ಪವನ್-ಸಾಯಿ ಧರಮ್ ʼಬ್ರೋʼ ಫಸ್ಟ್ ಸಿಂಗಲ್: ಥಮನ್ ಮ್ಯೂಸಿಕ್ಗೆ ಮತ್ತೆ ಗರಂ ಆದ ಫ್ಯಾನ್ಸ್
Team Udayavani, Jul 9, 2023, 1:27 PM IST
ಹೈದರಾಬಾದ್: ಪವರ್ ಸ್ಟಾರ್ ಪವನ್ ಕಲ್ಯಾಣ್ – ಸಾಯಿ ಧರಮ್ ತೇಜ್ ಅಭಿನಯದ ʼಬ್ರೋʼ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಪ್ರಚಾರದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಮೊದಲ ಸಿಂಗಲ್ ಹಾಡನ್ನು ರಿಲೀಸ್ ಮಾಡಿದೆ.
ʼಬ್ರೋʼ ತಮಿಳಿನ ʼವಿನೋದಯ ಸಿತಮ್ʼ ಸಿನಿಮಾದ ರಿಮೇಕ್. ಈ ಸಿನಿಮಾವನ್ನು ಸಮುದ್ರಕನಿ ನಿರ್ದೇಶನ ಮಾಡಿದ್ದಾರೆ. ಟಾಲಿವುಡ್ ನಲ್ಲೂ ಇವರೇ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಅವರ ಚಿತ್ರಕಥೆ ಮತ್ತು ಸಂಭಾಷಣೆ ಇದ್ದು, ಥಮನ್ ಸಂಗೀತ ಸಂಯೋಜಿಸಿದ್ದಾರೆ.
ಸಿನಿಮಾದ ಫಸ್ಟ್ ಸಿಂಗಲ್ ಹಾಡು ʼಮೈ ಡಿಯರ್ ಮಾರ್ಕಂಡೇಯʼ ರಿಲೀಸ್ ಆಗಿದೆ. ಹಾಡಿನಲ್ಲಿ ಪವನ್ ಕಲ್ಯಾಣ್, ಧರಮ್ ತೇಜ್ ಬಿಂದಾಸ್ ಆಗಿ ಸ್ಟೆಪ್ ಹಾಕಿದ್ದಾರೆ. ಕಿಕ್ ಏರಿಸುವ ಬಿಜಿಎಂನಿಂದ ಹಾಡು ಗಮನ ಸೆಳೆಯುತ್ತದೆ. ಆದರೆ ಇದೇ ಮ್ಯೂಸಿಕ್ ಈಗ ಒಂದಷ್ಟು ಕಾರಣಕ್ಕೆ ಟೀಕೆಗೆ ಒಳಗಾಗುತ್ತಿದೆ.
ಹಾಡು ಇನ್ನು ಉತ್ತಮವಾಗಬಹುದಿತ್ತು. ಥಮನ್ ಅವರ ಮ್ಯೂಸಿಕ್ ಚೆನ್ನಾಗಿ ಕೊಟ್ಟಿದ್ದರೆ ಹಾಡು ಒಳ್ಳೆಯ ರೀತಿಯಲ್ಲಿ ಮೂಡಿ ಬರುತ್ತಿತ್ತು ಎಂದು ಕೆಲ ವರ್ಗದ ಜನರ ಹೇಳಿದರೆ, ಇನ್ನು ಕೆಲವರು ಹಾಡನ್ನು ಮೆಚ್ಚಿಕೊಂಡಿದ್ದಾರೆ. ಕೆಲವರು ನೆಗೆಟಿವ್ ಕಾಮೆಂಟ್ ಮಾಡಿ, ಥಮನ್ ಅವರ ಕೆಲಸವನ್ನು ಟೀಕಿಸಿದ್ದಾರೆ. ಇದು ಬಿಟ್ಟು ಇನ್ನು ಕೆಲವರು ಹಾಡಿನಲ್ಲಿ ಪವನ್ ಕಲ್ಯಾಣ್ ಅವರನ್ನು ಹೆಚ್ಚು ತೋರಿಸಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ʼಗುಂಟೂರು ಕಾರಂʼ ಚಿತ್ರಕ್ಕಾಗಿ ಸಂಯೋಜಿಸಿದ ಟ್ಯೂನ್ ಗಳು ಸ್ಟಾರ್ ನಟ ಮಹೇಶ್ ಬಾಬು ಅವರಿಗೆ ಇಷ್ಟವಾಗದ ಕಾರಣ ಥಮನ್ ಅವರನ್ನು ಚಿತ್ರದಿಂದ ಕೈಬಿಡಲಾಗಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆ ದಿನದಿಂದ ಒಂದಲ್ಲ ಒಂದು ಕಾರಣಕ್ಕೆ ಥಮನ್ ಸುದ್ದಿಯಲ್ಲಿದ್ದಾರೆ.
ಅಂದಹಾಗೆ ʼಬ್ರೋʼ ಸಿನಿಮಾ ಇದೇ ಜು.28 ರಂದು ತೆರೆಗೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.