ ಇಂತಹ ಮಗು ನ್ಯೂನತೆಗೆ ಒಳಪಡಬೇಕಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಉಚಿತವಾಗಿ “ಫೀಟಲ್‌ ಮೆಡಿಸಿನ್‌’ ಚಿಕಿತ್ಸೆ ಒದಗಿಸಲು ಸಿದ್ಧತೆ ನಡೆಸಿದೆ.

ಕೆಲವೇ ತಿಂಗಳಲ್ಲಿ ಇದು ಕಾರ್ಯಾರಂಭ ಗೊಳ್ಳಲಿದ್ದು, ಲಕ್ಷಾಂತರ ಬಡ ಗರ್ಭಿಣಿಯರು ಇಲ್ಲಿ ಉಚಿತವಾಗಿ ಫೀಟಲ್‌ ಮೆಡಿಸಿನ್‌ ಪಡೆದು ಆರೋಗ್ಯಕರ ಮಗುವಿಗೆ ಜನ್ಮ ನೀಡಬಹುದು.

ಒಂದೂವರೆ ಕೋಟಿ ರೂ. ಅನುದಾನ: ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಫೀಟಲ್‌ ಮೆಡಿಸಿನ್‌ ಅಳವಡಿಸಿಕೊಳ್ಳಲು ಕೆಪಿಟಿಸಿಎಲ್‌ನ ಸಿಎಸ್‌ಆರ್‌ ಫ‌ಂಡ್‌ನಿಂದ ಒಂದೂವರೆ ಕೋಟಿ ರೂ. ಅನುದಾನ ದೊರೆತಿದೆ. ಅಸ್ಟ್ರಾ ಸೌಂಡ್‌, ಸಿಟಿ ಸ್ಕ್ಯಾನಿಂಗ್‌, ಎಂಆರ್‌ಐ, ಭ್ರೂಣ ಪರೀಕ್ಷಿಸುವ ಆಧುನಿಕ ಉಪಕರಣ ಸೇರಿ ಹಲವು ವೈದ್ಯಕೀಯ ಉಪಕರಣ ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಚಿಕಿತ್ಸೆಗೆ ಅಗತ್ಯವಾಗಿ ಬೇಕಾಗಿರುವ ರೆಡಿಯೋಲಾಜಿಸ್ಟ್‌, ಫೀಟಲ್‌ ಚಿಕಿತ್ಸೆಯ ತರಬೇತಿ ಹೊಂದಿರುವ ತಜ್ಞರು, ಭ್ರೂಣವಸ್ಥೆಯಲ್ಲಿ ಶಿಶುವಿನ ಕಾಯಿಲೆಗಳ ಬಗ್ಗೆ ಪರಿಶೀಲಿಸುವ ಮಕ್ಕಳ ತಜ್ಞ ವೈದ್ಯರು, ಸ್ತ್ರೀ ರೋಗ ತಜ್ಞರನ್ನು ನೇಮಿಸಲಾಗುತ್ತಿದೆ.

