Scorpion; ವರ್ಷ ಪೂರ್ತಿ ಆಹಾರ ಇಲ್ಲದೇ ಇದ್ದರೂ ಬದುಕಬಲ್ಲದು ಈ ಚೇಳು!

ಸಡಿಲಾದ ಮಣ್ಣು, ಹುಲ್ಲು ಇರುವ ಜಾಗ ಚೇಳಿನ ಪ್ರಿಯವಾದ ವಾಸಸ್ಥಳ

Team Udayavani, Jul 10, 2023, 4:14 PM IST

Scorpion; ವರ್ಷ ಪೂರ್ತಿ ಆಹಾರ ಇಲ್ಲದೇ ಇದ್ದರೂ ಬದುಕಬಲ್ಲದು ಈ ಚೇಳು!

ಚೇಳು ಬಹಳ ವಿಶಿಷ್ಠವಾದ ಪ್ರಾಣಿ. ವರ್ಷ ಪೂರ್ತಿ ಆಹಾರ ಇಲ್ಲದೇ ಇದ್ದರೂ ಹಾಗೇ ಬದುಕಬಲ್ಲದು. ಹಾಗೆಯೇ, ನೀರಲ್ಲೂ, ನೀರ ಹೊರಗೆ, ಬಿಲಗಳಲ್ಲೂ ಇದು ನಿರಾತಂಕವಾಗಿ ಜೀವಿಸುತ್ತದೆ. ಅಂದ ಹಾಗೇ, ಚೇಳಿನ ಕಣ್ಣುಗಳು ಇರುವುದು ಬೆನ್ನ ಮೇಲೆ.

ಚೇಳನ್ನು ನೋಡಿದ್ದೀರಿ? ಇದರ ಕುಟುಕುವಿಕೆಯಿಂದಲೇ ಜಗತ್‌ಪ್ರಸಿದ್ಧಿ ಪಡೆದಿದೆ. ಅದರ ಬಾಲದ ತುದಿಯಲ್ಲಿರುವ ಮೊನಚು ಕೊಂಡಿಯಿಂದ ಚುಚ್ಚಿದರೆ ಪ್ರಾಣಾಂತಿಕವಲ್ಲದಿದ್ದರೂ ಸಾಕಷ್ಟು ನೋವು, ಉರಿ ಅನುಭವಿಸಬೇಕಾಗುತ್ತದೆ. ಧ್ರುವಪ್ರದೇಶದ ಹೊರತು ಮರುಭೂಮಿಯೂ ಸೇರಿದಂತೆ ಜಗತ್ತಿನ ಎಲ್ಲೆಡೆಯೂ ಚೇಳನ್ನು ಕಾಣಬಹುದು. ಬ್ರೆಜಿಲಿನ ಕಾಡುಗಳು, ಉತ್ತರ ಕೆರೊಲಿನಾ, ಹಿಮಾಲಯಗಳಲ್ಲಿ ಅದರ ಸಂತತಿ ಅಧಿಕವಾಗಿದೆ. ಸೊನ್ನೆ ಡಿಗ್ರಿ ಶೈತ್ಯಾಂಶದಲ್ಲಿ ಬದುಕಿರಬಲ್ಲ ಚೇಳು 68ರಿಂದ 99 ಡಿಗ್ರಿ ಫ್ಯಾರನ್‌ಹೀಟ್‌ ಉಷ್ಣಾಂಶದಲ್ಲೂ ಸಾಯುವುದಿಲ್ಲ. ಹೀಗಾಗಿಯೇ ನಮ್ಮ ಗುಲ್ಬರ್ಗ, ರಾಯಚೂರುಗಳ ಕಡೆ ಚೇಳುಗಳಿವೆ. ನೀವು, ಎರಡು ದಿನಗಳ ವರೆಗೆ ನೀರಿನಲ್ಲಿ ಮುಳುಗಿಸಿಟ್ಟರೂ ಈ ಚೇಳುಗಳು ಬದುಕಿರುತ್ತವೆ. ಅತ್ಯಂತ ಕಡಿಮೆ ಆಮ್ಲಜನಕ ಬಳಸುವ ಗುಣ ಇರುವುದರಿಂದ ಮಣ್ಣಿನೊಳಗೆಯೂ ಚೇಳು ಬದುಕಬಲ್ಲದು.

