Bawaal: “ಬವಾಲ್”ನಲ್ಲಿ 2ನೇ ಮಹಾಯುದ್ಧದ ಉಲ್ಲೇಖ; ಸತ್ಯವನ್ನು ರಿವೀಲ್ ಮಾಡಿದ ನಿರ್ದೇಶಕ
Team Udayavani, Jul 13, 2023, 5:56 PM IST
ಮುಂಬಯಿ: ʼದಂಗಲ್ʼ ನಿರ್ದೇಶಕ ನಿತೇಶ್ ತಿವಾರಿ ಅವರ ಮುಂಬರುವ ‘ಬವಾಲ್’ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಟ್ರೇಲರ್ ರಿಲೀಸ್ ಆದ ದಿನದಿಂದ ಕೆಲವೊಂದು ವಿಚಾರಗಳು ನೆಟ್ಟಿಗರನ್ನು ಕಾಡಿದೆ.
ವರುಣ್ ಧವನ್ – ಜಾಹ್ನವಿ ಕಪೂರ್ ಮೊದಲ ಬಾರಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ʼಬವಾಲ್ʼ ಈಗಾಗಲೇ ಟ್ರೇಲರ್ ಹಾಗೂ ಹಾಡುಗಳಿಂದ ಗಮನ ಸೆಳೆದಿದೆ.
ಸಿನಿಮಾದಲ್ಲಿ ವರುಣ್ ಧವನ್ ಹಿಸ್ಟರಿ ಟೀಚರ್ ಆಗಿದ್ದಾರೆ. ಜಾಹ್ನವಿ ಕಪೂರ್ ಹಾಗೂ ನಾಯಕ ನಟ ವರುಣ್ ಧವನ್ ಇಟಲಿಗೆ ಶಿಫ್ಟ್ ಆಗುವ ಬಗ್ಗೆ ಟ್ರೇಲರ್ ನಲ್ಲಿ ತೋರಿಸಲಾಗಿದೆ. ಇದಲ್ಲದೇ ಗ್ಯಾಸ್ ಚೇಂಬರ್ ನಲ್ಲಿ ನಾಯಕಿ ಸಿಲುಕುವ ದೃಶ್ಯವೊಂದನ್ನು ತೋರಿಸಲಾಗಿದೆ. ಈ ದೃಶ್ಯ ಅನೇಕ ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ. ಇದು ಇಟಲಿಯಲ್ಲಿ ಎರಡನೇ ಮಹಾಯುದ್ಧದ ವೇಳೆ ನಡೆದ ಗ್ಯಾಸ್ ಚೇಂಬರ್ ನರಮೇಧದ ಸುತ್ತ ಸಾಗುವ ಕಥೆಯೆಂದು ಅನೇಕರು ಹೇಳಿದ್ದಾರೆ
ಇದೀಗ ಸ್ವತಃ ನಿರ್ದೇಶಕರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “ಗಲಾಟಾ ಪ್ಲಸ್” ನಲ್ಲಿನ ಸಂದರ್ಶನದಲ್ಲಿ ಯಾಕೆ ಎರಡನೇ ವಿಶ್ವ ಯುದ್ಧದ ಬಗ್ಗೆ ಸಿನಿಮಾದಲ್ಲಿ ಸೇರಿಸಲಾಗಿದೆ ಎನ್ನುವುದರ ಬಗ್ಗೆ ಹೇಳಿದ್ದಾರೆ.
“ನಾನು ಯಾವಾಗಲೂ ಪ್ರೇಕ್ಷಕರಿಗೆ ಹೊಸತು ಹಾಗೂ ವಿಭಿನ್ನವಾದದ್ದನ್ನು ನೀಡಲು ಬಯಸುತ್ತೇನೆ” ಎಂದಿದ್ದಾರೆ.
