ರಾಮನಗರಕ್ಕೆ ಕಾಡುತ್ತಿದೆ ಬರದ ಆತಂಕ!
Team Udayavani, Jul 10, 2023, 3:20 PM IST
ರಾಮನಗರ: ಕಳೆದ ಬಾರಿ ಅತಿವೃಷ್ಟಿಯಿಂದ ನಲುಗಿದ್ದ ಜಿಲ್ಲೆಯಲ್ಲಿ ಈ ಬಾರಿ ಬರದ ಆತಂಕ ಕಾಡುತ್ತಿದೆ. ಮುಂಗಾರು ಆರಂಭಗೊಂಡು ತಿಂಗಳೇ ಕಳೆದರೂ, ಜಿಲ್ಲೆಗೆ ಆಶಾದಾಯಕ ಮಳೆ ಸುರಿಯದ ಹಿನ್ನೆಲೆ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಮೊಟಕು ಗೊಂಡಿದೆ. ಇನ್ನು 15 ದಿನಗಳೊಳಗೆ ಮಳೆ ಸುರಿಯದೇ ಹೋದಲ್ಲಿ ಜಿಲ್ಲೆಗೆ ಬರದ ಕಾರ್ಮೋಡ ಕವಿ ಯ ಲಿದ್ದು, ರೈತ ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಮುಗಿಲಿನತ್ತ ಮುಖ ಮಾಡಿ ಕಾಯುತ್ತಿದ್ದಾನೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಇದೇ ರೀತಿ ಮುಂಗಾರು ಮಾರುತಗಳು ಜುಲೈ ತಿಂಗಳಲ್ಲೂ ಕೈಕೊಟ್ಟಿದ್ದೇ ಆದಲ್ಲಿ ಜಿಲ್ಲೆಗೆ ಬರ ಆವರಿಸುವ ಭೀತಿ ಎದುರಾಗಿದೆ. ಜೂನ್ ತಿಂಗಳಲ್ಲಿ ಶೇ.50ರಷ್ಟು ಮಳೆ ಕೊರತೆಯಾಗಿದ್ದು, ಸಕಾಲದಲ್ಲಿ ಮಳೆ ಬೀಳದ ಪರಿಣಾಮ ಜಿಲ್ಲಾದ್ಯಂತ ಬಿತ್ತನೆ ಕುಂಠಿತಗೊಂಡಿದೆ. ಜಿಲ್ಲೆ ಯಲ್ಲಿ 92,655 ಹೆಕ್ಟರ್ ವಿಸ್ತೀರ್ಣ ದಲ್ಲಿ ಬಿತ್ತನೆಯ ಗುರಿ ಯನ್ನು ಹೊಂದಿದ್ದು, ಇದು ವರೆಗೆ ಬಿತ್ತನೆ ನಡೆದಿ ರುವು ದು ಕೇವಲ 484 ಹೆಕ್ಟೇರ್ ಪ್ರದೇಶ ದಲ್ಲಿ ಮಾತ್ರ. ಶೇ.99.99ರಷ್ಟು ಭೂಮಿ ಯಲ್ಲಿ ಇನ್ನು ಬಿತ್ತನೆ ನಡೆದಿಲ್ಲ.
ಮೋಡ ಕವಿದ ವಾತಾವರಣ: ಏಪ್ರಿಲ್, ಮೇ ತಿಂಗಳಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಉತ್ತಮ ವಾಗಿ ಸುರಿದಿತ್ತು. ಆದರೆ, ಜೂನ್‌ನಿಂದ ಮುಂ ಗಾರು ಆರಂಭಗೊ ಳ್ಳಬೇಕಿತ್ತಾದರೂ, ಇದು ವರೆಗೆ ಜಿಲ್ಲೆಯಲ್ಲಿ ಸರಿಯಾಗಿ ಮಳೆ ಸುರಿದಿಲ್ಲ. ಇದ ರಿಂದ ಬಹುತೇಕ ರೈತರು ಇನ್ನೂ ಚೊಚ್ಚಲ ಉಳುಮೆ ಯನ್ನೇ ಪೂರ್ಣಗೊಳಿಸಿಲ್ಲ. ಇದ ರಿಂದ ಮಳೆ ಆರಂಭಗೊಂಡರೂ, ಬಿತ್ತನೆ ಕಾರ್ಯ ಆರಂಭ ಗೊಳ್ಳುವುದು ಮತ್ತಷ್ಟು ವಿಳಂಬ ವಾಗಲಿದೆ. ಕಳೆದ ಮೂರು - ನಾಲ್ಕು ದಿನಗಳಿಂದ ಜಿಲ್ಲಾದ್ಯಂತ ಮೋಡ ಕವಿದ ವಾತಾ ವರಣ ವಿದ್ದು, ಆಗಾಗ ತುಂತುರು ಮಳೆ ಸುರಿ ಯು ತ್ತಿದೆ ಯಾ ದರೂ, ಈ ಮಳೆ ಯಿಂದ ರೈತರಿಗೆ ಯಾವು ದೇ ಅನುಕೂಲ ಆಗುತ್ತಿಲ್ಲ.