ಆಹಾರ ಇಲ್ಲದೆಯೂ ಬದುಕುತ್ತೆ
ಒಂದು ವರ್ಷ ಆಹಾರ ಇಲ್ಲದಿದ್ದರೂ ಚೇಳು ಹಸಿವಿನಿಂದ ಸಾಯುವುದೇ ಇಲ್ಲ. ಅದರ ಗರಿಷ್ಠ ಜೀವಿತ ಅವಧಿ 25ರಿಂದ 38 ವರ್ಷಗಳು. ಬಿಲಗಳು, ಕಲ್ಲುಗಳ ಸಂದಿ, ಸಡಿಲಾದ ಮಣ್ಣು, ಹುಲ್ಲು ಇರುವ ಜಾಗ ಚೇಳಿನ ಪ್ರಿಯವಾದ ವಾಸಸ್ಥಳ. ರಾತ್ರಿ ಸಂಚಾರ ಅದಕ್ಕೆ ಇಷ್ಟ. ಚೇಳಿಗೆ ಪ್ರತಿದೀಪಕ ಶಕ್ತಿಯಿರುವುದರಿಂದ ರಾತ್ರಿ ಅದರ ಮೇಲೆ ಬೆಳಕು ಹರಿಸಿದರೆ ಕಪ್ಪಗಿರುವ ಚೇಳಿನ ಬಣ್ಣ ಬದಲಾಗುತ್ತದೆ. 6 ಸೆಂ.ಮೀ.ಯಿಂದ ಆರಂಭಿಸಿ 20 ಸೆ. ಮೀ.ವರೆಗೆ ಗಾತ್ರವಿರುವ ಚೇಳುಗಳಲ್ಲಿ ಹಲವು ಜಾತಿಗಳಿವೆ. ಪ್ರಮುಖವಾಗಿ 13 ಕುಟುಂಬಗಳನ್ನು ಗುರುತಿಸಲಾಗಿದೆ. ಸಮುದ್ರ ಚೇಳು 8 ಅಡಿ ಉದ್ದವಿರುತ್ತದೆ.

ಬಾಲದಲ್ಲಿ ವಿಷ
ಹುಳಗಳು, ಕೀಟಗಳು, ಇಲಿ-ಹೆಗ್ಗಣಗಳು, ಹಕ್ಕಿಗಳು, ಹಲ್ಲಿಗಳು ಅದರ ಆಹಾರ. ಮುಂಭಾಗದಲ್ಲಿರುವ ಇಕ್ಕಳದಂತಹ ಕೊಂಬುಗಳಿಂದ ಬೇಟೆಯನ್ನು ಹಿಡಿದು ಬಾಲದಲ್ಲಿರುವ ಕೊಂಡಿಯಿಂದ ಚುಚ್ಚುತ್ತದೆ. ಕೊಂಡಿಯಲ್ಲಿ ನ್ಯೂರೋಟಾಕ್ಸಿನ್‌ ಎಂಬ ವಿಷವಿದೆ. ಅದು ಎದುರಾಳಿಯ ದೇಹ ಸೇರಿದಾಗ ಅದನ್ನು ನಿಷ್ಕ್ರಿಯಗೊಳಿಸುತ್ತದೆ. ಬಳಿಕ ಕೊಂಬುಗಳಲ್ಲಿರುವ ಅರದಂತಹ ಹಲ್ಲುಗಳಿಂದ ಅರೆದು ಬೇಟೆಯ ದೇಹದ ರಸವನ್ನು ಮಾತ್ರ ಸೇವಿಸಿ ಎಲುಬು, ಚರ್ಮಗಳನ್ನು ಬಿಸುಡುತ್ತದೆ. ಒಮ್ಮೆ ಹೊಟ್ಟೆ ತುಂಬಿದರೆ ಒಂದು ವರ್ಷವಾದರೂ ಹಸಿವಿನ ಭಯವಿಲ್ಲ.

