ಪರಿಸರ ಸೂಕ್ಷ್ಮ ಪ್ರದೇಶಗಳ ಸಂರಕ್ಷಣೆಗೆ ಕ್ರಮ ಅಗತ್ಯ

Team Udayavani, Jul 12, 2023, 6:00 AM IST

ಪರಿಸರ ಸೂಕ್ಷ್ಮ ಪ್ರದೇಶಗಳ ಸಂರಕ್ಷಣೆಗೆ ಕ್ರಮ ಅಗತ್ಯ

ಕಳೆದ ನಾಲ್ಕೈದು ದಿನಗಳಿಂದ ಇಡೀ ಉತ್ತರ ಭಾರತ ವರುಣಾಕ್ರೋಶದಿಂದ ತತ್ತರಿಸಿಹೋಗಿದ್ದು, ಅಪಾರ ಪ್ರಮಾಣದ ಸಾವು ನೋವು, ಆಸ್ತಿ ಪಾಸ್ತಿ ನಷ್ಟವೂ ಉಂಟಾಗಿದೆ. ಹಿಮಾಚಲ ಪ್ರದೇಶ ಮತ್ತು ದಿಲ್ಲಿ ರಾಜ್ಯಗಳು ಹಿಂದೆಂದೂ ಕಾಣದಂತ ಮಳೆಯನ್ನು ಕಂಡಿದ್ದು, ಹಿಮಾಚಲ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಆಗಿರುವ ನಷ್ಟದ ಅಂದಾಜೇ ಸಿಗುತ್ತಿಲ್ಲ. ಯಮುನೆ, ಬಿಯಾಸ್‌ ಸಹಿತ ಉತ್ತರ ಭಾರತದಲ್ಲಿನ ಬಹುತೇಕ  ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದ ಭೀತಿಯೂ ಎದುರಾಗಿದೆ.

ಕೇವಲ ಈ ಎರಡು ರಾಜ್ಯಗಳಷ್ಟೇ ಅಲ್ಲ, ಪಂಜಾಬ್‌, ಉತ್ತರಾಖಂಡ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಕೂಡ ಮಳೆಯ ಅಬ್ಬರಕ್ಕೆ ತತ್ತರಿಸಿವೆ. ಜುಲೈ ತಿಂಗಳ ಆರಂಭದಲ್ಲಿ ಮುಂಗಾರು ಕೊರತೆಯ ಸ್ಥಿತಿ ಎದುರಾಗಿದ್ದು, 10 ದಿನಗಳಲ್ಲೇ ಮುಂಗಾರು ಮಳೆ ಅಗತ್ಯಕ್ಕಿಂತ ಹೆಚ್ಚೇ ಬಂದಿದೆ ಎಂಬಂಥ ಸ್ಥಿತಿ ಸೃಷ್ಟಿಯಾಗಿದೆ. ಈ ಮೂಲಕವೇ ಕಳೆದ ಐದು ದಿನಗಳಲ್ಲಿ ಸುರಿದ ಮಳೆಯ ಬಗ್ಗೆ ಲೆಕ್ಕ ಹಾಕಬಹುದು.

ಉಳಿದೆಲ್ಲ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಹಿಮಾಚಲ ಪ್ರದೇಶದಲ್ಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಈ ರಾಜ್ಯವೊಂದರಲ್ಲೇ ಸರಕಾರದ ಮೂಲಗಳ ಪ್ರಕಾರ, ಕಳೆದ ಮೂರು ದಿನಗಳಲ್ಲಿ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 3,000 ಕೋಟಿ ರೂ. ನಷ್ಟ ಸಂಭವಿಸಿದೆ. ಶಿಮ್ಲಾವೊಂದರಲ್ಲೇ ಹತ್ತಕ್ಕಿಂತಲೂ ಅಧಿಕ ಮಂದಿ ಮೃತರಾಗಿದ್ದಾರೆ. ಇಲ್ಲಿನ ಹಲವಾರು ಪ್ರವಾಸಿ ತಾಣಗಳಲ್ಲಿ 500ಕ್ಕೂ ಹೆಚ್ಚು ಮಂದಿ ಸಿಕ್ಕಿ ಹಾಕಿಕೊಂಡಿದ್ದು, ಇವರ ರಕ್ಷಣ ಕಾರ್ಯಾಚರಣೆಯೂ ಸಾಗಿದೆ. ಉನಾ ಜಿಲ್ಲೆಯ ಸ್ಲಂವೊಂದರಲ್ಲೇ 500ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಪ್ರವಾಹದಡಿ ಸಿಲುಕಿದ್ದಾರೆ. ಹಾಗೆಯೇ ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲೆ ಮಟ್ಟದ 1,300 ರಸ್ತೆಗಳು ಹಾಳಾಗಿವೆ. ಇನ್ನು ಮೂರ್ನಾಲ್ಕು ದಿನಗಳ ಕಾಲ ಇದೇ ರೀತಿ ಮಳೆ ಸುರಿಯಬಹುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.