ಶೇ.50ರಷ್ಟು ಮಳೆ ಕೊರತೆ: ಜೂನ್ ತಿಂಗಳಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದ ಕಾರಣ ಜಿಲ್ಲೆಯಲ್ಲಿ 70 ಮಿ.ಮೀ.ನಷ್ಟು ಮಳೆ ಸುರಿಯ ಬೇಕಿತ್ತು. ಆದರೆ, ಜೂನ್ ಅಂತ್ಯಕ್ಕೆ ಸುರಿದಿರುವ ಮಳೆಯ ಪ್ರಮಾಣ ಕೇವಲ 35 ಎಂ.ಎಂ. ಮಾತ್ರ. ಇದೂ ಜಿಲ್ಲಾದ್ಯಂತ ಸಮರ್ಪಕ ವಾಗಿ ಹಂಚಿಕೆ ಆಗಿಲ್ಲ. ಇದರಿಂದ ಜಿಲ್ಲೆಯಲ್ಲಿ ಕೃಷಿ ಚುಟು ವಟಿಕೆಗಳು ಇನ್ನು ಆರಂಭವಾಗಿಲ್ಲ. ಪ್ರಸಕ್ತ ತಿಂಗಳಲ್ಲಿ ಸಹ ಸುರಿದಿರುವ ಮಳೆ ಆಶಾದಾಯ ಕವೆನಿಸದಿದ್ದು, ಈ ತಿಂಗಳ ಅಂತ್ಯದೊಳಗೆ ಮಳೆ ಸುರಿಯದಿದ್ದರೆ ಜಿಲ್ಲೆ ಯಲ್ಲಿ ಬರ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ.
ಜಿಲ್ಲೆಯಲ್ಲಿ ಬಿತ್ತನೆ ಕಾಣದ ಎಣ್ಣೆಕಾಳು ಬೆಳೆಗಳು: ಜಿಲ್ಲೆಯಲ್ಲಿ ಪ್ರಮುಖ ಎಣ್ಣೆಕಾಳು ಬೆಳೆಯಾದ ಎಳ್ಳು ಮೇ ತಿಂಗಳಲ್ಲಿ ಬಿತ್ತನೆಯಾಗಬೇಕಿತ್ತು. ಜಿಲ್ಲೆಯಲ್ಲಿ 1,220 ಹೆಕ್ಟೇರ್ ವಿಸ್ತೀರ್ಣದಲ್ಲಿ ಎಳ್ಳು ಬಿತ್ತನೆ ನಡೆದ 1ಸಾವಿರ ಟನ್ ಉತ್ಪಾದನೆಯಾಗಬೇಕಿತ್ತು. ಆದರೆ, ಸಾಧನೆ ಶೂನ್ಯವಾಗಿದ್ದು, ಮಳೆಯ ಅಭಾವದಿಂದ ಜಿಲ್ಲೆಯಲ್ಲಿ ಎಳ್ಳು ಬಿತ್ತನೆ ನಡೆದಿಲ್ಲ. ಇನ್ನು ಮತ್ತೂಂದು ಪ್ರಮುಖ ಬೆಳೆಯಾದ ನೆಲಗಡಲೆ ಬಿತ್ತನೆ ಕಾರ್ಯ ಸಹ ಈ ವೇಳೆಗಾಗಲೇ ಆರಂಭಗೊಳ್ಳಬೇಕಿತ್ತು. ಜಿಲ್ಲೆಯಲ್ಲಿ 1,100 ಹೆಕ್ಟೇರ್ ವಿಸ್ತೀರ್ಣದಲ್ಲಿ ನೆಲಗಡಲೆ ಬಿತ್ತನೆ ನಡೆಸಿ ಸುಮಾರು 1 ಸಾವಿರ ಟನ್ ಉತ್ಪಾದನೆಯಾಗಬೇಕಿತ್ತು. ಈ ಬೆಳೆಗೂ ಸಮಯ ಮೀರಿದ್ದು, ಬಿತ್ತನೆ ಕಾರ್ಯ ಕುಂಠಿತ ಗೊಂಡಿದೆ.
