ಮುಂಗಾರು ಹಂಗಾಮಿನ ಭತ್ತದ ಬೆಳೆ ವಿಮೆ ಕಂತು ಪಾವತಿಗೆ ಆ.16 ಕೊನೆ ದಿನ
Team Udayavani, Jul 11, 2023, 6:30 AM IST
ಬೆಳ್ತಂಗಡಿ: ಭತ್ತದ ಕೃಷಿಗೆ ಸಂಬಂಧಿಸಿದಂತೆ, 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮಾ ಯೋಜನೆಯಡಿ ಗ್ರಾ.ಪಂ. ಮಟ್ಟಕ್ಕೆ ಒಳಗೊಂಡ ಬೆಳೆಗಳು, ಹೆಕ್ಟೇರುವಾರು ಗರಿಷ್ಟ ವಿಮೆ ಮಾಡಬಹುದಾದ ಮೊತ್ತ, ವಿಮಾ ಕಂತಿನ ಮೊತ್ತ, ಪ್ರಸ್ತಾವನೆ ಸಲ್ಲಿಸುವ ವಿಧಿವಿಧಾನಗಳ ಬಗ್ಗೆ ಸರಕಾರ ಅಧಿಸೂಚನೆ ಹೊರಡಿಸಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭತ್ತ (ಮಾಳೆಯಾಶ್ರಿತ) ಬೆಳೆಗೆ ಮಾತ್ರ ಬೆಳೆ ವಿಮೆ ಮಾಡಬಹುದಾಗಿದ್ದು ಉಳಿದಂತೆ ಇತರ ಯಾವುದೇ ಬೆಳೆಗಳಿಗೆ ಕಾರ್ಯಕ್ಷೇತ್ರದಲ್ಲಿ ವಿಮೆ ಮಾಡುವಂತಿಲ್ಲ. ಬೆಳೆ ಸಾಲ ಮಂಜೂರಾದ ಎಲ್ಲ ರೈತರನ್ನು ವಿಮಾ ಯೋಜನೆಯು ಕಡ್ಡಾಯವಾಗಿರುತ್ತದೆ ಹಾಗೂ ರೈತರು ವಿಮಾ ಯೋಜನೆ ದಾಖಲಾತಿಗೆ ಕಡ್ಡಾಯವಾಗಿ ಫ್ರೂಟ್ಸ್ ಐಡಿ (ಎಫ್‌ಐಡಿ) ಹೊಂದಿರಬೇಕಾಗಿದೆ.
ಸಾಲಗಾರ ರೈತರು ಬೆಳೆ ವಿಮೆ ಯೋಜನೆಯಲ್ಲಿ ಭಾಗವಹಿಸಲು ಇಚ್ಚೆ ಪಡದೆ ಇದ್ದಲ್ಲಿ ಅಂತಹ ರೈತರು ನಿಗದಿಪಡಿಸಿದ ಮಾದರಿ ನಮೂನೆಯಲ್ಲಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ಸಲ್ಲಿಸಬೇಕು ಮತ್ತು ಬೆಳೆ ವಿಮೆ ಯೋಜನೆಯಿಂದ ಕೈ ಬಿಡಬಹುದಾಗಿರುತ್ತದೆ. ಬೆಳೆ ಸಾಲ ಪಡೆಯದಿರುವ ರೈತರು ಬೆಳೆ ವಿಮೆ ಮಾಡುವುದಿದ್ದಲ್ಲಿ ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಬೆಳೆ ವಿಮೆ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣೆ, ಖಾತೆ, ಪಾಸ್ ಪುಸ್ತಕ, ಕಂದಾಯ ರಶೀದಿಯನ್ನು ನೀಡಿ ಪೂರ್ಣ ವಿಮಾ ಮೊತ್ತವನ್ನು ಪಾವತಿಸುವುದು.
ಬೆಳೆ ಬೆಳೆಸದೆ ಇರುವವರು ಬೆಳೆ ವಿಮೆಗೆ ಅರ್ಹರಲ್ಲವೆಂಬುದನ್ನು ಹಾಗೂ ಈ ಯೋಜನೆಯನ್ನು ದುರುಪಯೋಗಪಡಿಸಲು ಅವಕಾಶ ನೀಡಕೂಡದು. ಸಾಲಗಾರರು ಮತ್ತು ಸಾಲಗಾರರಲ್ಲದ ರೈತರ ವಿಮಾ ಕಂತಿನಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ರೈತರು ಬೆಳೆ ವಿಮೆ ಪ್ರಸ್ತಾವನೆ ಸಲ್ಲಿಸಲು ಅಂತಿಮ ಗಡುವು ಆಗಸ್ಟ್ 16 ರ ವರೆಗೆ ನಿಗದಿಯಾಗಿದೆ. ಭತ್ತ (ಮಳೆ ಆಶ್ರಿತ) ವಿಮಾ ಮೊತ್ತ 63,750 ರೂ. ಆಗಿದ್ದು ರೈತರು ಒಂದು ಎಕ್ರೆಗೆ 516 ರೂ. ವಿಮಾ ಕಂತು ಪಾವತಿಸಬೇಕಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.