Online Fraud: ಪಾನ್ ಅಪ್‌ಡೇಟ್ ನೆಪ; ವ್ಯಕ್ತಿಯ ಖಾತೆಯಿಂದ 7.25 ಲಕ್ಷ ಗುಳುಂ!
Team Udayavani, Jul 13, 2023, 5:11 PM IST
ಸಾಗರ: ಬ್ಯಾಂಕ್‌ನಿಂದ ಪಾನ್ ಅಪ್‌ಡೇಟ್‌ಗೆ ಬಂದ ವಾಟ್ಸ್‌ಅಪ್ ಸಂದೇಶವೆಂದು ನಂಬಿ ಬ್ಯಾಂಕ್ ಗ್ರಾಹಕರೊಬ್ಬರು ತಮ್ಮ ಪಾನ್ ಹಾಗೂ ಆಧಾರ್ ಲಿಂಕ್ ಎಂದು ಭಾವಿಸಿ ಮಾಹಿತಿಗಳನ್ನು ತುಂಬಿದ ಹಿನ್ನೆಲೆಯಲ್ಲಿ ಅವರ ಬ್ಯಾಂಕ್ ಓವರ್ ಡ್ರಾಫ್ಟ್ ಖಾತೆಯಿಂದ 7.25 ಲಕ್ಷ ರೂ.ಗಳನ್ನು ಖದೀಮರು ವಂಚಿಸಿದ ಪ್ರಕರಣ ನಡೆದಿದೆ.
ನಗರದ ಕೆನರಾ ಬ್ಯಾಂಕ್‌ನ ಗ್ರಾಹಕರಾಗಿರುವ ಉದ್ಯಮಿ ಮಹಮ್ಮದ್ ಶರೀಫ್‌ರ ಮೊಬೈಲ್‌ಗೆ ಜುಲೈ 11 ರಂದು ಮಧ್ಯಾಹ್ನದ ವೇಳೆ ಎರಡೆರಡು ಸಂಖ್ಯೆಯಿಂದ ಪಾನ್ ಕಾರ್ಡ್ ಐಡಿಯ ಅಪ್‌ಡೇಟ್ ಮಾಡಲು ವಾಟ್ಸ್‌ಅಪ್ ಸಂದೇಶ ಬಂದಿದೆ. ಅದನ್ನು ನಿಜವೆಂದು ನಂಬಿದ ಶರೀಫ್ ಮಾಹಿತಿಗಳನ್ನು ತುಂಬಿದ್ದಾರೆ. ಈ ಹಂತದಲ್ಲಿ ಅವರ ಎರಡು ಮೊಬೈಲ್ ಸಂಖ್ಯೆಗಳಿಗೆ ಖಾತೆಯಿಂದ ಹಣ ಖರ್ಚಾದ ಸಂದೇಶ ಬಂದಿದೆ.
ಆಗ ಗಾಬರಿಗೊಂಡ ಶರೀಫ್ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಅವರು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು ತನಿಖೆ ನಡೆದಿದೆ.
ಇದನ್ನೂ ಓದಿ : Revanna..ನಿಂಬೆಹಣ್ಣು ಹಿಡ್ಕೊಳ್ಳೋ ಕೈಯಲ್ಲಿ ಕೊಬ್ಬರಿ ಯಾಕೆ?; ಸಿಎಂ ಸಿದ್ದರಾಮಯ್ಯ ಹಾಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Government Encourge: ಜ.1ರಿಂದ ಕಲಾವಿದರ ಮಾಸಾಶನ 3 ಸಾವಿರ ರೂ. ಏರಿಕೆ: ಸಚಿವ
Waqf Property: ಭೂಗಳ್ಳರಿಗೆ ರಕ್ಷಣೆ ಕೊಟ್ಟರೆ ಬೆಲೆ ತೆರಬೇಕಾದೀತು: ಎಚ್.ಡಿ.ಕುಮಾರಸ್ವಾಮಿ
Shivamogga: ಆತಂಕ ತಂದಿದ್ದ ʼಚೀನಾ ಬೆಳ್ಳುಳ್ಳಿ’; ಸುರಕ್ಷಿತ ಎಂದ ಲ್ಯಾಬ್ ವರದಿ
MUDA Scam Case: 30 ತಾಸು ಇ.ಡಿ. ಕಾರ್ಯಾಚರಣೆ
Revenue: ನೋಂದಣಿ, ಮುದ್ರಾಂಕ ಇಲಾಖೆ ಆದಾಯ ಕಡಿಮೆ: ಸಿಎಂ ಸಿದ್ದರಾಮಯ್ಯ ಗರಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.