ಕಾರು ಚಾಲಕನ ಮೇಲೆ ಹಲ್ಲೆ ಪ್ರಕರಣ; ನಾಲ್ವರು ಆರೋಪಿಗಳಿಗೆ ಶಿಕ್ಷೆ
Team Udayavani, Jul 13, 2023, 6:25 AM IST
ಉಡುಪಿ: ಆರು ವರ್ಷಗಳ ಹಿಂದೆ ನಡೆದ ಕಾರು ಚಾಲಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಎರಡನೇ ಹೆಚ್ಚುವರಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿ ಬುಧವಾರ ಆದೇಶಿಸಿದೆ.
ಉಡುಪಿ ಚಿಟ್ಟಾಡಿಯ ಯೋಗೀಶ್ ಪೂಜಾರಿ(43), ಕೊಡವೂರು ಮಾಧವ ನಗರದ ಸುಧಾಕರ್(42), ಉದ್ಯಾವರದ ವಸಂತ(52), ಎಲ್ಲೂರಿನ ಕಿರಣ್ (34) ಶಿಕ್ಷೆಗೆ ಗುರಿಯಾದ ಆರೋಪಿಗಳು. ಇವರೆಲ್ಲರು ಕಾರು ಚಾಲಕರಾಗಿ ದುಡಿಯುತ್ತಿದ್ದರು.
ಘಟನೆ ವಿವರ
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶಿರ್ವ ನಿವಾಸಿ ರಾಜೇಶ್ ಶೆಟ್ಟಿಗಾರ್(40) ಅವರು ಕಾರು ಬಾಡಿಗೆ ನಡೆಸುತ್ತಿದ್ದರು. ಇಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಯೋಗೀಶ್ ಪೂಜಾರಿಯ ಬಳಿ ಬ್ಯಾಡ್ಜ್ ಇಲ್ಲ ಎಂಬ ಕಾರಣಕ್ಕೆ ಅವರು ಕಾರು ನಿಲ್ದಾಣದಲ್ಲಿ ಕಾರು ನಿಲ್ಲಿಸುವ ಬಗ್ಗೆ ಅವರ ಸಂಘಕ್ಕೆ ದೂರು ನೀಡಿದ್ದರು. ಇದೇ ದ್ವೇಷದಲ್ಲಿ ಯೋಗೀಶ್ ಪೂಜಾರಿ ಇತರರೊಂದಿಗೆ ಸೇರಿ 2017ರ ಮಾ.7ರಂದು ರಾಜೇಶ್ ಶೆಟ್ಟಿಗಾರ್ ವಾಸ ಮಾಡಿಕೊಂಡಿದ್ದ ಕುಂಜಿಬೆಟ್ಟು ಕಾನೂನು ಕಾಲೇಜು ಸಮೀಪದ ರೂಮಿಗೆ ಹೋಗಿ ಕೊಲೆಗೆ ಯತ್ನಿಸಿ ಮರಾಣಾಂತಿಕವಾಗಿ ಹಲ್ಲೆ ನಡೆಸಿದ್ದರು.
ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಎಸ್‌ಐ ಅನಂತಪದ್ಮನಾಭ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ದಿನೇಶ್ ಹೆಗ್ಡೆ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿ ಪ್ರಾಯ ಪಟ್ಟು, ಕಲಂ 307 ಅಡಿ 6 ತಿಂಗಳ ಸಾದಾ ಸಜೆ, 326ರಡಿ 3ವರ್ಷ ಗಳ ಜೈಲು ಶಿಕ್ಷೆ ಮತ್ತು ತಲಾ 20ಸಾವಿರ ರೂ. ದಂಡ, 504ರಡಿ 6 ತಿಂಗಳ ಹಾಗೂ 506ರಡಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಜಯರಾಮ್ ಶೆಟ್ಟಿ ವಾದಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.