ಭಾರತ ಭಾಗವಹಿಸಿರುವ ಯುದ್ದವನ್ನು ಯಾಕೆ ಆಯ್ದುಕೊಂಡಿಲ್ಲ ಎಂದು ನಿರ್ದೇಶಕರ ಬಳಿ ಕೇಳಿದಾಗ “ಭಾರತೀಯ ಐತಿಹಾಸಿಕ ಉಲ್ಲೇಖವನ್ನು ಸೇರಿಸಿದರೆ ಅದನ್ನು ಮಾಡುವುದು ತುಂಬಾ ಸುಲಭವಾಗುತ್ತದೆ. ಬದಲಾಗಿ ನಾನು ವಿಭಿನ್ನವಾದ ಮಾರ್ಗವನ್ನು ಅನುಸರಿಸಿಕೊಂಡೆ. ಎರಡನೇ ಮಹಾಯುದ್ಧವನ್ನು ಶಾಲೆಯಲ್ಲಿ ಕಲಿಸುವುದಕ್ಕಿಂತ ಹೆಚ್ಚಾಗಿ, ನಮ್ಮ ಯಾವುದೇ ಐತಿಹಾಸಿಕ ವಿಷಯವನ್ನು ಕಲಿಸಬಹುದಿತ್ತು. ನಾನು ಯಾವಾಗಲೂ ಪ್ರೇಕ್ಷಕರಿಗೆ ಕಥೆ ಹಾಗೂ ದೃಶ್ಯದ ವಿಚಾರದಲ್ಲಿ ಹೊಸತನ್ನು ನೀಡಲು ಹಂಬಲಿಸುವವನು” ಎಂದು ಹೇಳಿದರು.
ಇದನ್ನೂ ಓದಿ: Masala dosa: ಮಸಾಲೆ ದೋಸೆಯೊಂದಿಗೆ ಸಾಂಬಾರ್ ನೀಡದ್ದಕ್ಕೆ ರೆಸ್ಟೋರೆಂಟ್ ಗೆ 3,500 ರೂ ದಂಡ
“ಭಾರತ ಭಾಗವಾಗಿರುವ ಯುದ್ಧಗಳ ಬಗ್ಗೆ ಸಿನಿಮಾ ಮಾಡಲು ಅನೇಕ ನಿರ್ದೇಶಕರು ಪ್ರಯತ್ನಿಸಿದ್ದಾರೆ. ಈ ವಿಚಾರವನ್ನು ಮತ್ತೆ ತೆರೆಯ ಮೇಲೆ ಹೊಸದಾಗಿ ತರಲು ಸಾಧ್ಯವಿಲ್ಲ. ಟ್ರೇಲರ್ ಹತ್ಯಾಕಾಂಡದ ಎರಡು ಶಾಟ್‌ಗಳನ್ನು ಮಾತ್ರ ತೋರಿಸಿದ್ದೇವೆ” ಎಂದರು.
“ಭಾರತದ ಭಾಗವಾಗಿರುವ ಯುದ್ಧಗಳ ಬಗ್ಗೆ ಅನೇಕ ಭಾರತೀಯ ನಿರ್ದೇಶಕರು ಸಿನಿಮಾ ಮಾಡಲು ಪ್ರಯತ್ನಿಸಿದ್ದಾರೆ. ಈ ವಿಷಯದಲ್ಲಿ ಮತ್ತೆ ತೆರೆಯ ಮೇಲೆ ಹೊಸದನ್ನು ತರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
“ಈ ಹಿಂದಿನ ಸ್ಕ್ರಿಪ್ಟ್ ಜಲಿಯನ್ ವಾಲಾಬಾಗ್ ದುರಂತದ ಬಗ್ಗೆ ಉಲ್ಲೇಖಿಸುವ ಕುರಿತು ಇತ್ತು.ಆದರೆ ವಿಕ್ಕಿ ಕೌಶಲ್ ಅವರ ʼಸರ್ದಾರ್ ಉದಾಮ್ʼ ಬಿಡುಗಡೆಯಾದ ನಂತರ ಅದನ್ನು ತೆಗೆದು ಹಾಕುವ ನಿರ್ಧಾರಕ್ಕೆ ಬರಲಾಯಿತು. ಯಾಕೆಂದರೆ ಅದು ಮುಂದೆ ಮತ್ತೆ ಬಂದರೆ ಹೊಸ ಕಂಟೆಂಟ್ ಅಲ್ಲ” ಎಂದರು.
ವರುಣ್ ಮತ್ತು ಜಾನ್ವಿ ನಟಿಸಿರುವ “ಬವಾಲ್” ಸಿನಿಮಾವನ್ನು ಸಾಜಿದ್ ನಾಡಿಯಾಡ್ವಾಲಾ ಮತ್ತು ಅಶ್ವಿನಿ ಅಯ್ಯರ್ ತಿವಾರಿ ನಿರ್ಮಿಸಿದ್ದಾರೆ. ಈ ಸಿನಿಮಾ ಜು.21 ರಂದು ಅಮೇಜಾನ್ ಪ್ರೈಮ್ ನಲ್ಲಿ ಪ್ರಿಮಿಯರ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.