ಡ್ಯಾನ್ಸು ಮಾಡುತ್ತೆ
ಗಂಡು ಚೇಳು ಹೆಣ್ಣನ್ನು ಒಲಿಸಿಕೊಳ್ಳಲು ಅದರ ಮುಂದೆ ತನ್ನದೇ ಶೈಲಿಯಲ್ಲಿ ವಿಶಿಷ್ಟವಾಗಿ ನರ್ತಿಸುತ್ತದೆ. ಚೇಳಿನ ಮೊಟ್ಟೆಗಳು ಒಡೆದು ಮರಿಗಳಾದ ಕೂಡಲೇ ತಾಯಿ ಚೇಳಿನ ಮೈಮೇಲೇರಿಕೊಂಡು ಅದರ ಜೊತೆಗೆ ಸಾಗುತ್ತವೆ. ಇದರಿಂದಾಗಿ ಚೇಳಿನ ಬೆನ್ನನ್ನು ಒಡೆದು ಮರಿಗಳು ಹೊರಗೆ ಬರುತ್ತವೆಂಬ ತಪ್ಪು ಕಲ್ಪನೆಯೂ ಇದೆ. ಚೇಳಿನ ಕಣ್ಣು ಅದರ ಬೆನ್ನಿನ ಮೇಲಿರುತ್ತದೆ. ಮನುಷ್ಯನಿಗೆ ಸಾವು ತರುವಷ್ಟು ಪ್ರಮಾಣದ ವಿಷ ಚೇಳಿನಲ್ಲಿ ಇಲ್ಲ. ಐವತ್ತು ಚೇಳುಗಳ ವಿಷ ಒಟ್ಟಾದರೆ ಮಾತ್ರ ಪ್ರಾಣಾಂತಿಕವಾಗಬಹುದು.

ತಿಂಡಿ ತಯಾರಿಕೆ
ಪ್ರೈಡ್‌ ಜಾತಿಯ ಚೇಳುಗಳನ್ನು ಚೀನೀಯರು ಖಾದ್ಯ ತಯಾರಿಸಿ ತಿನ್ನುತ್ತಾರೆ. ಅದರಿಂದ ವೈನ್‌ ತಯಾರಿಸುತ್ತಾರೆ. ಚೇಳಿನ ಅಂಗಾಂಶಗಳಿಂದ ಕ್ಯಾನ್ಸರ್‌, ಮಲೇರಿಯಾ, ಸಂಧಿವಾತಗಳಿಗೆ ಪರಿಣಾಮಕಾರಿ ಔಷಧಿ ಕಂಡುಹಿಡಿಯುವಲ್ಲಿ ವಿಜ್ಞಾನಿಗಳು ಮಹತ್ವದ ಹಂತ ತಲುಪಿದ್ದಾರೆ. ಚೇಳು ಅಂದರೆ ಭಯವೂ ಇದೆ. ಚೇಳಿನಿಂದ ಅಭಯವೂ ಇದೆ.

– ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

1

ಕೆಲಸವಿಲ್ಲದೆ ಮಾನಸಿಕ ಒತ್ತಡ: 33ರ ಹರೆಯದಲ್ಲೇ ನೇಣಿಗೆ ಶರಣಾದ ಖ್ಯಾತ ಕಾರ್ಯಾಕಾರಿ ನಿರ್ಮಾಪಕಿ

2-agumbe

Agumbe: ಕಾಣೆಯಾಗಿದ್ದ ಯುವತಿ ಶವವಾಗಿ ಪತ್ತೆ; ಕೊಲೆ ಆರೋಪಿ ಬಂಧನ

Devadurga; ಬೆಳ್ಳಂಬೆಳಗ್ಗೆ ಮೂವರ ಮೇಲೆ ಚಿರತೆ ದಾಳಿ

Devadurga; ಬೆಳ್ಳಂಬೆಳಗ್ಗೆ ಮೂವರ ಮೇಲೆ ಚಿರತೆ ದಾಳಿ

ಮಕ್ಕಳೇ ದೇವರು ಎಂದ ಸ್ಕೂಲ್‌ ಮಾಸ್ಟರ್‌: ಒಂದು ಶಾಲೆ, ಒಬ್ಬರೇ ಶಿಕ್ಷಕ,  29 ವರ್ಷ ಸೇವೆ!

ಮಕ್ಕಳೇ ದೇವರು ಎಂದ ಸ್ಕೂಲ್‌ ಮಾಸ್ಟರ್‌: ಒಂದು ಶಾಲೆ, ಒಬ್ಬರೇ ಶಿಕ್ಷಕ,  29 ವರ್ಷ ಸೇವೆ!

