ಹೊಸಪೇಟೆ: ಲಂಬಾಣಿ ಕಸೂತಿಗೆ ಗಿನ್ನಿಸ್‌ ದಾಖಲೆ ಮೆರುಗು- ಪ್ರಧಾನಿ ಮೋದಿ ಮೆಚ್ಚುಗೆ

ಅಪರೂಪದ ಕ್ಷಣಕ್ಕೆ ಹಂಪಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆ ಸಾಕ್ಷಿಯಾಗಿದೆ.

Team Udayavani, Jul 11, 2023, 4:30 PM IST

ಹೊಸಪೇಟೆ: ಲಂಬಾಣಿ ಕಸೂತಿಗೆ ಗಿನ್ನಿಸ್‌ ದಾಖಲೆ ಮೆರುಗು- ಪ್ರಧಾನಿ ಮೋದಿ ಮೆಚ್ಚುಗೆ

ಹೊಸಪೇಟೆ: ವಿವಿಧ ಬಣ್ಣದ ಹಲವು ಸಣ್ಣ ತುಣುಕುಗಳನ್ನು ದಾರದಿಂದ ಹೊಲಿದು ಜೋಡಿಸಿ, ಅದರ ಮೇಲೆ ಕಸೂತಿ ಮಾಡುವ ಲಂಬಾಣಿ ಮಹಿಳೆಯರ ಕಲೆ, ಶ್ರಮ ಸಂಸ್ಕೃತಿಯ ಪ್ರತೀಕ. ಆದಿ ಕಾಲದ ಮಾನವನ ಸುಪ್ತ ಪ್ರಜ್ಞೆಯಲ್ಲಿ ಅರಳಿದ ಕಲೆಗಳು ಇಂದು ತಂತ್ರಜ್ಞಾನದ ಅತ್ಯುನ್ನತ ಮಟ್ಟ ತಲುಪಿವೆ.

ತಾಂತ್ರಿಕ ಕಾಲಘಟ್ಟದಲ್ಲೂ ಲಂಬಾಣಿ ಮಹಿಳೆಯರು ಉಳಿಸಿ ಬೆಳೆಸಿಕೊಂಡು ಬಂದ ಕಸೂತಿ ಕಲೆ ಗಿನ್ನಿಸ್‌ ಬುಕ್‌ ಆಫ್‌ ರೆಕಾರ್ಡ್‌ ಸೇರಿದ ಅಪರೂಪದ ಕ್ಷಣಕ್ಕೆ ಹಂಪಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆ ಸಾಕ್ಷಿಯಾಗಿದೆ.

ಸೋಮವಾರ ವಿಶ್ವವಿಖ್ಯಾತ ಹಂಪಿಯ ಎದುರು ಬಸವಣ್ಣ ಮಂಟಪದ ಬಳಿ ಲಂಡನ್‌ ಗಿನ್ನಿಸ್‌ ಬುಕ್‌ ಆಫ್‌ ರೆಕಾರ್ಡ್‌ನ ಅಧಿಕೃತ ತೀರ್ಪುಗಾರ ರಿಷಿನಾಥ್‌, ಲಂಬಾಣಿ ಕಸೂತಿ ಕಲೆಗೆ ಸಂದ ಗಿನ್ನಿಸ್‌ ರೆಕಾರ್ಡ್‌ ಪ್ರಮಾಣ ಪತ್ರವನ್ನು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ ಮೋಹನ್‌ ಅವರಿಗೆ ಹಸ್ತಾಂತರಿಸಿದರು.

ಸಂಡೂರಿನ ಲಂಬಾಣಿ ಕಲಾ ಕೇಂದ್ರದ 450ಕ್ಕೂ ಹೆಚ್ಚು ಮಹಿಳೆಯರು 1755 ವಿವಿಧ ರಚನಾ ಕ್ರಮವುಳ್ಳ ಹಸ್ತದಿಂದ ರಚಿಸಿದ ಕಸೂತಿಗಳನ್ನು ಪ್ರದರ್ಶನಕ್ಕೆ ಇರಿಸಿದ್ದರು. ಈ ಹಿಂದಿನ ಗಿನ್ನೆಸ್‌ ದಾಖಲೆಯಲ್ಲಿ 1000 ಕಸೂತಿ ಕಲೆಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು.

