Online Fraud: ಸಮೋಸಾ ಆರ್ಡರ್ ಮಾಡಿ 1.40 ಲಕ್ಷ ರೂ ಕಳೆದುಕೊಂಡ ವೈದ್ಯ! ಆಗಿದ್ದೇನು?
Team Udayavani, Jul 11, 2023, 3:51 PM IST
ಮುಂಬೈ: ಪ್ರಸಿದ್ದ ಉಪಹಾರ ಗೃಹದಿಂದ 25 ಸಮೋಸಗಳನ್ನು ಆರ್ಡರ್ ಮಾಡಿದ ವೈದ್ಯನೊಬ್ಬ 1.40 ಲಕ್ಷ ರೂ. ಗಳನ್ನು ಕಳೆದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.
ಈ ಘಟನೆ ಶನಿವಾರ ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ವಂಚನೆಗೊಳಗಾದ ವೈದ್ಯ ಮತ್ತು ಅವರ ಸಹೋದ್ಯೋಗಿಗಳು ಕರ್ಜಾತ್ ನಲ್ಲಿ ಪಿಕ್ನಿಕ್ ಅನ್ನು ಯೋಜಿಸಿದ್ದರು. ಹೀಗಾಗಿ ಪ್ರಯಾಣಕ್ಕಾಗಿ ಸಮೋಸಾಗಳನ್ನು ಆರ್ಡರ್ ಮಾಡಿದ್ದರು. ಅವರು ಆನ್ ಲೈನ್ ನಲ್ಲಿ ಉಪಾಹಾರ ಗೃಹದ ದೂರವಾಣಿ ಸಂಖ್ಯೆಯನ್ನು ಹುಡುಕಿ ನಂತರ ಆರ್ಡರ್ ಮಾಡಿದರು. ಅವರು ಸಂಖ್ಯೆಗೆ ಕರೆ ಮಾಡಿದಾಗ, ಉತ್ತರಿಸಿದವರು ಮುಂಗಡವಾಗಿ 1,500 ರೂ ಪಾವತಿಸಲು ಹೇಳಿದರು” ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ:Genie; ಜಯಂ ರವಿ ಜೊತೆಯಾದ ಕೃತಿ ಶೆಟ್ಟಿ
ಈ ವೇಳೆ ಆರ್ಡರ್ ದೃಢೀಕರಣ ಮಾಡಲು ಮತ್ತು ಹಣವನ್ನು ಆನ್ ಲೈನ್ ಕಳುಹಿಸಲು ಬ್ಯಾಂಕ್ ಖಾತೆ ನಂಬರ್ ನಮೂದಿಸುವಂತೆ ಡಾಕ್ಟರ್ ಗೆ ವಾಟ್ಸಪ್ ಮೆಸೇಜ್ ಒಂದು ಬಂತು. ಡಾಕ್ಟರ್ 1500 ರೂ ಕಳುಹಿಸಿದರು. ಆದರೆ ವಂಚಕ ವ್ಯಕ್ತಿಯು ಪಾವತಿಗಾಗಿ ವೈದ್ಯರು ವಹಿವಾಟು ಐಡಿಯನ್ನು ರಚಿಸಬೇಕು ಎಂದು ಹೇಳಿದರು. ಒಂದನ್ನು ರಚಿಸಲು ಸೂಚನೆಗಳನ್ನು ಅನುಸರಿಸುವಾಗ, ಅವರು ಮೊದಲು 28,807 ಮತ್ತು ಒಟ್ಟು 1.40 ಲಕ್ಷ ರೂ. ಗಳನ್ನು ಕಳೆದುಕೊಂಡರು” ಎಂದು ಪೊಲೀಸರು ಮಾಹಿತಿ ನೀಡಿದರು.
ವೈದ್ಯ ನೀಡಿದ ದೂರಿನಂತೆ ಬೋಯಿವಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್!
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.