ಸಾಮಾನ್ಯವಾಗಿ ಭಾರೀ ಪ್ರಮಾಣದ ಮಳೆ ಸುರಿದಾಗ ಮೊದಲಿಗೆ ಹೆಚ್ಚು ಹಾನಿಯಾಗುವುದು ಗುಡ್ಡಗಾಡು ಪ್ರದೇಶಗಳಲ್ಲಿ. ಇದಕ್ಕೆ ಉದಾಹರಣೆ 2018ರಲ್ಲಿ ಕರ್ನಾಟಕದ ಕೊಡಗಿನಲ್ಲಿ ಭಾರೀ ಪ್ರಮಾಣದ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಆಗ ಗುಡ್ಡಗಳು ಕುಸಿದು ಮನೆಗಳ ಸಮೇತ ಎಲ್ಲವೂ ಮಳೆಯ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಈ ಹಿಂದೆ ಉತ್ತರಾಖಂಡದ ಕೇದಾರನಾಥದ ಬಳಿಯೂ ಇಂಥದ್ದೇ ಅನಾಹುತ ಸೃಷ್ಟಿಯಾಗಿತ್ತು. ಅಲ್ಲಿನ ರಸ್ತೆಗಳು, ಜನವಸತಿ ಪ್ರದೇಶಗಳೆಲ್ಲ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದವು.

ಈಗ ಹಿಮಾಚಲ ಪ್ರದೇಶದ ಸರದಿ. ಅಲ್ಲಿಯೂ ಇಂಥದ್ದೇ ಪರಿಸ್ಥಿತಿ ತಲೆದೋರಿದೆ. ಗುಡ್ಡಗಾಡು ಪ್ರದೇಶಗಳಲ್ಲಿನ ಜನವಸತಿ ಕೇಂದ್ರಗಳೇ ಹೆಚ್ಚು ಹಾನಿಗೀಡಾಗಿವೆ. ಇದಕ್ಕೆ ಅಳತೆ ಮೀರಿ ಅಭಿವೃದ್ದಿ ಕೆಲಸ ಕೈಗೆತ್ತಿಕೊಂಡಿರುವುದೇ ಕಾರಣವೇ? ಅಥವಾ ಮಾನವನ ಅತಿಯಾಸೆಯಿಂದಾಗಿ ಇಂಥ ಅನಾಹುತಗಳು ಸಂಭವಿಸುತ್ತಿವೆಯೇ ಎಂಬ ಪ್ರಶ್ನೆಗಳೂ ಎದ್ದಿವೆ. ಸರಕಾರಗಳು ಪರಿಸರ ಸೂಕ್ಷ್ಮ ಪ್ರದೇಶಗಳ ಸುರಕ್ಷತೆ ಕುರಿತಂತೆ ನಿರ್ಲಕ್ಷ್ಯ ವಹಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಲಾದರೂ, ಕೇಂದ್ರ ಹಾಗೂ ಆಯಾ ರಾಜ್ಯ ಸರಕಾರಗಳು ಪರಿಸರ ಸೂಕ್ಷ್ಮ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಿ, ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಬೇಕು. ಗುಡ್ಡಗಳು ಜರುಗದಂಥ ವ್ಯವಸ್ಥೆಯೊಂದನ್ನು ಜಾರಿಗೆ ತರುವ ಕೆಲಸ ಮಾಡಬೇಕು.

ಟಾಪ್ ನ್ಯೂಸ್

Mangaluru ಬಲ್ಮಠ: ಮನೆಯಿಂದ ಕಳವು; ಪ್ರಕರಣ ದಾಖಲು

Mangaluru ಬಲ್ಮಠ: ಮನೆಯಿಂದ ಕಳವು; ಪ್ರಕರಣ ದಾಖಲು

Udupi: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Udupi: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ರೈಲ್ವೇ ಹಳಿಯಲ್ಲಿ ಕಬ್ಬಿಣ ಹೆಕ್ಕಿದ ಪ್ರಕರಣ: ಮತ್ತೆರಡು ಕಾನೂನಿನ ಕುಣಿಕೆ

