ಆಳಂದ: ಹಿರೋಳಿಯಲ್ಲಿ ನೀರಿಗಾಗಿ ನಿಲ್ಲದ ಹಾಹಾಕಾರ-ದೇಗುಲದ ಬಾವಿಗೆ ನೂಕುನುಗ್ಗಲು
ದೂರದ ಪ್ರದೇಶಕ್ಕೆ ಹೋಗಿ ನೀರು ತರಲು ಪರದಾಡುತ್ತಿದ್ದಾರೆ.
Team Udayavani, Jul 12, 2023, 2:20 PM IST
ಆಳಂದ: ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಹಿರೋಳಿ ಗ್ರಾಮದಲ್ಲಿ ಕಳೆದೊಂದು ತಿಂಗಳಿಂದ ನೀರು ಪೂರೈಕೆ ಇಲ್ಲದೇ ಹಾಹಾಕಾರ ಸೃಷ್ಟಿಯಾಗಿದೆ. ಹಿರೋಳಿ ಗ್ರಾಮ ಪಂಚಾಯಿತಿಯಿಂದ ನೀರು ಪೂರೈಕೆ ಮಾಡುವ ತೆರೆದ ಬಾವಿ, ಕೊಳವೆ ಬಾವಿಗಳು ಸಂಪೂರ್ಣ ಬತ್ತಿ ಹೋಗಿವೆ. ಎರಡ್ಮೂರು ಕೊಡ ನೀರು ಸಿಕ್ಕರೆ ಪುಣ್ಯ.
ಇಷ್ಟು ನೀರು ಇಡೀ ಕುಟುಂಬಕ್ಕೆ ಸಾಲದಿರುವುದರಿಂದ ಹೆಣ್ಮಕ್ಕಳು, ಮಕ್ಕಳು ವೃದ್ಧರಾದಿಯಾಗಿ ನೀರಿಗಾಗಿ ಹೊಲ ಗದ್ದೆಗಳಿಗೆ ಅಲೆಯುವಂತಾಗಿದೆ. ಗ್ರಾಮದಲ್ಲಿ ಸುಮಾರು ಎರಡು ಸಾವಿರ ಮನೆಗಳಿದ್ದು, ಇಲ್ಲಿ ಐದಾರು ಸಾವಿರ ಜನರು ವಾಸವಾಗಿದ್ದಾರೆ. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿದ್ದರೂ ಮಳೆ ಬಾರದೇ ಇರುವುದರಿಂದ ಜನ ಜಾನುವಾರುಗಳಿಗೆ ನೀರೊದಗಿಸುವುದು ಆಡಳಿತಕ್ಕೆ ದೊಡ್ಡ ಸವಾಲಾಗಿದೆ. ಮತ್ತೊಂದೆಡೆ ಗ್ರಾಮಸ್ಥರು ಕೆಲ ಖಾಸಗಿ ಬಾವಿ, ಕೊಳವೆ ಬಾವಿಗಳಿಗೆ ಹೋಗಿ ನೀರಿಗಾಗಿ ಬೇಡುವ ಪರಿಸ್ಥಿತಿ ಎದುರಾಗಿದೆ. ಅಲ್ಲಿಯೂ ಕೂಡಾ ನೀರು ಪಾತಾಳಕ್ಕೆ ಕುಸಿದಿದ್ದು, ಕೊಡ ನೀರು ಸಿಕ್ಕರೂ ನಿಟ್ಟುಸಿರು
ಬಿಡುವಂತಾಗಿದೆ.
ಮಕ್ಕಳು, ಮಹಿಳೆಯರು, ವಯೋವೃದ್ಧರು ಸೇರಿ ಕೊಡ ಹೊತ್ತು ನೀರು ತರಲು ಮುಂದಾದರೂ ನೀರು ದೊರಕುತ್ತಿಲ್ಲ. ಅನೇಕರು
ದ್ವಿಚಕ್ರ ವಾಹನ, ಸೈಕಲ್, ಎತ್ತಿನಗಾಡಿ ಮೂಲಕ ತಮಗೆ ಅನುಕೂಲವಿರುವ ವ್ಯವಸ್ಥೆಯಲ್ಲಿ ದೂರದ ಪ್ರದೇಶಕ್ಕೆ ಹೋಗಿ ನೀರು ತರಲು ಪರದಾಡುತ್ತಿದ್ದಾರೆ.