ಸಹನೆ ವಜ್ರದ ಕವಚ: ಅನುಮಾನ, ಅಪಮಾನ, ಸನ್ಮಾನ!

ಸಹನೆ ವಜ್ರದ ಕವಚ: ಅನುಮಾನ, ಅಪಮಾನ, ಸನ್ಮಾನ!

Bhadra Dam; the water leaking from the river sleeves gate stopped

Bhadra Dam; ಕೊನೆಗೂ ನಿಂತಿತು ರಿವರ್ ಸ್ಲೀವ್ಸ್ ಗೇಟ್ ನಿಂದ ಸೋರಿಕೆಯಾಗುತ್ತಿದ್ದ ನೀರು

Electric shock: ಮೊಬೈಲ್‌ ಚಾರ್ಜ್‌ಗೆ ಹಾಕುವಾಗ ವಿದ್ಯುತ್‌ ಶಾಕ್‌; ವಿದ್ಯಾರ್ಥಿ ಬಲಿ!

Electric shock: ಮೊಬೈಲ್‌ ಚಾರ್ಜ್‌ಗೆ ಹಾಕುವಾಗ ವಿದ್ಯುತ್‌ ಶಾಕ್‌; ವಿದ್ಯಾರ್ಥಿ ಬಲಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಲಾವಿದರು ಹಾದಿ ತಪ್ಪಲು ಪ್ರೇಕ್ಷಕ ವರ್ಗವೂ ಕಾರಣ: ಕೆ.ಎಚ್‌.ದಾಸಪ್ಪ ರೈ

ಕಲಾವಿದರು ಹಾದಿ ತಪ್ಪಲು ಪ್ರೇಕ್ಷಕ ವರ್ಗವೂ ಕಾರಣ: ಕೆ.ಎಚ್‌.ದಾಸಪ್ಪ ರೈ

Sitharama tholpadi

Yakshagana: ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣ ಪ್ರಶಸ್ತಿ ಗೌರವ

Gayana

Music Programme: ಸಂಗೀತ ರಸಿಕರನ್ನು ರಂಜಿಸಿದ ಮಳೆಗಾಲದ ರಾಗಗಳ ಗಾಯನ

France-Assmbly

France Election: ಫ್ರಾನ್ಸ್‌ನಲ್ಲೂ ಬದಲಾವಣೆ ಗಾಳಿ!

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

1

ಕೆಲಸವಿಲ್ಲದೆ ಮಾನಸಿಕ ಒತ್ತಡ: 33ರ ಹರೆಯದಲ್ಲೇ ನೇಣಿಗೆ ಶರಣಾದ ಖ್ಯಾತ ಕಾರ್ಯಾಕಾರಿ ನಿರ್ಮಾಪಕಿ

3-honnavar

Honnavar: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಬಂಡೆ ಸಮೇತ ಗುಡ್ಡ ಕುಸಿತ

2-agumbe

Agumbe: ಕಾಣೆಯಾಗಿದ್ದ ಯುವತಿ ಶವವಾಗಿ ಪತ್ತೆ; ಕೊಲೆ ಆರೋಪಿ ಬಂಧನ

Devadurga; ಬೆಳ್ಳಂಬೆಳಗ್ಗೆ ಮೂವರ ಮೇಲೆ ಚಿರತೆ ದಾಳಿ

Devadurga; ಬೆಳ್ಳಂಬೆಳಗ್ಗೆ ಮೂವರ ಮೇಲೆ ಚಿರತೆ ದಾಳಿ

ಮಕ್ಕಳೇ ದೇವರು ಎಂದ ಸ್ಕೂಲ್‌ ಮಾಸ್ಟರ್‌: ಒಂದು ಶಾಲೆ, ಒಬ್ಬರೇ ಶಿಕ್ಷಕ,  29 ವರ್ಷ ಸೇವೆ!

ಮಕ್ಕಳೇ ದೇವರು ಎಂದ ಸ್ಕೂಲ್‌ ಮಾಸ್ಟರ್‌: ಒಂದು ಶಾಲೆ, ಒಬ್ಬರೇ ಶಿಕ್ಷಕ,  29 ವರ್ಷ ಸೇವೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.