ದುಲೀಪ್ ಟ್ರೋಫಿ: ದಕ್ಷಿಣ-ಪಶ್ಚಿಮ “ಆಲ್ ಸ್ಟಾರ್ ಫೈನಲ್”
Team Udayavani, Jul 12, 2023, 6:37 AM IST
ಬೆಂಗಳೂರು: ಸ್ಟಾರ್ ಆಟಗಾರರಿಂದ ಒಳಗೊಂಡಿರುವ ದಕ್ಷಿಣ ವಲಯ ಮತ್ತು ಪಶ್ಚಿಮ ವಲಯ ತಂಡಗಳು ಬುಧವಾರದಿಂದ “ದುಲೀಪ್ ಟ್ರೋಫಿ’ ಪ್ರಶಸ್ತಿಗಾಗಿ ಸೆಣಸಲಿವೆ. ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ರೋಚಕ ಮೇಲಾಟವೊಂದು ನಡೆಯುವ ಎಲ್ಲ ಸಾಧ್ಯತೆ ಇದೆ.
ಕಳೆದ ಸಲವೂ ಈ ಎರಡು ತಂಡಗಳೇ ಫೈನಲ್‌ನಲ್ಲಿ ಸೆಣಸಿದ್ದವು. ಕೊಯಮತ್ತೂರಿ ನಲ್ಲಿ ನಡೆದ ಮುಖಾಮುಖೀಯಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಪಶ್ಚಿಮ ವಲಯ 294 ರನ್ನುಗಳ ಭಾರೀ ಅಂತರದಿಂದ ಗೆದ್ದಿತ್ತು. 34 ಫೈನಲ್‌ಗಳಲ್ಲಿ ತನ್ನ ಪ್ರಶಸ್ತಿಗಳ ದಾಖಲೆಯನ್ನು 19ಕ್ಕೆ ವಿಸ್ತರಿಸಿತ್ತು. ಈ ಬಾರಿ ಅಜಿಂಕ್ಯ ರಹಾನೆ ಇಲ್ಲ. ಪ್ರಿಯಾಂಕ್ ಪಾಂಚಾಲ್ ಪಶ್ಚಿಮ ವಲಯವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ಸಲಈ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶವೊಂದು ಹನುಮ ವಿಹಾರಿ ಪಡೆಗೆ ಎದುರಾಗಿದೆ.
ವೈಯಕ್ತಿಕ ಸಾಧನೆಯ ದೃಷ್ಟಿಯಿಂದಲೂ ಕೆಲವರಿಗೆ ಇದು ಮಹತ್ವದ ಪಂದ್ಯವಾಗಿದೆ. ಇಲ್ಲಿ ಕಾಣಿಸಿಕೊಳ್ಳುವ ಮುಖ್ಯ ಹೆಸರು ಚೇತೇಶ್ವರ್ ಪೂಜಾರ ಅವರದು.
ಪೂಜಾರ ಈಗ ಟೀಮ್ ಇಂಡಿಯಾದಿಂದ ಬೇರ್ಪಟ್ಟಿದ್ದಾರೆ. ಆದರೆ ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ಮಧ್ಯ ವಲಯ ವಿರುದ್ಧ 133 ರನ್ ಬಾರಿಸಿ ಮಿಂಚಿದ್ದಾರೆ. ಇನ್ನೊಂದು ಇಂಥದೇ ಇನ್ನಿಂಗ್ಸ್‌ಗಾಗಿ ಪೂಜಾರ ಕಾದಿದ್ದಾರೆ. ಇದೇ ವೇಳೆ ಪೂಜಾರ ಇಲ್ಲದ ಟೆಸ್ಟ್ ಪಂದ್ಯ ವೆಸ್ಟ್ ಇಂಡೀಸ್‌ನಲ್ಲಿ ಬುಧವಾರವೇ ಆರಂಭವಾಗಲಿರುವುದು ಕಾಕತಾಳೀಯ.
ಪಶ್ಚಿಮ ವಲಯದ ಪೃಥ್ವಿ ಶಾ, ದಕ್ಷಿಣ ವಲಯದ ಉಪನಾಯಕ ಮಾಯಾಂಕ್ ಅಗರ್ವಾಲ್, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆಲ್ಲ ಕಮ್‌ಬ್ಯಾಕ್ ಮಾಡಲು ಈ ಫೈನಲ್ ಮಹತ್ವದ್ದಾಗಲಿದೆ. 2022ರ ಬರ್ಮಿಂಗ್‌ಹ್ಯಾಮ್ ಪಂದ್ಯದ ಬಳಿಕ ಟೆಸ್ಟ್ ಆಡದ ಹನುಮ ವಿಹಾರಿಗೂ ಇಲ್ಲಿ ಅಗ್ನಿಪರೀಕ್ಷೆ ಎದುರಾಗಲಿದೆ.
ಪ್ರತಿಭಾನ್ವಿತರ ವಿಚಾರದತ್ತ ಬರುವು ದಾದರೆ ಎನ್. ತಿಲಕ್ ವರ್ಮ, ಬಿ. ಸಾಯಿ ಸುದರ್ಶನ್, ಆರ್. ಸಾಯಿ ಕಿಶೋರ್, ಕರ್ನಾಟಕದ ಬೌಲಿಂಗ್ ಹೀರೋಗ ಳಾದ ವೈಶಾಖ್ ವಿಜಯ್‌ಕುಮಾರ್, ವಿದ್ವತ್ ಕಾವೇರಪ್ಪ ಅವರ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇವರಲ್ಲಿ ತಿಲಕ್ ವರ್ಮ ವೆಸ್ಟ್ ಇಂಡೀಸ್ ಎದುರಿನ ಸರಣಿಗಾಗಿ ಈಗಾಗಲೇ ಟೀಮ್ ಇಂಡಿಯಾ ಪ್ರವೇಶಿಸಿದ್ದಾರೆ. ಉಳಿದವರಿಗೆ ಇಲ್ಲಿ ಅದೃಷ್ಟಪರೀಕ್ಷೆ ಕಾದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.