ಲಂಬಾಣಿ ಕಸೂತಿಗೆ ಜಿಐ ಟ್ಯಾಗ್‌: 1988ರಲ್ಲಿ ಸಂಡೂರಿನಲ್ಲಿ ಕೇವಲ 5 ಲಂಬಾಣಿ ಮಹಿಳೆಯರಿಂದ ಆರಂಭವಾದ ಲಂಬಾಣಿ ಕುಶಲ ಕಲಾ ಕೇಂದ್ರ 600 ಕುಶಲ ಕಸೂತಿ ಕಲೆ ಕಲಿತ ಮಹಿಳೆಯರಿಂದ ನಡೆಸಲ್ಪಡುತ್ತಿದೆ. ಪಾರಂಪರಿಕವಾಗಿ ಮನೆಗಳು ಹಾಗೂ
ತಾಂಡಗಳಿಗೆ ಸೀಮಿತವಾಗಿದ್ದ ಲಂಬಾಣಿ ಕಸೂತಿ ಕಲೆಗೆ ಸಾಂಸ್ಥಿಕ ರೂಪ ನೀಡಿ ಜಿಐ (ಗ್ಲೋಬಲ್‌ ಇಂಡಿಕೇಷನ್‌) ಟ್ಯಾಗ್‌ ಪಡೆಯುವಲ್ಲಿ ಸಂಡೂರಿನ ಕಲಾ ಕೇಂದ್ರ ಯಶಸ್ವಿಯಾಗಿದೆ. ವಿವಿಧ ರೀತಿಯ 29 ಕಲಾತ್ಮಕ ಕಸೂತಿಗಳನ್ನು ಇಲ್ಲಿ ಮಾಡಲಾಗುತ್ತಿದೆ. ಈ ಕೇಂದ್ರಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ, ಯುನೆಸ್ಕೋ ಮನ್ನಣೆ ಹಾಗೂ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಲಭಿಸಿದೆ. ಈಗ ಹಂಪಿಯಲ್ಲಿ ಜಿ20 ಶೃಂಗ ಸಭೆಯಲ್ಲಿ ಗಿನ್ನಿಸ್‌ ದಾಖಲೆಯೂ ಮುಡಿಗೇರಿದೆ.

ಪ್ರಧಾನಿ ಮೋದಿ ಮೆಚ್ಚುಗೆ
ಲಂಬಾಣಿ ಕಸೂತಿ ಗಿನ್ನಿಸ್‌ ದಾಖಲೆ ಸೇರಿದ್ದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ಶ್ಲಾಘನೀಯ ಪ್ರಯತ್ನ. ಇದು ಲಂಬಾಣಿ ಕಲೆ ಮತ್ತು ಕರಕುಶಲತೆಯನ್ನು ಜನಪ್ರಿಯಗೊಳಿಸುತ್ತದೆ. ಸಾಂಸ್ಕೃತಿಕ ಉಪಕ್ರಮಗಳಲ್ಲಿ ನಾರಿ ಶಕ್ತಿಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ’ ಎಂದು ಕನ್ನಡದಲ್ಲಿ ಟ್ವೀಟ್‌ ಮಾಡಿ
ಅಭಿನಂದಿಸಿದ್ದಾರೆ.

ಟಾಪ್ ನ್ಯೂಸ್

BBK-11: ಆರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ರು ಖ್ಯಾತ ನಟನ ಪುತ್ರ

BBK-11: ಆರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ರು ಖ್ಯಾತ ನಟನ ಪುತ್ರ

police crime

Bidar; ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಪೇದೆ ಅಮಾನತು

Yadhu

Udupi: ಚಾಮುಂಡಿ ಬೆಟ್ಟದ ಮೇಲೆ ಮಹಿಷ ದಸರಾ ಸರಿಯಲ್ಲ: ಸಂಸದ ಯದುವೀರ್‌

BBK-11: ಬಿಗ್ ಬಾಸ್ ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಖಡಕ್ ‘ಸತ್ಯ’ ಎಂಟ್ರಿ