72,600 ಹೆಕ್ಟೇರ್ ರಾಗಿ ಬಿತ್ತನೆ ಮಾಡುವ ಗುರಿ: ಜಿಲ್ಲೆಯಲ್ಲಿ ಪ್ರಮುಖ ಆಹಾರ ಬೆಳೆ ಎನಿಸಿರುವ ರಾಗಿ ಬೆಳೆಯನ್ನು ಬಿತ್ತನೆ ಮಾಡಲು ರೈತರು ಮುಂಗಾರು ಮಳೆಯನ್ನು ನಿರೀಕ್ಷಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಶೇ.75 ರಷ್ಟು ಮಳೆ ಆಶ್ರಿಯ ಭೂಮಿಯಲ್ಲಿ ರಾಗಿಯನ್ನು ಬೆಳೆಯಲಾಗುತ್ತದೆ. ಜಿಲ್ಲೆಯ 72,600 ಹೆಕ್ಟೇರ್ ಭೂಮಿಯಲ್ಲಿ ರಾಗಿಯನ್ನು ಬಿತ್ತನೆ ಮಾಡುವ ಗುರಿ ಹೊಂದಿದ್ದು, 1.45 ಲಕ್ಷ ಟನ್ ಉತ್ಪಾದನೆಯ ನಿರೀಕ್ಷೆ ಇದೆ. ಈ ತಿಂಗಳ ಕೊನೆಯ ವಾರದೊಳಗೆ ಆಶಾದಾಯಕ ಮಳೆ ಸುರಿದಲ್ಲಿ ರೈತರು ಜಮೀನನ್ನು ಹದಗೊಳಿಸಿ ಬಿತ್ತನೆ ಕಾರ್ಯವನ್ನು ಆರಂಭಿಸುತ್ತಾರೆ. ಆಗಸ್ಟ್ ಎರಡನೇ ವಾರದವರೆಗೆ ರಾಗಿ ಬಿತ್ತನೆಗೆ ಅವಕಾಶವಿದ್ದು, ಅಷ್ಟರೊಳಗೆ ಮಳೆ ಸುರಿಯದೇ ಹೋದಲ್ಲಿ ರಾಗಿ ಬಿತ್ತನೆಯೂ ಸ್ತಬ್ಧಗೊಂಡು ಜಿಲ್ಲೆಯು ಬರದ ಕರಿನೆರಳಿಗೆ ಸಿಲುಕಲಿದೆ.
ಆತಂಕದಲ್ಲಿ ಅನ್ನದಾತ: ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಆರ್ಭಟಿಸಿದ್ದ ವರುಣ ಅತಿವೃಷ್ಟಿಯನ್ನು ಸುರಿಸಿದ್ದ. ಇದರಿಂದ ಜಿಲ್ಲೆಯಲ್ಲಿ ಬೆಳೆದಿದ್ದ ಬೆಳೆಗಳೆಲ್ಲಾ ನೆರೆಯಿಂದಾಗಿ ಹಾನಿಯಾದವು. ಇದೀಗ ಇನ್ನು ಮಳೆಗಾಲ ಆರಂಭಗೊಳ್ಳದ ಬರದಿಂದ ಬೆಳೆ ಬೆಳೆಯಲಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮುಂಗಾರು ಇದೇ ರೀತಿ ಕೈಕೊಟ್ಟಲ್ಲಿ ಜಿಲ್ಲೆಯಲ್ಲಿ ಎರಡನೇ ವರ್ಷವೂ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.