![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 11, 2023, 7:10 AM IST
ಉಡುಪಿ: ಪರ್ಕಳದಿಂದ ಮಣಿಪಾಲ ಕಡೆಗೆ ಬರುತ್ತಿದ್ದ ಕಾರೊಂದು ಅಡ್ಡಾದಿಡ್ಡಿ ಚಲಿಸಿ ಇತರ ವಾಹನಗಳಿಗೆ ಢಿಕ್ಕಿ ಹೊಡೆಸಿ ಹಾನಿಗೈದ ಘಟನೆ ಮಣಿಪಾಲದಲ್ಲಿ ಸೋಮವಾರ ಸಂಜೆ ಕೆಲಕಾಲ ಆತಂಕ ಮೂಡಿಸಿತು.
ಕಾರು ಪರ್ಕಳ ಕಡೆಯಿಂದ ಮಣಿಪಾಲಕ್ಕೆ ಬರುವಾಗ ಕೆಎಂಸಿ ಆಸ್ಪತ್ರೆ ನಿಲ್ದಾಣ ಸಮೀಪ ಬಸ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಆಬಳಿಕ ಹಿಂದಕ್ಕೆ ರಿವರ್ಸ್ ತೆಗೆಯುವಾಗ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರರಿಗೆ ತರಚಿದ ಗಾಯವಾಗಿದೆ.
ಪರ್ಕಳದಿಂದ ಬರುವಾಗಲೆ ಅಡ್ಡಾದಿಡ್ಡಿ ಸಂಚರಿಸಿದ್ದ ಕಾರು ಕೆಲವು ವಾಹನಗಳಿಗೆ ಢಿಕ್ಕಿ ಹೊಡೆಸಿ ಹಾನಿಗೊಳಿಸಿದೆ ಎನ್ನಲಾಗಿದೆ. ಮಣಿಪಾಲದಲ್ಲಿ ಯುಟರ್ನ್ ಮಾಡಿಕೊಂಡು ಪರ್ಕಳ ಕಡೆಗೆ ಪರಾರಿಯಾಗುತ್ತಿದ್ದವರನ್ನು ಪೊಲೀಸರು ಬೆನ್ನಟ್ಟಿದ್ದಾರೆ. ಪರ್ಕಳ ಸಮೀಪ ಕಾರು ನಿಲ್ಲಿಸಿದ ಮೂವರು ಅಪರಿಚಿತರು ಸಮೀಪದ ಕಾಡಿನೊಳಗೆ ನುಗ್ಗಿ ಪರಾರಿಯಾಗಿದ್ದಾರೆ. ಸ್ಥಳೀಯರು, ಪೊಲೀಸರು ಹುಡುಕಾಟ ನಡೆಸಿದರೂ ಪರಿಸರದಲ್ಲಿ ಯಾವುದೆ ಸುಳಿವು ಸಿಕ್ಕಿಲ್ಲ. ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಗಾಂಜಾ ಸೇವನೆ ಶಂಕೆ ?
ಕಾರನ್ನು ವಶಕ್ಕೆ ತೆಗೆದುಕೊಂಡ ಮಣಿಪಾಲ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಕಾರಿನೊಳಗೆ ಮೂವರು ಇದ್ದರು ಎನ್ನಲಾಗಿದೆ. ಕಾರಿನೊಳಗೆ ಮದ್ಯವ್ಯಸನದ ಕುರುಹು ಕಂಡುಬಂದಿದ್ದು, ಕಾರಿನ ದಾಖಲೆ ಕೊಡವೂರು ಮೂಲದ ವ್ಯಕ್ತಿಯ ಹೆಸರಿನಲ್ಲಿದೆ. ಈ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳು ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ಈ ಕೃತ್ಯ ಎಸಗಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದೆ.
You seem to have an Ad Blocker on.
To continue reading, please turn it off or whitelist Udayavani.