BBK-11: ಬಿಗ್ ಬಾಸ್ ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಖಡಕ್ ‘ಸತ್ಯ’ ಎಂಟ್ರಿ

1-modi

Mann Ki Baat; ಸಕಾರಾತ್ಮಕ, ಸ್ಫೂರ್ತಿದಾಯಕ ಕಥೆಗಳನ್ನು ಪರಿಚಯಿಸಿದೆ: ಮೋದಿ

BBK-11: ಬಿಗ್ ಬಾಸ್ ಮನೆಗೆ ಖ್ಯಾತ ಯೂಟ್ಯೂಬರ್ ಎಂಟ್ರಿ

BBK-11: ಬಿಗ್ ಬಾಸ್ ಮನೆಗೆ ಖ್ಯಾತ ಯೂಟ್ಯೂಬರ್ ಎಂಟ್ರಿ

1-sadsad

Lokayukta ADGP ಚಂದ್ರಶೇಖರ್ ಬ್ಲಾಕ್‌ಮೇಲರ್, ಕ್ರಿಮಿನಲ್:ಎಚ್‌ಡಿಕೆ ಕೆಂಡಾಮಂಡಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary: Siddaramaiah, who said corruption is unforgivable, should resign now: Sri Ramulu

Bellary: ಭ್ರಷ್ಟಾಚಾರ ಕ್ಷಮಿಸಲಾಗದು ಎಂದಿದ್ದ ಸಿದ್ದರಾಮಯ್ಯ ಈಗ ರಾಜೀನಾಮೆ ಕೊಡಬೇಕು: ರಾಮುಲು

Bellary; Darshan IT interrogation in jail

Bellary; ಜೈಲಿನಲ್ಲಿಂದು ದರ್ಶನ್‌ ಐಟಿ ವಿಚಾರಣೆ; ಬಳ್ಳಾರಿಗೆ ಬಂದ ಅಧಿಕಾರಿಗಳು

1-darshan

Darshan ಭೇಟಿಗೆ ಮಾಹಿತಿ‌ ಇಲ್ಲದೇ ಮತ್ತೊಮ್ಮೆ ಜೈಲಿಗೆ ಬಂದ ವಕೀಲರು

11-bellary

Bellary: ದರ್ಶನ್ ನನ್ನು ಭೇಟಿಯಾದ ವಕೀಲ ಸುನೀಲ್; ಹಲವು ವಿಚಾರಗಳ ಬಗ್ಗೆ ಚರ್ಚೆ

POlice

Huvina Hadagali: ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ; ಪ್ರಕರಣ ದಾಖಲು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

BBK-11: ಆರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ರು ಖ್ಯಾತ ನಟನ ಪುತ್ರ

BBK-11: ಆರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ರು ಖ್ಯಾತ ನಟನ ಪುತ್ರ

police crime

Bidar; ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಪೇದೆ ಅಮಾನತು

Yadhu

Udupi: ಚಾಮುಂಡಿ ಬೆಟ್ಟದ ಮೇಲೆ ಮಹಿಷ ದಸರಾ ಸರಿಯಲ್ಲ: ಸಂಸದ ಯದುವೀರ್‌

ಬೈಕ್-ಲಾರಿ ಡಿಕ್ಕಿ : ಓರ್ವ ಸ್ಥಳದಲ್ಲಿ ಸಾವು

Sirwar: ಬೈಕ್-ಲಾರಿ ಡಿಕ್ಕಿ : ಓರ್ವ ಸ್ಥಳದಲ್ಲಿ ಸಾವು

BBK-11: ಬಿಗ್ ಬಾಸ್ ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಖಡಕ್ ‘ಸತ್ಯ’ ಎಂಟ್ರಿ

BBK-11: ಬಿಗ್ ಬಾಸ್ ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಖಡಕ್ ‘ಸತ್ಯ’ ಎಂಟ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.