ಬೀದರ: ರಾಷ್ಟ್ರೀಯ ಜಾನಪದ ಸಮ್ಮೇಳನಕ್ಕೆ ತೆರೆ
ಹೃದಯವನ್ನು ನಿರ್ಲಿಪ್ತತೆಯಿಂದ ಇಡಲು ಜನಪದ ಸಹಕಾರಿಯಾಗಿದೆ
Team Udayavani, Jul 12, 2023, 6:45 PM IST
ಬೀದರ: ಸಂಸ್ಕೃತಿ ಮಂತ್ರಾಲಯ ನವದೆಹಲಿ, ಕರ್ನಾಟಕ ಜಾನಪದ ಪರಿಷತ್ತು ಬೀದರ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಹಾಗೂ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಆಶ್ರಯದಲ್ಲಿ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಮೂರು ದಿನಗಳ “ರಾಷ್ಟ್ರೀಯ ಜನಪದ ಸಮ್ಮೇಳನ’ಕ್ಕೆ ತೆರೆ ಬಿದ್ದಿದೆ.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಬೀದರ ವಿಶ್ವವಿದ್ಯಾಲಯದ ಕುಲಪತಿ ಪ್ರೊ|
ಬಿ.ಎಸ್. ಬಿರಾದಾರ, ಹಿಂದೆ ಯಾವುದೇ ವಿಶ್ವವಿದ್ಯಾಲಯಗಳಿರಲಿಲ್ಲ. ಆದರೂ ಅನಕ್ಷರಸ್ಥ ಹಿರಿಯರಿಂದ ಮೂಡಿ ಬಂದ ಶ್ರೀಮಂತ ಸಾಹಿತ್ಯವೇ ಜನಪದವಾಗಿದೆ. ಓದಲು ಬಾರದಿದ್ದರೂ ಜನಪದರು ಹೃದಯಕ್ಕೆ ತಟ್ಟುವ, ಮನಸ್ಸಿಗೆ ಮುಟ್ಟುವ ಸಾಹಿತ್ಯವನ್ನು ಈ ಲೋಕಕ್ಕೆ ನೀಡಿ ಹೋಗಿದ್ದಾರೆ ಎಂದು ಸ್ಮರಿಸಿದರು.
ಹಿಂದೆ ತಾಯಂದಿರು ತಾವು ಮಾಡುವ ಕೆಲಸದಲ್ಲಿ ದಣಿವು ಆಯಾಸ ಮರೆಯಲು ಸ್ವತಃ ತಾವೇ ಕಟ್ಟಿ ಹಾಡಿದ ಹಾಡುಗಳೇ ಜನಪದ ಹಾಡುಗಳಾಗಿ ಇಂದು ಲಭ್ಯವಾಗಿವೆ. ಈ ಜಾನಪದ ಹಾಡುಗಳಲ್ಲಿ ಪ್ರೀತಿ ನಂಬಿಕೆ ಪರಸ್ಪರ ಬಾಂಧವ್ಯ ಅಡಗಿದೆ. ಮನೆ ಹಸನಾಗಿರಲು ಮನಸ್ಸು ಹಸಿರಾಗಿರಬೇಕು. ತನ್ನ ಮನಸ್ಸಿನ ಸಮಾಧಾನದ ಜೊತೆಗೆ ಇತರರ ಹೃದಯವನ್ನು ನಿರ್ಲಿಪ್ತತೆಯಿಂದ ಇಡಲು ಜನಪದ ಸಹಕಾರಿಯಾಗಿದೆ ಎಂದರು.
ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಅಬ್ದುಲ್ ಖದೀರ್ ಮಾತನಾಡಿ, ನನಗೆ ಕನ್ನಡವೇ ಬರುತ್ತಿರಲಿಲ್ಲ. ಅಲ್ಪಸ್ವಲ್ಪ ಇಂದು
ಮಾತನಾಡುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ಡಾ| ಜಗನ್ನಾಥ ಹೆಬ್ಟಾಳೆ. ಮೂರು ದಿವಸಗಳ ಜಾನಪದ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಗಡಿಭಾಗದಲ್ಲಿ ಜನಪದದ ಪಾಂಚಜನ್ಯ ಮೊಳಗಿಸುತ್ತಿರುವ ಡಾ| ಹೆಬ್ಟಾಳೆದ್ವಯರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಕರ್ನಾಟಕ ಸಾಹಿತ್ಯ ಸಂಘದ ಟ್ರಸ್ಟ್ ಅಧ್ಯಕ್ಷ ಶಂಕರರಾವ ಹೊನ್ನಾ, ನಿಜಲಿಂಗಪ್ಪ ತಗಾರೆ,
ಕೆ. ಸತ್ಯಮೂರ್ತಿ, ಶಂಭುಲಿಂಗ ವಾಲೊಡ್ಡಿ, ಬಸವರಾಜ ಮೂಲಗೆ, ಡಾ| ಜಗನ್ನಾಥ ಹೆಬ್ಬಾಳೆ, ಡಾ| ರಾಜಕುಮಾರ ಹೆಬ್ಬಾಳೆ, ಪ್ರೊ| ಎಸ್.ಬಿ. ಬಿರಾದಾರ ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಬೆಂಗಳೂರಿನ ಕಲಾವಿದರಾದ ಸಿ.ಎಂ. ನರಸಿಂಹಮೂರ್ತಿ, ಶಂಕರ ಭಾರತಿಪುರ, ದೇವಾನಂದ ವರಪ್ರಸಾದ, ಕೀಲಾರ ಕೃಷ್ಣೇಗೌಡ ಮತ್ತು ಸಂಗಡಿಗರು ಜಾನಪದ ಝೇಂಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಕೋಲಾಟವನ್ನು ಸರಸ್ವತಿ ಹುಲಸೂರೆ ಸಂಗಡಿಗರು, ಚಕ್ರಿ ಭಜನೆಯನ್ನು ಮಲ್ಲಿಕಾರ್ಜುನ ಕಲಾತಂಡ, ಭಜನೆ ಹಾಡುಗಳನ್ನು ಅಕ್ಕಮಹಾದೇವಿ ಮಹಿಳಾ ತಂಡ, ಹಲಗೆ ಕುಣಿತವನ್ನು ಅಬ್ರಾಹಂ ಮತ್ತು ತಂಡದವರು ನಡೆಸಿಕೊಟ್ಟರು. ವೈಜಿನಾಥ ಪಾಟೀಲ ನಿರೂಪಿಸಿದರು. ಡಾ| ಬಿರಾದಾರ ರಾಜೇಂದ್ರ ಸ್ವಾಗತಿಸಿದರು. ಶ್ರೀಕಾಂತ ಸ್ವಾಮಿ ವಂದಿಸಿದರು.
ಪ್ರೊ| ಕಂಬಾರ ರಾಷ್ಟ್ರೀಯ ಪ್ರಶಸ್ತಿ ರಾಷ್ಟ್ರೀಯ ಜಾನಪದ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರೊ| ಚಂದ್ರಶೇಖರ ಕಂಬಾರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಲ್ಲಿಕಾರ್ಜುನ ಪಾಟೀಲ, ಡಾ| ದಯಾನಂದ ಕಾರಬಾರಿ, ಶಿವಾನಂದ ಗುಂದಗಿ, ಶಿವರಾಜ ಖೆಲೆ, ಸಂತೋಷ ಹಡಪದ, ಗಣಪತಿ ದೇಶಪಾಂಡೆ, ಕಮಳಮ್ಮ ಸಂತಪೂರೆ, ಮಹಾದೇವಿ ಅಷ್ಟೂರೆ, ವೀರಂತರೆಡ್ಡಿ ಜಂಪಾ, ಪಂಡಿತ ಬಾಳೂರೆ, ಗಂಗಮ್ಮ ಫುಲೆ, ದೇವೇಂದ್ರ ಭೂಪಾಳೆ, ಗುರುನಾಥ ಹಲಿಂಗೆ, ಹಾವಗಿರಾವ ಕಳಸೆ, ಡಾ| ಶಶಿಕಾಂತ ಪಾಟೀಲ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Air Balloon: ಹೈದರಾಬಾದ್‌ನಲ್ಲಿ ಹಾರಿಸಿದ ‘ಏರ್ ಬಲೂನ್’ ಹುಮನಾಬಾದ್ ನಲ್ಲಿ ಬಿತ್ತು…
ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಸರಕಾರದಿಂದ ಅಸಹಕಾರ: ಎಚ್.ಡಿ.ಕುಮಾರಸ್ವಾಮಿ
Bidar ದರೋಡೆ ಕೇಸ್: ಆರೋಪಿಗಳ ಗುರುತು ಪತ್ತೆ, ಶೀಘ್ರ ಬಂಧನ: ಎಡಿಜಿಪಿ ಹರಿಶೇಖರನ್
Swadesh Darshan scheme: ಕೇಂದ್ರದ ಸ್ವದೇಶ್ ದರ್ಶನ್ ಯೋಜನೆಗೆ ಬೀದರ್, ಉಡುಪಿ ಆಯ್ಕೆ
Bidar: ಶೂಟೌಟ್: ಸಿಬಂದಿ ಹತ್ಯೆಗೈದು 93 ಲಕ್ಷ ರೂ.ಎಟಿಎಂ ಹಣದ ಪೆಟ್ಟಿಗೆ ಲೂಟಿ!
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.