ತುರ್ತು ಕ್ರಮ ಕೈಗೊಳ್ಳಿ: ಗ್ರಾಪಂನಿಂದ ಸೋಮವಾರ ಎರಡು ಕೊಳವೆ ಬಾವಿ ತೋಡಿದ್ದರಲ್ಲಿ ಒಂದಕ್ಕೆ ನೀರು ಸಮರ್ಪಕವಾಗಿ ದೊರತ್ತಿಲ್ಲ. ಇನ್ನೊಂದು ವಿಫಲವಾಗಿದೆ. ಸದ್ಯ ಟ್ಯಾಂಕರ್ ಮೂಲಕವಾದರೂ ಜನರಿಗೆ ಕುಡಿಯುವ ನೀರು ಕೊಡುವ ಕೆಲಸವನ್ನು ಸರ್ಕಾರ ತುರ್ತಾಗಿ ಮಾಡಬೇಕೆಂದು ಗ್ರಾಮಸ್ಥ ರಾಜಶೇಖರ ಬಸ್ಥೆ ಹಿರೋಳಿ ಒತ್ತಾಯಿಸಿದ್ದಾರೆ.
ಹಲವೆಡೆ ನೀರಿನ ಸಮಸ್ಯೆ: ಹಿರೋಳಿ ಸೇರಿದಂತೆ ಹಲವೆಡೆ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ವರದಿಗಳು ಕೇಳಿ ಬರುತ್ತಿವೆ. ಆದರೆ ತಾಲೂಕಾಡಳಿತ ಈ ಕುರಿತು ಕ್ರಮ ಕೈಗೊಂಡತ್ತಿಲ್ಲ. ಅಲ್ಲಲ್ಲಿ ನೀರಿಗಾಗಿ ಸ್ಥಳೀಯ ಮಟ್ಟದ ಕಾರ್ಯಾಚರಣೆ ನಡೆದರೂ ಪರಿಸ್ಥಿತಿ ಕೈ ಮೀರಿ ಸಮರ್ಪಕ ನೀರು ದೊರೆಯದೆ ಇರುವುದು ಹಳ್ಳಿಗರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ. ಶಾಸಕರು ಮತ್ತು ಜಿಲ್ಲಾಡಳಿತ, ತಾಲೂಕಾಡಳಿತ ತುರ್ತು ಕ್ರಮ ಕೈಗೊಳ್ಳಬೇಕಿದೆ.
ನೂರು ಕೊಳವೆ ಬಾವಿಯಲ್ಲೂ ನೀರಿಲ್ಲ
ಹಿರೋಳಿ ಗ್ರಾಮದಲ್ಲಿ ಸುಮಾರು ನೂರು ಕೊಳವೆ ಬಾವಿಗಳನ್ನು ತೋಡಲಾಗಿದ್ದರೂ ಯಾವ ಬಾವಿಯಲ್ಲೂ ಸಮರ್ಪಕವಾಗಿ
ನೀರು ದೊರೆಯುತ್ತಿಲ್ಲ. ಕೆಲವೊಂದು ಸಂಪೂರ್ಣ ಬತ್ತಿ ಹೋಗಿದ್ದರೆ, ಕೆಲವೊಂದಿಷ್ಟು ಎರಡ್ಮೂರು ಮನೆಗಾಗುವಷ್ಟೇ ನೀರು ದೊರೆಯುತ್ತಿದೆ. ಸರ್ಕಾರ ಟ್ಯಾಂಕರ್‌ನಿಂದಾದರೂ ನೀರೊದಗಿಸಬೇಕೆಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ದೇಗುಲದ ಬಾವಿಗೆ ನೂಕುನುಗ್ಗಲು
ಗ್ರಾಮದಲ್ಲಿನ ಬಡಾವಣೆ ಅಂಬಾಬಾಯಿ ದೇವಸ್ಥಾನದಲ್ಲಿ ಕೊಳವೆ ಬಾವಿಯ ಪಂಪ್ ಸೆಟ್‌ನಿಂದ ನೆರೆ ಹೊರೆಯವರಿಗೆ ನೀರು
ಕೊಡಲಾಗುತ್ತಿದೆ. ಇಲ್ಲಿಯೂ ನೀರಿಗಾಗಿ ನಾ ಮುಂದೆ ನೀ ಮುಂದು ಎಂದು ಜನರ ನೂಕುನುಗ್ಗಲು ಉಂಟಾಗುತ್ತಿದೆ. ಅಲ್ಲದೆ
ಮತ್ತೂಂದೆಡೆ ಹಿರೋಳಿ ಗ್ರಾಮದ ಗೇಟ್ ಬಳಿಯಿರುವ ನೇಕಾರ ಕಾಲೋನಿಯಲ್ಲಿರುವ ರೈತ ನಿಂಗಪ್ಪ ಉಡಗಿ ಅವರು ತಮ್ಮ
ಹೊಲದಲ್ಲಿನ ಪೇರಲ ಗಿಡಕ್ಕೆ ನೀರು ಕಡಿತ ಮಾಡಿ, ಜನರಿಗೆ ನೀರು ಕೊಡುತ್ತಿದ್ದಾರೆಂದು ಗ್ರಾಮದ ರಾಜಶೇಖರ ಬಸ್ಥೆ ತಿಳಿಸಿದ್ದಾರೆ.
*ಮಹಾದೇವ ವಡಗಾಂವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.