ಉಳಿದಂತೆ ನರ್ಸ್‌ ಗಳು, ಸ್ವತ್ಛತಾ ಸಿಬ್ಬಂದಿ ಸೇರಿ 18ಕ್ಕೂ ಅಧಿಕ ಸಿಬ್ಬಂ ದಿಯ ಅಗತ್ಯತೆಗಳಿವೆ. ಸದ್ಯ ಆಸ್ಪತ್ರೆಯಲ್ಲಿರುವ ತಜ್ಞ ವೈದ್ಯರೇ ಫೀಟಲ್‌ ಮೆಡಿಸಿನ್‌ ವಿಭಾಗದಲ್ಲಿ ಸೇವೆ ಸಲ್ಲಿಸಲಿದ್ದಾರೆ. ನಂತರದ ದಿನಗಳಲ್ಲಿ ಚಿಕಿತ್ಸೆಗಾಗಿ ಬರುವವರಿಗೆ ಅನುಗುಣವಾಗಿ ಹೆಚ್ಚಿನ ವೈದ್ಯರನ್ನು ನೇಮಿಸಲಾಗುವುದು ಎಂದು ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್‌.ಸಂಜಯ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಪಾಲಕರ ಜತೆ ಸಮಾಲೋಚನೆ: ಫೀಟಲ್‌ ಮೆಡಿಸಿನ್‌ ವ್ಯವಸ್ಥೆಯಲ್ಲಿ ಪಾಲಕರಿಗೆ ಆಪ್ತ ಸಮಾಲೋಚಿಸಿ ಶಿಶುವಿಗಿರುವ ಸಮಸ್ಯೆ ವಿವರಿಸಲಾಗುತ್ತದೆ. ಪಾಲಕರ ನಿರ್ಧಾರದ ಮೇಲೆ ವೈದ್ಯರು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಯಾವುದೇ ಅನುಮಾನಗ ಳಿದ್ದರೆ ಸ್ಕ್ರೀನಿಂಗ್‌, ಅಸ್ಟ್ರಾ ಸ್ಕ್ಯಾನಿಂಗ್‌ ಮೂಲಕ ಭ್ರೂಣದ ನ್ಯೂನತೆ ಪತ್ತೆ ಹಚ್ಚಬಹುದು. ಫೀಟಲ್‌ ಮೆಡಿಸಿನ್‌ ಚಿಕಿತ್ಸೆಯಲ್ಲಿ ಫೀಟಲ್‌ ಬ್ಲಿಡ್‌ ಪರೀಕ್ಷೆ, ಆಮ್ಯೂನ್ಯೂಟಿಕ್‌ ಫ್ರಿಡ್‌ ಸ್ಯಾಂಪಲ್‌, ಕೊರಿಯಾನಿಕ್‌ ವಿಲೈ ಬಯೋಪ್ಸಿ ಸೇರಿದಂತೆ ವಿವಿಧ ಪರೀಕ್ಷೆ ನಡೆಸಲಾಗುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.

ಶೇ.4 ಶಿಶುಗಳಲ್ಲಿ ಜನ್ಮ ಜಾತ ವಿಕಲತೆ : ರಾಜ್ಯದಲ್ಲಿ ಶೇ.4ರಷ್ಟು ಶಿಶುಗಳು ಜನ್ಮಜಾತ ವಿಕಲತೆ ಹೊಂದಿರುತ್ತದೆ. ಪ್ರತಿ ವರ್ಷ 4-5 ಸಾವಿರ ಶಿಶುಗಳಲ್ಲಿ ಈ ಸಮಸ್ಯೆ ಕಂಡು ಬರುತ್ತಿವೆ. ಈ ಪೈಕಿ ದೇಹ ರಚನೆ ಹಾಗೂ ಅನುವಂಶೀಯತೆಯ ವೈಕಲ್ಯತೆ ಹೆಚ್ಚಾಗಿರುತ್ತದೆ. ದೇಹ ರಚನೆ ವಿಕಲತೆಯು ಮೆದುಳು, ಹೃದಯದಂತಹ ಪ್ರಮುಖ ಅಂಗಗ ಳಿಂದ ಹಿಡಿದು ಬೆರಳುಗಳವರೆಗೂ ಇರುತ್ತದೆ. ಅನುವಂಶೀಯ ವೈಕಲ್ಯತೆಗಳಿಂದ ದೈಹಿಕ, ಮಾನ ಸಿಕ ವಿಕಲತೆ ಉಂಟಾಗುತ್ತದೆ. ಗರ್ಭಧಾರಣೆಯ 3 ರಿಂದ 7 ತಿಂಗಳೊಳಗೆ ನ್ಯೂನತೆ ಪತ್ತೆಹಚ್ಚಬಹುದು.

ಅವಿನಾಶ ಮೂಡಂಬಿಕಾನ

ಟಾಪ್ ನ್ಯೂಸ್

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್‌  ಸೇವೆ

1

Karinja: ಅಪಾಯಕಾರಿ ವಿದ್ಯುತ್‌ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.