LGM: ನನ್ನ CSK ತಂಡಕ್ಕೆ ಸೇರಿಸಿಕೊಳ್ಳಿ; ಯೋಗಿ ಬಾಬು ಮಾತಿಗೆ ಧೋನಿ ಕೊಟ್ಟ ರಿಪ್ಲೈ ವೈರಲ್
Team Udayavani, Jul 11, 2023, 10:46 AM IST
ಚೆನ್ನೈ: ಮಹೇಂದ್ರ ಸಿಂಗ್ ಈಗ ಕ್ರಿಕೆಟಿಗ ಮಾತ್ರವಲ್ಲದೆ ಸಿನಿಮಾ ನಿರ್ಮಾಪಕರೂ ಆಗಿದ್ದಾರೆ. ಧೋನಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಸಿನಿಮಾ ರೆಡಿ ಆಗಿರುವುದು ಗೊತ್ತೇ ಇದೆ. ಇದೀಗ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.
ಟೀಮ್ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ಕಪ್ತಾನ ಮಹೇಂದ್ರ ಧೋನಿ “ಧೋನಿ ಎಂಟರ್ಟೈನ್ಮೆಂಟ್” ಬ್ಯಾನರ್ ಅಡಿಯಲ್ಲಿ “ಎಲ್ ಜಿಎಂ” ( ಲೆಟ್ಸ್ ಗೆಟ್ ಮ್ಯಾರೇಡ್) ಸಿನಿಮಾದ ಟ್ರೇಲರ್ ಹಾಗೂ ಆಡಿಯೋ ಲಾಂಚ್ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ಧೋನಿ ದಂಪತಿ ಹಾಗೂ ಕಲಾವಿದರು ಭಾಗಿಯಾಗಿದ್ದರು.
ಚೆನ್ನೈನ ಲೀಲಾ ಪ್ಯಾಲೇಸ್‌ನಲ್ಲಿ ‘ಎಲ್‌ಜಿಎಂ’ ಚಿತ್ರದ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ವೇಳೆ ಸಿನಿಮಾದಲ್ಲಿ ನಟಿಸಿರುವ ಕಾಲಿವುಡ್ ನ ಖ್ಯಾತ ಹಾಸ್ಯನಟ ಯೋಗಿ ಬಾಬು ಅವರು ಧೋನಿ ಅವರ ಬಳಿ ಕೇಳಿರುವ ಒಂದು ಮಾತಿಗೆ ಧೋನಿ ಕೊಟ್ಟ ಉತ್ತರ ವೈರಲ್ ಆಗಿದೆ.
ಇದನ್ನೂ ಓದಿ: Ajith Kumar: “ಅಜಿತ್ ನನಗೆ ಮೋಸ ಮಾಡಿದ್ದಾರೆ..” ಥಲಾ ವಿರುದ್ಧ ಗುಡುಗಿದ ನಿರ್ಮಾಪಕ
“ಧೋನಿ ಅವರೇ ನನ್ನನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನೇಮಿಸಿಕೊಳ್ಳಿ” ಎಂದಿದ್ದಾರೆ.
“ಅಂಬಾಟಿ ರಾಯುಡು ನಿವೃತ್ತರಾಗಿದ್ದಾರೆ. ಆದ್ದರಿಂದ ನಿಮಗೆ ಸಿಎಸ್‌ಕೆಯಲ್ಲಿ ಸ್ಥಾನವಿದೆ. ನಾನು ಮ್ಯಾನೇಜ್‌ಮೆಂಟ್‌ನೊಂದಿಗೆ ಮಾತನಾಡುತ್ತೇನೆ. ಆದರೆ, ನೀವು ಚಲನಚಿತ್ರಗಳಲ್ಲಿ ತುಂಬಾ ಬ್ಯುಸಿಯಾಗಿದ್ದೀರಿ. ನೀವು ನಿರಂತರವಾಗಿ ಆಡಬೇಕು. ಅವರು ತುಂಬಾ ವೇಗವಾಗಿ ಬೌಲ್ ಮಾಡುತ್ತಾರೆ ಮತ್ತು ಅವರು ನಿಮ್ಮನ್ನು ಗಾಯಗೊಳಿಸಲು ಬೌಲ್ ಮಾಡುತ್ತಾರೆ.” ಎಂದು ತಮಾಷೆಯಾಗಿ ಉತ್ತರ ನೀಡಿದ್ದಾರೆ.
‘ಲೆಟ್ಸ್ ಗೆಟ್ ಮ್ಯಾರೀಡ್’ (‘ಎಲ್‌ಜಿಎಂ’) ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಹರೀಶ್ ಕಲ್ಯಾಣ್ ಮತ್ತು ಇವಾನಾ ,ನದಿಯಾ ತಾಯಿಯ ಯೋಗಿ ಬಾಬು ಮತ್ತು ಮಿರ್ಚಿ ವಿಜಯ್ ಮುಂತಾದ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾವನ್ನು ರಮೇಶ್ ತಮಿಳ್ಮನಿ ನಿರ್ದೇಶನ ಮಾಡಿದ್ದಾರೆ.
ಟ್ರೇಲರ್ ಗಮನ ಸೆಳೆಯುತ್ತಿದ್ದು ವರ್ಷದ ಕೊನೆಯಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್’
Aishwarya Rai Bachchan ಬರ್ತ್‌ಡೇಗೆ ಶುಭಕೋರದ ಪತಿ, ಮಾವ: ನೆಟ್ಟಿಗರು ಕೆಂಡ!
MUST WATCH
ಹೊಸ ಸೇರ್ಪಡೆ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.