ISRO: ನಾಳೆ ಚಂದ್ರಯಾನ-3 ಉಡಾವಣೆ
Team Udayavani, Jul 13, 2023, 7:18 AM IST
ನವದೆಹಲಿ: ಭಾರತದ ಬಹುನಿರೀಕ್ಷಿತ ಬಾಹ್ಯಾಕಾಶ ಯೋಜನೆ ಚಂದ್ರಯಾನ-3ರ ಉಡಾವಣೆಗೆ ದಿನಗಣನೆ ಆರಂಭವಾಗಿದ್ದು, ನಾಳೆ ಅಂದರೆ ಜುಲೈ 14ರ ಶುಕ್ರವಾರದಂದು ಶ್ರೀಹರಿಕೋಟದಿಂದ ಬಾಹ್ಯಾಕಾಶ ನೌಕೆ ನಭಕ್ಕೆ ಹಾರಲಿದೆ.
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 2.35ಕ್ಕೆ ಬಾಹ್ಯಾಕಾಶ ನೌಕೆ ಉಡಾವಣೆಗೊಳ್ಳಲಿದ್ದು, “ಫ್ಯಾಟ್ ಬಾಯ್’ ಎಂದು ಕರೆಯಲ್ಪಡುವ ಎಲ್‌ವಿಎಂ3- ಎಂ4 ರಾಕೆಟ್ ಉಪಗ್ರಹವನ್ನು ಹೊತ್ತೂಯ್ಯಲಿದೆ. ಇದು ಸತತ 6 ಯಶಸ್ವಿ ಕಾರ್ಯಾಚರಣೆಗಳನ್ನು ಪೂರೈಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಅಲ್ಲದೇ, ಜಿಯೋ ಟ್ರಾನ್ಸ್‌ಫರ್ ಆರ್ಬಿಟ್( ಜಿಟಿಒ)ಗೆ ಬಾಹ್ಯಾಕಾಶ ನೌಕೆಯನ್ನು ಉಡಾವಣೆಗೊಳಿಸಲು ಉದ್ದೇಶಿಸಿರುವ, ಎಲ್‌ವಿಎಂ3- ಎಂ4 ನಡೆಸುತ್ತಿರುವ 4ನೇ ಕಾರ್ಯಾಚರಣೆ ಇದಾಗಿದ್ದು, ಚಂದ್ರಯಾನ -3ರ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರ್ಪಡೆಗೊಳಿಸಲಿದೆ ಎಂದು ಇಸ್ರೋ ವಿಶ್ವಾಸ ವ್ಯಕ್ತಪಡಿಸಿದೆ.
ಈಗಾಗಲೇ ಉಡಾವಣಾ ಪೂರ್ವಾಭ್ಯಾಸವನ್ನು ಇಸ್ರೋ ಪೂರ್ಣಗೊಳಿಸಿದೆ. ಚಂದ್ರಯಾನ-2ರಲ್ಲಿ ಆದಂಥ ತಾಂತ್ರಿಕ ದೋಷಗಳನ್ನು ಪರಿಹರಿಸಿ ಚಂದ್ರಯಾನ-3ನ್ನು ಸಜ್ಜುಗೊಳಿಸಿದೆ. ಉಪಗ್ರಹ ಉಡಾವಣೆಯಾದ ಬಳಿಕ ಆಗಸ್ಟ್ 23-24ರ ವೇಳೆಗೆ ಚಂದ್ರನ ಮೇಲ್ಮೆ„ನಲ್ಲಿ ಸುರಕ್ಷಿತ ಲ್ಯಾಂಡಿಂಗ್ ಸಾಧಿಸುವ ಗುರಿಯನ್ನು ಮಿಷನ್ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.