Padubidri: ರೈಲ್ವೇ ಹಳಿಯಲ್ಲಿ ಕಬ್ಬಿಣ ಹೆಕ್ಕಿದ ಪ್ರಕರಣ: ಮತ್ತೆರಡು ಕಾನೂನಿನ ಕುಣಿಕೆ

Mangaluru: ವಾಯುಪಡೆ ನಿವೃತ್ತ ಅಧಿಕಾರಿ ಮೇಲಿನ ಹಲ್ಲೆ ಆರೋಪವನ್ನು ತಳ್ಳಿಹಾಕಿದ ರೈಲ್ವೇMangaluru: ವಾಯುಪಡೆ ನಿವೃತ್ತ ಅಧಿಕಾರಿ ಮೇಲಿನ ಹಲ್ಲೆ ಆರೋಪವನ್ನು ತಳ್ಳಿಹಾಕಿದ ರೈಲ್ವೇ

Mangaluru: ವಾಯುಪಡೆ ನಿವೃತ್ತ ಅಧಿಕಾರಿ ಮೇಲಿನ ಹಲ್ಲೆ ಆರೋಪವನ್ನು ತಳ್ಳಿಹಾಕಿದ ರೈಲ್ವೇ

1-wpl

WPL; ಭರ್ಜರಿ ಜಯ:ಆರ್‌ಸಿಬಿ ಅಜೇಯ

Bantwal ಫರಂಗಿಪೇಟೆ: ನದಿಗೆ ಹಾರಿ ವ್ಯಕ್ತಿ ಆತ್ಮಹ*ತ್ಯೆ

Bantwal ಫರಂಗಿಪೇಟೆ: ನದಿಗೆ ಹಾರಿ ವ್ಯಕ್ತಿ ಆತ್ಮಹ*ತ್ಯೆ

Mangaluru: ಮರಳಿನ ಸಮಸ್ಯೆಗೆ ಕೆಡಿಪಿ ಸಭೆಯಲ್ಲೂ ಸಿಗದ ಪರಿಹಾರ: ಸಚಿವ ದಿನೇಶ್‌ ಗುಂಡೂರಾವ್‌

Mangaluru: ಮರಳಿನ ಸಮಸ್ಯೆಗೆ ಕೆಡಿಪಿ ಸಭೆಯಲ್ಲೂ ಸಿಗದ ಪರಿಹಾರ: ಸಚಿವ ದಿನೇಶ್‌ ಗುಂಡೂರಾವ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Editorial: ನೀರಿನ ಸಂರಕ್ಷಣೆಗಾಗಿ ಈಗಿನಿಂದಲೇ ಎಚ್ಚರ ಅಗತ್ಯ

1

Editorial: ಬೇಸಗೆ ಸಮೀಪಿಸುತ್ತಿದೆ ಜಲಮೂಲಗಳತ್ತ ಇರಲಿ ಚಿತ್ತ

Parliment New

ಅಭಿವೃದ್ಧಿ, ಜನಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ರಾಜಕೀಯ ಸಲ್ಲದು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Mangaluru ಬಲ್ಮಠ: ಮನೆಯಿಂದ ಕಳವು; ಪ್ರಕರಣ ದಾಖಲು

Mangaluru ಬಲ್ಮಠ: ಮನೆಯಿಂದ ಕಳವು; ಪ್ರಕರಣ ದಾಖಲು

Udupi: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Udupi: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

1-manu-bhaker

BBC; ಸ್ಟಾರ್‌ ಪಿಸ್ತೂಲ್‌ ಶೂಟರ್‌ ಮನು ಭಾಕರ್‌ ವರ್ಷದ ಆಟಗಾರ್ತಿ

Padubidri: ರೈಲ್ವೇ ಹಳಿಯಲ್ಲಿ ಕಬ್ಬಿಣ ಹೆಕ್ಕಿದ ಪ್ರಕರಣ: ಮತ್ತೆರಡು ಕಾನೂನಿನ ಕುಣಿಕೆ

Padubidri: ರೈಲ್ವೇ ಹಳಿಯಲ್ಲಿ ಕಬ್ಬಿಣ ಹೆಕ್ಕಿದ ಪ್ರಕರಣ: ಮತ್ತೆರಡು ಕಾನೂನಿನ ಕುಣಿಕೆ

Mangaluru: ವಾಯುಪಡೆ ನಿವೃತ್ತ ಅಧಿಕಾರಿ ಮೇಲಿನ ಹಲ್ಲೆ ಆರೋಪವನ್ನು ತಳ್ಳಿಹಾಕಿದ ರೈಲ್ವೇMangaluru: ವಾಯುಪಡೆ ನಿವೃತ್ತ ಅಧಿಕಾರಿ ಮೇಲಿನ ಹಲ್ಲೆ ಆರೋಪವನ್ನು ತಳ್ಳಿಹಾಕಿದ ರೈಲ್ವೇ

Mangaluru: ವಾಯುಪಡೆ ನಿವೃತ್ತ ಅಧಿಕಾರಿ ಮೇಲಿನ ಹಲ್ಲೆ ಆರೋಪವನ್ನು ತಳ್ಳಿಹಾಕಿದ ರೈಲ್ವೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.