Bawaal trailer out: ʼಬವಾಲ್ʼ ಇದು ವೈಮನಸ್ಸುಗಳ ಅಂತರ್ಯುದ್ಧ; ಟ್ರೇಲರ್ ರಿಲೀಸ್
Team Udayavani, Jul 9, 2023, 5:15 PM IST
ಮುಂಬಯಿ: ವರುಣ್ ಧವನ್ – ಜಾಹ್ನವಿ ಕಪೂರ್ ಮೊದಲ ಬಾರಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ʼಬವಾಲ್ʼ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.
ದುಬೈಯಲ್ಲಿ ಸಿನಿಮಾ ತಂಡ ಟ್ರೇಲರ್ ರಿಲೀಸ್ ಗಾಗಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಸಿನಿಮಾದಲ್ಲಿ ನಟಿಸಿರುವ ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ಹಾಗೂ ಇತರ ಕಲಾವಿದರ ಸಮ್ಮುಖದಲ್ಲಿ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.
ಈಗಾಗಲೇ ಬಾಲಿವುಡ್ ನಲ್ಲಿ ʼ ದಂಗಲ್ʼ, ʼಚಿಚೋರೆʼಯಂತಹ ಹಿಟ್ ಚಿತ್ರಗಳನ್ನು ನೀಡಿರುವ ನಿತೇಶ್ ತಿವಾರಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಸಿನಿಮಾ ಮೇಲಿನ ನಿರೀಕ್ಷೆಗೊಂದು ಕಾರಣವಾಗಿದೆ.
ಹಿಸ್ಟರಿ ಟೀಚರ್ ಆಗಿರುವ ವರುಣ್ ಧವನ್ ಶಾಲಾ ಮಕ್ಕಳಿಗೆ ಇತಿಹಾಸದ ಬಗ್ಗೆ ತಪ್ಪು ಮಾಹಿತಿಯನ್ನು ನೀಡುವವರಾಗಿದ್ದಾರೆ. ಜಾಹ್ನವಿ ಕಪೂರ್ ಹಾಗೂ ನಾಯಕ ನಟ ವರುಣ್ ಧವನ್ ಇಟಲಿಗೆ ಶಿಫ್ಟ್ ಆಗುತ್ತಾರೆ. ಅಲ್ಲಿಂದಲೇ ಸಿನಿಮಾ ʼಬವಾಲ್ʼ ಆಗುತ್ತದೆ. ಹುಡುಗಿ ಹಿಂದೆ ಬೀಳುವ ಹುಡುಗ, ಸಂಬಂಧವನ್ನು ಉಳಿಸಲು ಯತ್ನಿಸಿ ಭಾವನೆಗಳೊಂದಿಗೆ ಹೋರಾಡುವ ನಾಯಕ- ನಾಯಕಿಯ ಪಾತ್ರದ ಝಲಕ್ ನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇಟಲಿಯಲ್ಲಿ ನಡೆದ ಗ್ಯಾಸ್ ಚೇಂಬರ್ ನರಮೇಧದ ಸುತ್ತ ಈ ಸಿನಿಮಾದ ಕಥೆ ಇರಬಹುದು ಎನ್ನಲಾಗಿದೆ. ಇಲ್ಲೊಂದು ಪ್ರೇಮ ಕಥೆಯ ಮೂಲಕ ಇದನ್ನು ನಿರ್ದೇಶಕರು ಹೇಳಿರಬಹುದು ಎಂದು ಹೇಳಲಾಗುತ್ತಿದೆ.
ಇದು ಹೌದೋ ಅಲ್ವೋ ಎನ್ನುವುದನ್ನು ನೋಡಲು ಜು.21 ರವರೆಗೆ ಕಾದು ನೋಡಬೇಕಿದೆ. ಸಿನಿಮಾ ನೇರವಾಗಿ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗಲಿದೆ.
ʼಬವಾಲ್’ ಪ್ಯಾರಿಸ್‌ನ ಐಕಾನಿಕ್ ಸಲ್ಲೆ ಗುಸ್ಟಾವ್-ಐಫೆಲ್ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಈ ಸ್ಥಳದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
pyaar se bawaal tak ka ek safar! 💙
produced by #SajidNadiadwala and directed by @niteshtiwari22#BawaalOnPrime, July 21
trailer out now@Varun_dvn #JanhviKapoor @ashwinyiyer @WardaNadiadwala @NGEMovies @earthskynotes #PiyushGupta #ShreyasJain #NikhilMehrotra @TSeries pic.twitter.com/IIgNRAIKoh— prime video IN (@PrimeVideoIN) July 9, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್ ಮಾತು
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.