Kumble ದವಡೆ ಮುರಿದು ಬೌಲಿಂಗ್; ತಮಾಷೆ ಮಾಡುತ್ತಿದ್ದಾರೆ ಎಂದುಕೊಂಡ ಪತ್ನಿ!

Team Udayavani, Jul 12, 2023, 5:51 PM IST

1-adsadad

ಬೆಂಗಳೂರು: ವಿಶ್ವದ ಗಮನಸೆಳೆದಿದ್ದ 2002 ರಲ್ಲಿ ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದದ ಆಂಟಿಗುವಾ ಟೆಸ್ಟ್‌ನಲ್ಲಿ ಭಾರತದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರು ಮುರಿದ ದವಡೆಯೊಂದಿಗೆ ಬ್ಯಾಂಡೇಜ್ ಮಾಡಿದ ಮುಖದೊಂದಿಗೆ ಆಡಲಿಳಿದುದ್ದನ್ನು ತಮಾಷೆ ಎಂದು ಅವರ ಪತ್ನಿ ಚೇತನಾ ಅವರು ಭಾವಿಸಿದ್ದರಂತೆ.

ಜಿಯೋ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ ಕುಂಬ್ಳೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಗಾಯಾಳಾಗಿಯೇ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ ಅವರಂತಹವರಿಗೆ ಸವಾಲು ಹಾಕಲು ನಿರ್ಧರಿಸಿದ ಕ್ಷಣಗಳನ್ನು ಭಾರತದ ಸ್ಪಿನ್ ದಿಗ್ಗಜ ನೆನಪಿಸಿಕೊಂಡರು. 4 ರನ್ ಗಳಿಸಿದ್ದ ಲಾರಾ ಅವರನ್ನು ಕುಂಬ್ಳೆ ಎಲ್ ಬಿಡಬ್ಲ್ಯೂ ಮೂಲಕ ಔಟ್ ಮಾಡಿದ್ದರು. ಅದು ಪಂದ್ಯದಲ್ಲಿ ಅವರು ಪಡೆದ ಏಕೈಕ ವಿಕೆಟ್ ಆಗಿತ್ತು.

“ನಾನು ನನ್ನ ಹೆಂಡತಿ, ಚೇತನಾಳಿಗೆ ಕರೆ ಮಾಡಿ ಹೇಳಿದೆ, ನೋಡು ನಾನು ಮನೆಗೆ ಬರುತ್ತಿದ್ದೇನೆ, ನನಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದಿದ್ದೆ. ಕರೆ ಮುಗಿಸಿದ ಬಳಿಕ ನಾನು ಹೋಗಿ ಬೌಲ್ ಮಾಡುತ್ತೇನೆ ಎಂದು ಅವಳಿಗೆ ಹೇಳಿದ್ದೆ, ಆದರೆ ಬಹುಶಃ ನಾನು ತಮಾಷೆ ಮಾಡುತ್ತಿದ್ದೆ ಎಂದು ಅವಳು ಭಾವಿಸಿದ್ದಳು. ಅವಳು ಅದನ್ನು ಗಂಭೀರವಾಗಿ ತೆಗೆದುಕೊಂಡಳು ಎಂದು ನಾನು ಭಾವಿಸುವುದಿಲ್ಲ. ದವಡೆ ಮುರಿದ ನಂತರವೂ ತಂಡಕ್ಕೆ ಕೆಲವು ವಿಕೆಟ್‌ಗಳನ್ನು ಪಡೆಯುವುದು ನನ್ನ ಜವಾಬ್ದಾರಿ ಎಂದು ಭಾವಿಸಿದ್ದೆ ಎಂದು ಭಾರತದ ಮಾಜಿ ನಾಯಕ ಹೇಳಿದರು.

“ನಾನು ಡ್ರೆಸ್ಸಿಂಗ್ ರೂಮ್ ಗೆ ಹಿಂತಿರುಗಿದಾಗ, ಸಚಿನ್ ಬೌಲಿಂಗ್ ಮಾಡುವುದನ್ನು ನಾನು ನೋಡಿದೆ. ವೇವೆಲ್ ಹಿಂಡ್ಸ್ ಆಡುತ್ತಿದ್ದರು ಎಂದು ನಾನು ಭಾವಿಸುತ್ತೇನೆ ಬೇರೊಬ್ಬ ಬ್ಯಾಟ್ಸ್ ಮ್ಯಾನ್ ನನಗೆ ನೆನಪಿಲ್ಲ” ಎಂದು ಕುಂಬ್ಳೆ ಹೇಳಿದರು.

