ಅಂದು ಟೀಮ್ ಮೇಟ್ಸ್- ಇಂದು ಗುರು ಶಿಷ್ಯರು: ವಿಶೇಷ ಪೋಸ್ಟ್ ಹಂಚಿಕೊಂಡ ವಿರಾಟ್ ಕೊಹ್ಲಿ
Team Udayavani, Jul 10, 2023, 10:58 AM IST
ಡೊಮಿನಿಕಾ: ಭಾರತ ತಂಡವು ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ. ಜುಲೈ 12ರಿಂದ ವಿಂಡೀಸ್ ಸರಣಿ ಆರಂಭವಾಗಲಿದ್ದು, ಮೊದಲ ಟೆಸ್ಟ್ ಪಂದ್ಯವು ಡೊಮಿನಿಕಾದಲ್ಲಿ ನಡೆಯಲಿದೆ.
ಡೊಮಿನಿಕಾ ಮೈದಾನದಲ್ಲಿ ಆರು ವರ್ಷಗಳ ಬಳಿಕ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. 2011ರ ಬಳಿಕ ಭಾರತ ಇಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವಾಡುತ್ತಿದೆ. 12 ವರ್ಷಗಳ ಹಿಂದೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಇಲ್ಲಿ ಸರಣಿ ಗೆಲುವು ಸಾಧಿಸಿತ್ತು.
ಮುರಳಿ ವಿಜಯ್, ಹರ್ಭಜನ್ ಸಿಂಗ್ ಮತ್ತು ರಾಹುಲ್ ದ್ರಾವಿಡ್ ಅಂದಿನ ಟೆಸ್ಟ್ ಪಂದ್ಯದಲ್ಲಿ ಮಿಂಚಿದ್ದರು. ಡೊಮಿನಿಕಾ ಟೆಸ್ಟ್ ಪಂದ್ಯ ಡ್ರಾ ಆದರೂ ಭಾರತ 1-0 ಅಂತರದಿಂದ ಸರಣಿ ಜಯಿಸಿತ್ತು. ಅಂದು ಯುವ ವಿರಾಟ್ ಕೊಹ್ಲಿಯೂ ಭಾರತ ತಂಡದ ಸದಸ್ಯರಾಗಿದ್ದರು.
ಇದನ್ನೂ ಓದಿ:Chikkamagaluru: ಚಾರ್ಮಾಡಿ ಘಾಟ್ ನಲ್ಲಿ ಪ್ರವಾಸಿಗರ ಹುಚ್ಚು ಮೋಜು-ಮಸ್ತಿ
ಇಂದು ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಕೋಚ್ ರಾಹುಲ್ ದ್ರಾವಿಡ್ ಜೊತೆಗಿರುವ ಫೋಟೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಅಂದು ಒಂದೇ ತಂಡದಲ್ಲಿ ಆಡಿದ್ದ ವಿರಾಟ್ ಮತ್ತು ದ್ರಾವಿಡ್ ಇಂದೂ ತಂಡದಲ್ಲಿದ್ದಾರೆ. ಆದರೆ ಜವಾಬ್ದಾರಿಗಳು ಬೇರೆ. ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾರೆ. ಬೇರೆ ಯಾವ ಆಟಗಾರನೂ ಈಗ ತಂಡದಲ್ಲಿಲ್ಲ. ಆಗ ತಂಡದಲ್ಲಿದ್ದ ಇಶಾಂತ್ ಶರ್ಮಾ ಈ ಸರಣಿಗೆ ವೀಕ್ಷಕ ವಿವರಣೆ ಮಾಡಲಿದ್ದಾರೆ.
The only two guys part of the last test we played at Dominica in 2011. Never imagined the journey would bring us back here in different capacities. Highly grateful. 🙌 pic.twitter.com/zz2HD8nkES
— Virat Kohli (@imVkohli) July 9, 2023
“2011 ರಲ್ಲಿ ಡೊಮಿನಿಕಾದಲ್ಲಿ ನಾವು ಆಡಿದ ಕೊನೆಯ ಟೆಸ್ಟ್ ನಲ್ಲಿದ್ದ ಇಬ್ಬರು ವ್ಯಕ್ತಿಗಳು. ಪ್ರಯಾಣವು ನಮ್ಮನ್ನು ಇಲ್ಲಿಗೆ ವಿಭಿನ್ನ ಸಾಮರ್ಥ್ಯಗಳಲ್ಲಿ ಮರಳಿ ತರುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ” ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.
ಭಾರತ ತಂಡವು ವೆಸ್ಟ್ ಇಂಡೀಸ್ ಸರಣಿಯೊಂದಿಗೆ ಹೊಸ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆವೃತ್ತಿಯನ್ನು ಆರಂಭಿಸಲಿದೆ. ವಿಂಡೀಸ್ ಸರಣಿಯಲ್ಲಿ ಎರಡು ಟೆಸ್ಟ್ ಪಂದ್ಯಗಳು, ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ20 ಪಂದ್ಯಗಳು ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.