”ಇದು ನನ್ನ ಅವಕಾಶ ಎಂದು ನಾನು ಭಾವಿಸಿದೆ. ನಾನು ಹೋಗಿ ಒಂದೆರಡು ವಿಕೆಟ್‌ಗಳನ್ನು ಪಡೆಯಬೇಕು. ನಾವು ಎರಡು ಅಥವಾ ಮೂರನೇ ದಿನದ ಅಂತ್ಯಕ್ಕೆ ವೆಸ್ಟ್ ಇಂಡೀಸ್ ನ ಮೂರು ಅಥವಾ ನಾಲ್ವರನ್ನು ಔಟಾಗಿಸಲು ಸಾಧ್ಯವಾದರೆ, ನಮಗೆ ಪಂದ್ಯವನ್ನು ಗೆಲ್ಲುವ ಅವಕಾಶವಿದೆ ಅಂದುಕೊಂಡೆ. ಫಿಸಿಯೋ ಥೆರಪಿಸ್ಟ್ ಆಂಡ್ರ್ಯೂ ಲೈಪಸ್ ಅವರಿಗೆ ನನ್ನನ್ನು ಮೈದಾನಕ್ಕೆ ಹೋಗಲು ಅವಕಾಶ ಮಾಡಿಕೊಡಲು ಹೇಳಿದೆ.

ಶಸ್ತ್ರಚಿಕಿತ್ಸೆಗಾಗಿ ಮರುದಿನ ಬೆಂಗಳೂರಿಗೆ ಹಿಂತಿರುಗಬೇಕಿತ್ತು, ಆ ಸಮಯದಲ್ಲಿ ನಾನು ಕನಿಷ್ಠ ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ ಎಂಬ ಆಲೋಚನೆಯೊಂದಿಗೆ ಮನೆಗೆ ಹೋಗಬಹುದು ಎಂದು ಹೇಳಿದ್ದೆ ಅಂದರು.

7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕುಂಬ್ಳೆ ಅವರು ಮರ್ವಿನ್ ದಿಲ್ಲನ್ ಶಾರ್ಟ್ ಬಾಲ್ ಗೆ ಗೊಂಡು ರಕ್ತವನ್ನು ಉಗುಳಿದರು ಆದರೆ ಎರಡು ದಶಕಗಳ ಹಿಂದೆ ಆ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಇನ್ನೂ 20 ನಿಮಿಷಗಳ ಕಾಲ ಬ್ಯಾಟ್ ಮಾಡಿದ್ದರು.

ಸ್ಮರಣೀಯ ವೃತ್ತಿಜೀವನದಲ್ಲಿ ಅವರು ಬೌಲಿಂಗ್ ಮಾಡಿದ ಕಠಿಣ ಬ್ಯಾಟ್ಸ್ ಮ್ಯಾನ್ ಗಳ ಬಗ್ಗೆ ಕೇಳಿದಾಗ, ಅವರು ಲಾರಾ, ಸಯೀದ್ ಅನ್ವರ್, ಕಾಲಿಸ್ ಮತ್ತು ಅರವಿಂದ ಡಿ ಸಿಲ್ವಾ ಅವರ ಹೆಸರು ಹೇಳಿದರು.

ಕುಂಬ್ಳೆ ಗಾಯಾಳಾಗಿ ಆಡಿದ ಪಂದ್ಯದಲ್ಲಿ ಭಾರತ 513/9 ಡಿಕ್ಲೆರ್ ಮಾಡಿಕೊಂಡಿತ್ತು, ವೆಸ್ಟ್ ಇಂಡೀಸ್ 629/9 ಡಿಕ್ಲೆರ್ ಮಾಡಿಕೊಂಡಿತ್ತು. ಪಂದ್ಯ ಡ್ರಾ ಆಗಿತ್ತು.

ಜುಲೈ 12 ರಿಂದ ಪ್ರಾರಂಭವಾಗುವ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಪೈಪೋಟಿ ನಡೆಸಲಿದ್ದು, ಎರಡು ತಂಡಗಳು ಕೆಂಪು-ಚೆಂಡಿನ ಕ್ರಿಕೆಟ್‌ನಲ್ಲಿ ಎರಡು ಪಂದ್ಯಗಳ ಸರಣಿ ಆಡಲಿವೆ.

ಟಾಪ್ ನ್ಯೂಸ್

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

Ranji Trophy: Samit Dravid in possible squad

Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.